ದೋಸೆ ಅಕ್ಕಿ -2.5 ಕಪ್ ಅಥವಾ ಅರ್ಧ ಕೆಜಿ.
ಹಸಿ ತೆಂಗಿನ ಕಾಯಿ ತುರಿ-ಅರ್ಧ ಕಪ್
ಬ್ಯಾಡ್ಗಿ ಮೆಣಸಿನ ಕಾಯಿ-6 ರಿಂದ 7
ಕೊತ್ತಂಬರಿ ಬೀಜ -4 ಚಮಚ
ಈರುಳ್ಳಿ -2
ಉಪ್ಪು-ರುಚಿಗೆ ತಕ್ಕಷ್ಟು
ಕೊತ್ತಂಬರಿ ಸೊಪ್ಪು-2ರಿಂದ 3 ದೊಡ್ಡ ಚಮಚ
ಎಣ್ಣೆ -ದೋಸೆಗಳನ್ನು ಮಾಡಲು
Advertisement
ಮಾಡುವ ವಿಧಾನದೋಸೆ ಅಕ್ಕಿಯನ್ನು ಕನಿಷ್ಠ 4 ಗಂಟೆಗಳ ಕಾಲ ಅಥವಾ ರಾತ್ರಿಯಿಡೀ ನೆನೆಸಿ ಇಡಿ. ನೆನೆಸಿದ ಅಕ್ಕಿಯ ಜತೆಗೆ ಬ್ಯಾಡ್ಗಿ ಮೆಣಸಿನ ಕಾಯಿ, ಕೊತ್ತಂಬರಿ ಬೀಜ, ತೆಂಗಿನತುರಿ, ಉಪ್ಪು ಹಾಗೂ ಈರುಳ್ಳಿಯನ್ನು ಹಾಕಿ. ಸ್ವಲ್ಪ ನೀರನ್ನು ಹಾಕಿ ಅಕ್ಕಿಯನ್ನು ನುಣ್ಣಗೆ ರುಬ್ಬಿ. ಹಿಟ್ಟನ್ನು ಒಂದು ಪಾತ್ರೆಗೆ ಹಾಕಿ ಹಾಗೂ ಸಾಕಷ್ಟು ನೀರು ಹಾಕಿ ಹಿಟ್ಟಿನ ಹದವನ್ನು ನೀರಾಗಿ ಮಾಡಿಕೊಳ್ಳಿ. ತಯಾರಿಸಿದ ಹಿಟ್ಟಿಗೆ 2ರಿಂದ 3 ದೊಡ್ಡ ಚಮಚ ಸಣ್ಣಗೆ ಹೆಚ್ಚಿದ ಕೊತ್ತಂಬರಿ ಸೊಪ್ಪನ್ನು ಹಾಕಿ. ಸ್ವಲ್ಪ ಎಣೆಯನ್ನು ಬಿಸಿ ಕಾವಲಿಯ ಮೇಲೆ ಸವರಿ ಮಾಡಿದ ದೋಸೆ ಹಿಟ್ಟನ್ನು ತೆಳ್ಳಗೆ ಹೊಯ್ಯಿರಿ. ದೊಡ್ಡ ಉರಿಯಲ್ಲಿ ಚೆನ್ನಾಗಿ ಕಾಯಿಸಿ ದೋಸೆಯನ್ನು ತೆಗೆಯಿರಿ.
ಬಾಳೆಹಣ್ಣು -4
ಬೆಲ್ಲ -ಕಾಲು ಕಪ್
ತೆಂಗಿನ ಕಾಯಿ-ಅರ್ಧ ಕಪ್
ಏಲಕ್ಕಿ ಪುಡಿ-ಅರ್ಧ ಚಮಚ ಫುಡ್ಡಿಂಗ್ ಮಾಡುವ ವಿಧಾನ
ಬಾಳೆಹಣ್ಣು – ಬೆಲ್ಲದ ಮಿಶ್ರಣ ಮಾಡಲು 4 ಕಳಿತ ಬಾಳೆಹಣ್ಣುಗಳನ್ನು ಒಂದು ಪಾತ್ರೆಯಲ್ಲಿ ಸಿಪ್ಪೆ ತೆಗೆದು ಹಾಕಿ ಹಾಗೂ ಅದಕ್ಕೆ ಕಾಲು ಕಪ್ ಹುಡಿ ಮಾಡಿದ ಬೆಲ್ಲವನ್ನು ಹಾಕಿಕೊಳ್ಳಿ. ಚೆನ್ನಾಗಿ ಕಲಸಿಕೊಳ್ಳಿ. ಬಾಳೆಹಣ್ಣು ಹಾಗೂ ಬೆಲ್ಲವನ್ನು ಚೆನ್ನಾಗಿ ಮ್ಯಾಶ್ ಮಾಡಿಕೊಳ್ಳುತ್ತಿರಿ.ಅರ್ಧ ಚಮಚ ಏಲಕ್ಕಿ ಪುಡಿ ಹಾಕಿ ಪುನಃ ಚೆನ್ನಾಗಿ ಕಲಸಿಕೊಳ್ಳಿ. ಈ ಬಾಳೆಹಣ್ಣು – ಬೆಲ್ಲದ ಮಿಶ್ರಣವನ್ನು ಮಸಾಲೆ ನೀರುದೋಸೆಗಳ ಜತೆ ಬಡಿಸಿ.
Related Articles
Advertisement