ನವದೆಹಲಿ: ಮಾರುತಿ ಸುಜುಕಿ ಶೀಘ್ರದಲ್ಲಿಯೇ ದೇಶೀಯ ಮಾರುಕಟ್ಟೆಯಲ್ಲಿ ಕಾರುಗಳ ಬೆಲೆಯನ್ನು ಏರಿಕೆ ಮಾಡುವುದಾಗಿ ತಿಳಿಸಿದೆ. ಕಾರು ನಿರ್ಮಾಣಕ್ಕೆ ಬೇಕಾಗಿರುವ ಎಲ್ಲ ಸಾಮಾಗ್ರಿಗಳ ಬೆಲೆ ಏರಿಕೆಯಾಗಿರುವ ಹಿನ್ನೆಲೆ ಕಾರಿನ ಬೆಲೆ ಏರಿಸುತ್ತಿರುವುದಾಗಿ ತಿಳಿಸಲಾಗಿದೆ.
ಎಷ್ಟು ಪ್ರಮಾಣದಲ್ಲಿ ಬೆಲೆ ಏರಿಕೆ ಮಾಡಲಾಗುವುದು ಎನ್ನುವುದನ್ನು ಸಂಸ್ಥೆ ಇನ್ನೂ ತಿಳಿಸಿಲ್ಲ.
ಪ್ರಸಕ್ತ ವರ್ಷ ಮಾರುತಿ ಸುಜುಕಿ ಬೆಲೆ ಏರಿಕೆ ಮಾಡುತ್ತಿರುವುದು ಎರಡನೇ ಬಾರಿಯಾಗಿದೆ. ಜನವರಿಯಲ್ಲೂ ನಿರ್ಮಾಣ ವೆಚ್ಚ ಹೆಚ್ಚಳದ ಕಾರಣವನ್ನೇ ಕೊಟ್ಟು ಸಂಸ್ಥೆಯು ಕಾರುಗಳ ಬೆಲೆಯಲ್ಲಿ ಶೇ.1.7 ಏರಿಕೆ ಮಾಡಿತ್ತು.
ಇದನ್ನೂ ಓದಿ:ಜಗನ್ ಸಂಪುಟದ ಎಲ್ಲಾ ಸಚಿವರು ನಾಳೆ ರಾಜೀನಾಮೆ; ಎ.11ಕ್ಕೆ ಸಂಪುಟ ಪುನರ್‌ರಚನೆ