ಹೊಸದಿಲ್ಲಿ: ಭಾರತದ ಪ್ರಸಿದ್ಧ ಮೋಟಾರು ವಾಹನ ಸಂಸ್ಥೆಯಾಗಿರುವ ಮಾರುತಿ ಸುಜುಕಿ ಸಂಸ್ಥೆಯು 2022ರ ಜನವರಿಯಿಂದ ತನ್ನ ಕಾರುಗಳ ಬೆಲೆ ಹೆಚ್ಚಿಸುವುದಾಗಿ ಹೇಳಿಕೊಂಡಿದೆ.
“ಕಳೆದ ಕೆಲವು ತಿಂಗಳುಗಳಿಂದ ಕಾರು ಉತ್ಪಾದನ ಸರಕುಗಳ ಮೇಲಿನ ವೆಚ್ಚ ಹೆಚ್ಚುತ್ತಲೇ ಸಾಗಿದೆ. ಅದರಿಂದಾಗಿ ಕಾರು ಉತ್ಪಾದನ ವೆಚ್ಚವೂ ಹೆಚ್ಚಿದೆ. ಆ ಹಿನ್ನೆಲೆಯಲ್ಲಿ ಕಾರುಗಳ ಬೆಲೆ ಹೆಚ್ಚಿಸಲಾಗುವುದು’ ಎಂದು ಸಂಸ್ಥೆ ಮಾಹಿತಿ ನೀಡಿದೆ.
ಹಾಗೆಯೇ ಸಂಸ್ಥೆಯು ಲಕ್ಸುರಿ ಎಸ್‌ಯುವಿ ತಯಾರಿಕೆಯತ್ತ ಗಮನ ಹರಿಸಿದ್ದು, 2022ರಲ್ಲಿ 10 ಲಕ್ಷ ರೂ.ನಿಂದ 20 ಲಕ್ಷ ರೂ. ಮೌಲ್ಯದ 3 ಲಕ್ಸುರಿ ಕಾರುಗಳನ್ನು ಹೊರಬಿಡುವ ಯೋಜನೆ ಹಾಕಿಕೊಂಡಿದೆ ಎಂದು ಸಂಸ್ಥೆಯ ಮೂಲಗಳು ತಿಳಿಸಿವೆ.
ಇದನ್ನೂ ಓದಿ:ದೆಹಲಿ: ಶಾಲೆಗಳಿಗೆ ಮತ್ತೆ ಬೀಗ! ಮಕ್ಕಳನ್ನು ಶಾಲೆಗೆ ಕಳುಹಿಸಲು ಹೆತ್ತವರ ಹಿಂದೇಟು
ವಿಶ್ವದೆಲ್ಲೆಡೆ ಸೆಮಿಕಂಡಕ್ಟರ್ ಕೊರತೆಯು ಆಟೋಮೊಬೈಲ್ ಸಂಸ್ಥೆಗಳ ಮೇಲೆ ನೇರ ಪರಿಣಾಮ ಬೀರಿದೆ. ಅದು ಮಾರುತಿ ಸಂಸ್ಥೆಗೂ ತಟ್ಟಿದ್ದು, ಈ ಡಿಸೆಂಬರ್‌ನಲ್ಲಿ ಉತ್ಪಾದನೆ ಶೇ.80-85ಕ್ಕೆ ಇಳಿಕೆಯಾಗಲಿದೆ ಎಂದು ಸಂಸ್ಥೆ ತಿಳಿಸಿದೆ.