Advertisement

ಭಾರತದ ಚಾಂಪಿಯನ್‌ ಬಾಕ್ಸರ್‌ ಮೇರಿ ಕೋಮ್‌ ಕಾಮನ್ವೆಲ್ತ್‌ ಗೇಮ್ಸ್‌ನಿಂದ ಔಟ್‌

11:21 PM Jun 10, 2022 | Team Udayavani |

ಹೊಸದಿಲ್ಲಿ: ಭಾರತದ ಚಾಂಪಿಯನ್‌ ಬಾಕ್ಸರ್‌ ಎಂ.ಸಿ. ಮೇರಿ ಕೋಮ್‌ ಅವರ ಬರ್ಮಿಂಗ್‌ಹ್ಯಾಮ್‌ ಕಾಮನ್ವೆಲ್ತ್‌ ಗೇಮ್ಸ್‌ ಕನಸು ಛಿದ್ರಗೊಂಡಿದೆ. ಆಯ್ಕೆ ಟ್ರಯಲ್ಸ್‌ ವೇಳೆ ಮಂಡಿಗೆ ಬಲವಾದ ಏಟು ಅನುಭವಿಸಿದ ಅವರು ಗೇಮ್ಸ್‌ನಿಂದ ಹೊರಗುಳಿಯುವ ಸಂಕಟಕ್ಕೆ ಸಿಲುಕಿದರು.

Advertisement

6 ಬಾರಿಯ ವಿಶ್ವ ಚಾಂಪಿಯನ್‌ ಮೇರಿ ಕಾಮ್‌ 48 ಕೆಜಿ ವಿಭಾಗದ ಸೆಮಿಫೈನಲ್‌ನ ಮೊದಲ ಸುತ್ತಿನಲ್ಲಿ ಹರ್ಯಾಣದ ನೀತು ವಿರುದ್ಧ ಸ್ಪರ್ಧಿಸುತ್ತಿದ್ದ ವೇಳೆ ಈ ಆಘಾತಕ್ಕೆ ಒಳಗಾದರು. ಎಡಗಾಲು ಉಳುಕಿದ ಪರಿಣಾಮ ಮಂಡಿಗೆ ತೀವ್ರವಾದ ಏಟು ಬಿತ್ತು. ಇದು ಬಹಳ ಗಂಭೀರ ಸ್ವರೂಪದ್ದಾದ್ದರಿಂದ ಚೇತರಿಕೆಗೆ ಬಹಳ ಸಮಯ ತಗಲುತ್ತದೆ ಎಂದು ಬಾಕ್ಸಿಂಗ್‌ ಫೆಡರೇಶನ್‌ ಆಫ್ ಇಂಡಿಯಾ ತನ್ನ ಪ್ರಕಟನೆಯಲ್ಲಿ ತಿಳಿಸಿದೆ.

39 ವರ್ಷದ ಮೇರಿ ಕೋಮ್‌ ಆಯ್ಕೆ ಟ್ರಯಲ್ಸ್‌ನ ಮೊದಲ ಸುತ್ತಿನಲ್ಲೇ ಎಡವಿದರು. ಬಳಿಕ ವೈದ್ಯಕೀಯ ಚಿಕಿತ್ಸೆ ಪಡೆದು ಮರಳಿ ಹೋರಾಟಕ್ಕೆ ಇಳಿದರೂ ಒಂದೆರಡು ಪಂಚ್‌ಗಳ ಬಳಿಕ ನೋವು ತೀವ್ರಗೊಂಡಿತು. ಸ್ಪರ್ಧೆಯಿಂದ ಹಿಂದೆ ಸರಿದರು. ನೀತು ಅವರನ್ನು ವಿಜೇತೆ ಎಂದು ಘೋಷಿಸಲಾಯಿತು.

ಮೇರಿ ಕೋಮ್‌ ಕಾಮನ್ವೆಲ್ತ್‌ ಗೇಮ್ಸ್‌ ವನಿತಾ ಬಾಕ್ಸಿಂಗ್‌ನಲ್ಲಿ ಚಿನ್ನದ ಪದಕ ಗೆದ್ದ ಭಾರತದ ಮೊದಲ ಸಾಧಕಿ ಎಂಬ ಹೆಗ್ಗಳಿಕೆ ಹೊಂದಿದ್ದಾರೆ. 2018ರ ಗೋಲ್ಡ್‌ ಕೋಸ್ಟ್‌ ಗೇಮ್ಸ್‌ನಲ್ಲಿ ಮೇರಿ ಈ ಸಾಧನೆಗೈದಿದ್ದರು.

ಫೈನಲ್‌ಗೆ ಜರೀನ್‌, ಲವ್ಲಿನಾ
ವಿಶ್ವ ಚಾಂಪಿಯನ್‌ ನಿಖತ್‌ ಜರೀನ್‌ (50 ಕೆಜಿ) ಮತ್ತು ಟೋಕಿಯೊ ಒಲಿಂಪಿಕ್ಸ್‌ ಕಂಚಿನ ಪದಕ ವಿಜೇತೆ ಲವ್ಲಿನಾ ಬೊರ್ಗೊಹೇನ್‌ (70 ಕೆಜಿ) ಕಾಮನ್ವೆಲ್ತ್‌ ಗೇಮ್ಸ್‌ ಆಯ್ಕೆಯ ಬಾಗಿಲಲ್ಲಿ ನಿಂತಿದ್ದಾರೆ. ಇಬ್ಬರೂ ಅರ್ಹತಾ ಸುತ್ತಿನ ಫೈನಲ್‌ ತಲುಪಿದ್ದು, ಶನಿವಾರ ಈ ಸ್ಪರ್ಧೆ ನಡೆಯಲಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next