Advertisement

2020ಕ್ಕೆ ಬರಲಿದೆ ಮಾರುತಿ ಸುಜುಕಿಯ ಇಲೆಕ್ಟ್ರಿಕ್‌ ಕಾರು

08:42 AM Dec 22, 2017 | |

ಹೊಸದಿಲ್ಲಿ: ದೇಶದ ಪ್ರಮುಖ ಕಾರು ಉತ್ಪಾದಕ ಕಂಪೆನಿ ಮಾರುತಿ ಸುಜುಕಿ 2020ರ ಒಳಗಾಗಿ ತನ್ನ ಮೊದಲ ಇಲೆಕ್ಟ್ರಿಕ್‌ ಕಾರನ್ನು ಬಿಡುಗಡೆ ಮಾಡಲಿದೆ. ಸುಜುಕಿ ಟೊಯೋಟಾ ಸಹ ಭಾಗಿತ್ವದಲ್ಲಿ ಸಿದ್ಧಪಡಿಸಲಾಗಿರುವ ತಂತ್ರ ಜ್ಞಾನವನ್ನು ಅದಕ್ಕೆ ಅಳವಡಿಸಲಾಗುತ್ತದೆ ಎಂದು ಕಂಪೆನಿ ಅಧ್ಯಕ್ಷ ಆರ್‌.ಸಿ.ಭಾರ್ಗವ ಹೇಳಿದ್ದಾರೆ.

Advertisement

 ಮಾರುಕಟ್ಟೆಗೆ ಬರಲಿರುವ ವಿದ್ಯುತ್‌ ಕಾರು ಹ್ಯಾಚ್‌ಬ್ಯಾಕ್‌ ಅಥವಾ ಸೆಡಾನ್‌ ಆಗಲಿದೆಯೇ ಎಂಬ ಪ್ರಶ್ನೆಗೆ ಭಾರ್ಗವ “ಕಾದು ನೋಡಬೇಕಷ್ಟೇ’ ಎಂದು ತಿಳಿಸಿದರು. ಕಾರುಗಳಿಗೆ ಅಗತ್ಯವಾಗಿರುವ ಚಾರ್ಜಿಂಗ್‌ ಪಾಯಿಂಟ್‌ ಅನ್ನು ಮಾರುತಿ ಸುಜುಕಿ ವತಿಯಿಂದಲೇ ಆರಂಭಿಸುವ ಬಗ್ಗೆ ಪ್ರಸ್ತಾವಗಳಿವೆ. ಅದಕ್ಕೆ ವಿದೇಶಿ ಸಹಭಾಗಿತ್ವ ಹೊಂದಲು ಬಯಸುವುದಿಲ್ಲ. ಕಂಪೆನಿಯ ವಿದ್ಯುತ್‌ ಕಾರುಗಳು ದುಬಾರಿ ಆಗಲಾರವು ಎಂದರು ಭಾರ್ಗವ.

Advertisement

Udayavani is now on Telegram. Click here to join our channel and stay updated with the latest news.

Next