ಹೊಸದಿಲ್ಲಿ: ದೇಶೀಯ ಕಂಪೆನಿಯಾದ ಮಾರುತಿ ಸುಜುಕಿ, ಮುಂದಿನ ದಿನಗಳಲ್ಲಿ ಬಿಡುಗಡೆಯಾಗುವ ತನ್ನ ಸ್ವಿಫ್ಟ್ ಮಾದರಿಯ ಕಾರುಗಳು 1 ಲೀಟರ್ ಪೆಟ್ರೋಲ್‌ಗೆ 32 ಕಿ.ಮೀ. ಮೈಲೇಜ್ ನೀಡಬಲ್ಲವಾಗಿರುತ್ತವೆ ಎಂದು ಗ್ರೇಟರ್ ನೊಯ್ಡಾದಲ್ಲಿ ನಡೆಯುತ್ತಿರುವ ‘ಆಟೋ ಎಕ್ಸ್‌ಪೋ 2020’ ರಲ್ಲಿ ಪ್ರಕಟಿಸಿದೆ.
ಈಗ ಸ್ವಿಫ್ಟ್ನಲ್ಲಿರುವ 1.2 ಲೀಟರ್ ಇಂಜಿನ್‌ಗಳ ಸಾಮರ್ಥ್ಯ 105 ಪಿಎಸ್, 148 ಎನ್‌ಎಂ ಇದ್ದು, ಇದನ್ನು 119 ಪಿಎಸ್ ಹಾಗೂ 184 ಪಿಎಸ್‌ಗೆ ಹೆಚ್ಚಿಸಿ ಉತ್ತಮ ಮೈಲೇಜ್ ಸಾಧಿಸುವುದಾಗಿ ಕಂಪೆನಿ ತಿಳಿಸಿದೆ. ಈ ನಡುವೆ, ಕಿಯಾ ಕಂಪೆನಿಯು ಆಂಧ್ರಪ್ರದೇಶದಲ್ಲಿರುವ ತನ್ನ ತಯಾರಿಕಾ ಘಟಕವನ್ನು ತಮಿಳುನಾಡಿಗೆ ಸ್ಥಳಾಂತರಿಸಲಿದೆ ಎಂಬ ಮಾಧ್ಯಮ ವರದಿಗಳನ್ನು ಆಂಧ್ರಪ್ರದೇಶ ಸರಕಾರ ತಳ್ಳಿಹಾಕಿದೆ.