Advertisement
ಈ ಖಾದ್ಯವು ಆರೋಗ್ಯಕರವಾಗಿದ್ದು ,ಮಕ್ಕಳಿಗಂತೂ ತುಂಬಾನೇ ಇಷ್ಟ ಪಡುವ ರೆಸಿಪಿಯಾಗಿದೆ. ಹಾಗಿದ್ದರೆ ಇನ್ನೇಕೆ ತಡ ಮನೆಯಲ್ಲಿ ರುಚಿಕರವಾದ “”ಮಸಾಲ ಪಡ್ಡು ” ಹಾಗೂ “ಶೇಂಗಾ ಚಟ್ನಿ ” ಯನ್ನು ಮಾಡಿ ಸವಿಯಿರಿ.
ಬೇಕಾಗುವ ಸಾಮಗ್ರಿಗಳು
ಬೆಳ್ತಿ ಗೆ ಅಕ್ಕಿ 2 ಕಪ್, ಉದ್ದಿನ ಬೇಳೆ 3/4 ಕಪ್ ಕಡ್ಲೆ ಬೇಳೆ 2 ಚಮಚ, ಮೆಂತೆ 1 ಚಮಚ, ಅವಲಕ್ಕಿ 1/4 ಕಪ್,ತೆಂಗಿನೆಣ್ಣೆ 2 ಚಮಚ, ಹಸಿಮೆಣಸಿನ ಕಾಯಿ 2, ಕರಿಬೇವು 1 ಗರಿ, ಈರುಳ್ಳಿ 3, ರುಚಿಗೆ ತಕ್ಕಷ್ಟು ಉಪ್ಪು. ತಯಾರಿಸುವ ವಿಧಾನ
ಮೊದಲಿಗೆ ಒಂದು ಪಾತ್ರೆಗೆ ಅಕ್ಕಿ, ಉದ್ದಿನ ಬೇಳೆ, ಕಡ್ಲೆ ಬೇಳೆ ಹಾಗೂ ಮೆಂತೆಯನ್ನು ಹಾಕಿ ಸುಮಾರು 6 ರಿಂದ 7 ಗಂಟೆಗಳ ವರೆಗೆ ನೆನೆಸಿಟ್ಟುಕೊಳ್ಳಿ. ಅವಲಕ್ಕಿ ಯನ್ನು ಬೇರೆ ಪಾತ್ರೆಯಲ್ಲಿ 10 ನಿಮಿಷಗಳ ಕಾಲ ನೆನೆಸಿರಿ, ತದನಂತರ ಮಿಕ್ಸಿ ಜಾರಿಗೆ ನೆನೆಸಿಟ್ಟ ಅಕ್ಕಿ -ಬೇಳೆ ಹಾಗೂ ಅವಲಕ್ಕಿಯನ್ನು ಹಾಕಿ ನುಣ್ಣಗೆ ರುಬ್ಬಿರಿ. ದೋಸೆ ಹಿಟ್ಟಿಗಿಂತ ಸ್ವಲ್ಪ ಗಟ್ಟಿಯಾಗಿರಬೇಕು.ರುಬ್ಬಿಟ್ಟ ಹಿಟ್ಟಿಗೆ ಉಪ್ಪನ್ನು ಹಾಕಿ ಸುಮಾರು 8 ರಿಂದ 10 ಗಂಟೆಗಳ ಕಾಲದವರೆಗೆ ಬಿಟ್ಟುಬಿಡಿ.
ಒಂದು ಬಾಣಲೆಗೆ ಎಣ್ಣೆ, ಸಣ್ಣಗೆ ಹಚ್ಚಿದ ಹಸಿಮೆಣಸು, ಕರಿಬೇವು ಹಾಗೂ ಈರುಳ್ಳಿಯನ್ನು ಹಾಕಿ ಸ್ವಲ್ಪ ಹೊತ್ತು ಹರಿಯಿರಿ. ತಣ್ಣಗೆ ಆದ ಮೇಲೆ ಕೊತ್ತಂಬರಿ ಸೊಪ್ಪು ಹಾಕಿ ರುಬ್ಬಿಟ್ಟ ಹಿಟ್ಟಿಗೆ ಹಾಕಿ ಕಲಸಿರಿ. ಓಲೆಯ ಮೇಲೆ ಪಡ್ಡು ಹಂಚನ್ನು ಇಟ್ಟುಕೊಳ್ಳಿ. ಬಿಸಿಯಾದ ನಂತರ ಸ್ವಲ್ಪ ಎಣ್ಣೆ ಹಾಕಿ ಮಾಡಿಟ್ಟ ಹಿಟ್ಟನ್ನು ಎಲ್ಲಾ ರಂಧ್ರದೊಳಗೆ ಮೂಕ್ಕಾಲು ಭಾಗದಷ್ಟು ಹಾಕಿರಿ (ಯಾಕೆಂದರೆ ಅದು ಬೆಂದ ನಂತರ ಅವು ಅರಳುತ್ತದೆ) ಒಂದು ಬದಿ ಬೆಂದ ನಂತರ ಮತ್ತೂಂದು ಬದಿ ಮುಗುಚಿ ಬೇಯಿಸಿರಿ. ಬಿಸಿ-ಬಿಸಿಯಾದ ಮಸಾಲ ಪಡ್ಡು ರೆಡಿಯಾಗಿದೆ.
Advertisement
ಶೇಂಗಾ ಚಟ್ನಿಬೇಕಾಗುವ ಸಾಮಗ್ರಿಗಳು
ಶೇಂಗಾ 1 ಕಪ್,ತೆಂಗಿನೆಣ್ಣೆ 1 ಚಮಚ, ಹಸಿಮೆಣಸು 5 ಬೆಳ್ಳುಳ್ಳಿ 4 ಎಸಳು, ಕರಿಬೇವು 1 ಗರಿ, ಕೊತ್ತಂಬರಿ ಸೊಪ್ಪು ಸ್ವಲ್ಪ, ಹುಣಸೇ ಹಣ್ಣು ಸ್ವಲ್ಪ, ರುಚಿಗೆ ತಕ್ಕಷ್ಟು ಉಪ್ಪು. ಒಗ್ಗರಣೆಗೆ:
ತೆಂಗಿನೆಣ್ಣೆ 1 ಚಮಚ, ಸಾಸಿವೆ 1 ಚಮಚ ,ಉದ್ದಿನ ಬೇಳೆ 1 ಚಮಚ, ಕರಿಬೇವು 1 ಗರಿ ಒಣಮೆಣಸು 2 ತಯಾರಿಸುವ ವಿಧಾನ
ಒಂದು ಬಾಣಲೆಗೆ ಹಸಿ ಶೇಂಗಾವನ್ನು ಹಾಕಿ ಕೆಂಪಾಗುವ ತನಕ ಹುರಿದು ಒಂದು ಪಾತ್ರೆಗೆ ತೆಗೆದಿಟ್ಟುಕೊಳ್ಳಿ (ತಣ್ಣಗಾದಬಳಿಕ ಬೀಜದ ಸಿಪ್ಪೆಯನ್ನು ತೆಗೆದಿಡಿ). ಆ ಮೇಲೆ ಬಾಣಲೆಗೆ ಎಣ್ಣೆ ,ಹಸಿಮೆಣಸು, ಬೆಳ್ಳುಳ್ಳಿ , ಕರಿಬೇವು ಹಾಕಿ ಸ್ವಲ್ಪ ಹೊತ್ತು ಹುರಿಯಿರಿ ನಂತರ ಇದನ್ನು ಹುರಿದಿಟ್ಟ ಶೇಂಗಾ ಬೀಜ ಜೊತೆಗೆ ಮಿಕ್ಸಿ ಜಾರಿಗೆ ಹಾಕಿ ಉಪ್ಪುನ್ನು ಸೇರಿಸಿ ರುಬ್ಬಿರಿ. ನಂತರ ಮೇಲಿರುವ ಒಗ್ಗರಣೆ ಸಾಮಗ್ರಿಯನ್ನು ಹಾಕಿ ಒಗ್ಗರಣೆ ಹಾಕಿರಿ.