Advertisement
ಈ ಹಿಂದಿನಂತೆ ಮನಿಯಾರ್ಡರ್ ಮೂಲಕ ಮಾಸಾಶನ ನೀಡುವ ಕ್ರಮ ಕೊನೆಗೊಂಡಿದೆ. ಆಧಾರ್ ಸಂಖ್ಯೆ ಜೋಡಣೆ ಹೊಂದಿದ ಬ್ಯಾಂಕ್ ಖಾತೆ ಅಥವಾ ಅಂಚೆ ಖಾತೆ ಇಲ್ಲದ ಫಲಾನುಭವಿಗಳಿಗೆ ಮಾಸಾಶನ ತಡೆಹಿಡಿಯಲು ಸಾಮಾಜಿಕ ಭದ್ರತೆ ಹಾಗೂ ಪಿಂಚಣಿಗಳ ನಿರ್ದೇಶನಾಲಯ ನಿರ್ಧರಿಸಿದೆ.
Related Articles
ಮಾಸಾಶನ ಕೈಗೆ ಸಿಗದೆ ಇದ್ದರೂ ಮಾಸಾಶನ ಖಾತೆ ದಿಢೀರ್ ರದ್ದಾಗುವುದಿಲ್ಲ. ಈ ತಿಂಗಳಿಂದ ಮಾಸಾಶನ ಖಾತೆಯನ್ನು ತಾತ್ಕಾಲಿಕವಾಗಿ ರದ್ದುಗೊಳಿಸಲಾಗುವುದು. ಡಿಸೆಂಬರ್ ಒಳಗೆ ಬ್ಯಾಂಕ್ ಅಥವಾ ಅಂಚೆ ಖಾತೆ ಮಾಡಿಸಿ, ತಹಶೀಲ್ದಾರ್ ಕಚೇರಿ ಮೂಲಕ ಮಾಸಾಶನ ಖಾತೆಗೆ ಜೋಡಣೆ ಮಾಡಿದರೆ ಬಾಕಿ ಇರುವ ಮಾಸಾಶನವನ್ನೂ ಸೇರಿಸಿ ಖಾತೆಗೆ ಜಮೆ ಮಾಡಲಾಗುವುದು. ಒಂದು ವೇಳೆ ಡಿಸೆಂಬರ್ ವೇಳೆಗೂ ಬ್ಯಾಂಕ್ ಖಾತೆ ಮಾಡಿಸಿಕೊಳ್ಳದೆ ಇದ್ದರೆ ಜನವರಿ 2023ರಿಂದ ಮಾಸಾಶನ ಖಾತೆಯೇ ರದ್ದಾಗಲಿದೆ. ಮುಂದೆ ಮಾಸಾಶನ ಪಡೆಯಲು ಫಲಾನುಭವಿಗಳು ಬ್ಯಾಂಕ್ ಖಾತೆಯೊಂದಿಗೆ ಹೊಸದಾಗಿಯೇ ಅರ್ಜಿ ಸಲ್ಲಿಸಬೇಕಾಗುತ್ತದೆ ಎನ್ನುತ್ತಾರೆ ಸಾಮಾಜಿಕ ಭದ್ರತಾ ಯೋಜನೆಯ ಅಧಿಕಾರಿಗಳು.
Advertisement
ಸಾಮಾಜಿಕ ಭದ್ರತಾ ಯೋಜನೆ ಫಲಾನುಭವಿಗಳಿಗೆ ಬ್ಯಾಂಕ್ ಖಾತೆ ಮಾಡಿಸಿಕೊಳ್ಳಲು ನೀಡಲಾಗಿದ್ದ ಕೊನೆಯ ಗಡುವು ಸೆ.15ಕ್ಕೆ ಮುಗಿದಿದೆ. ಹೀಗಾಗಿ ಫಲಾನುಭವಿಗಳಿಗೆ ಅಕ್ಟೋಬರ್ ತಿಂಗಳಲ್ಲಿ ಮಾಸಾಶನ ಸಿಗುವುದಿಲ್ಲ. ಮನಿಯಾರ್ಡರ್ ಮೂಲಕ ಮಾಸಾಶನ ಪಡೆಯುವವರು ಡಿಸೆಂಬರ್ ಒಳಗೆ ಬ್ಯಾಂಕ್ ಖಾತೆ ಮಾಡಿಸಿಕೊಂಡರೆ ಮಾಸಾಶನ ಮುಂದುವರಿಯುತ್ತದೆ. ಇಲ್ಲದಿದ್ದರೆ ಮಾಸಾಶನ ಖಾತೆಯೇ ರದ್ದಾಗುತ್ತದೆ.– ಪುಷ್ಪಾ ಕೆ., ಸಹಾಯಕ ನಿರ್ದೇಶಕರು, ಸಾಮಾಜಿಕ ಭದ್ರತಾ ಯೋಜನೆ, ದಾವಣಗೆರೆ
– ಎಚ್.ಕೆ. ನಟರಾಜ