Advertisement

ಮಾರುತಿ ಸುಜುಕಿ ಸೂಪರ್‌ ಕ್ಯಾರಿ ವರ್ಷದ ಎಸ್‌ಯುವಿ

12:47 PM Feb 24, 2018 | |

ಬೆಂಗಳೂರು: ದೇಶದ ಮುಂಚೂಣಿ ವಾಹನ ತಯಾರಿಕಾ ಕಂಪನಿಯಾಗಿರುವ ಮಾರುತಿ ಸುಜುಕಿಯ ಸೂಪರ್‌ ಕ್ಯಾರಿ (ಮಿನಿ ಟ್ರಕ್‌) ವಾಹನವು  ಪ್ರತಿಷ್ಠಿತ 2017ನೇ ಸಾಲಿನ ಸಿವಿ ವಾರ್ಷಿಕ ಪ್ರಶಸ್ತಿಗೆ ಭಾಜನವಾಗಿದೆ.

Advertisement

ಇತ್ತೀಚೆಗಷ್ಟೇ ಪೂರ್ಣಗೊಂಡ ಸ್ಪರ್ಧೆಯಲ್ಲಿ ಕಂಪನಿಯ ಸೂಪರ್‌ ಕ್ಯಾರಿ ವಾಹನವು ಎಸ್‌ಯುವಿ ಆಫ್ ದ ಇಯರ್‌ 2017 ಹಾಗೂ ವರ್ಷದ ವಾಣಿಜ್ಯ ಕಾರು ಎಂಬ ಪ್ರಶಸ್ತಿ ಮುಡಿಗೇರಿಸಿಕೊಂಡಿದೆ. ಇತ್ತೀಚೆಗೆ ನಡೆದ ಸಮಾರಂಭದಲ್ಲಿ ಕಂಪನಿಯ ಉಪಾಧ್ಯಕ್ಷ (ಎಂಎಸ್‌ ಚಾನಲ್‌) ರಾಮ್‌ ಸುರೇಶ್‌ ಅಕೆಲ್ಲಾ ಹಾಗೂ ಪ್ರಧಾನ ವ್ಯವಸ್ಥಾಪಕ (ವಾಣಿಜ್ಯ ಮತ್ತು ಗ್ರಾಮೀಣ ಮಾರುಕಟ್ಟೆ ವಿಭಾಗ) ಅರುಣ್‌ ಅರೋರ ಅವರು ಪ್ರಶಸ್ತಿ ಸ್ವೀಕರಿಸಿದರು.

 ಈ ಸಂದರ್ಭದಲ್ಲಿ ಮಾತನಾಡಿದ ರಾಮ್‌ ಸುರೇಶ್‌ ಅಕೆಲ್ಲಾ, ವಾಹನ ಉದ್ಯಮದ ಪ್ರತಿಷ್ಠಿತ ಪ್ರಶಸ್ತಿಯನ್ನು ಕಂಪನಿಯ ಹೊಸ ಮಾದರಿಯ ಕಾರು ಪಡೆದಿರುವುದು ನಮಗೆ ಸಂತಸ ತಂದಿದೆ. ಇದರಿಂದ ಭಾರತೀಯ ಗ್ರಾಹಕರಿಗೆ ಬೇಕಾದ ವಿನ್ಯಾಸದ ವಾಹನ ರೂಪಿಸಲು ನಮಗೆ ಉತ್ತೇಜನ ದೊರೆತಿದೆ ಎಂದು ಹೇಳಿದರು.

ಸೂಪರ್‌ ಕ್ಯಾರಿ ವಾಹನವನ್ನು ಸಾಕಷ್ಟು ಪರೀಕ್ಷೆಗಳಿಗೆ ಒಳಪಡಿಸಿದ್ದರಿಂದ ಗ್ರಾಹಕರ ಬಯಕೆಗೆ ಅನುಕೂಲವಾಗುವ ರೀತಿ ವಿನ್ಯಾಸಗೊಳಿಸಲು ಸಾಧ್ಯವಾಗಿದೆ. ಮುಂದೆಯೂ ಕಂಪನಿ, ಗ್ರಾಹಕರಿಗೆ ಅಗತ್ಯವಾದ ವಾಹನ ಶ್ರೇಣಿಗಳ ತಯಾರಿಕೆಗೆ ಆದ್ಯತೆ ನೀಡುವ ಅತ್ಯಾಧುನಿಕ ತಂತ್ರಜ್ಞಾನ ಬಳಸಿ ಗುಣಮಟ್ಟದ ಉಪಕರಣಗಳನ್ನು ಅಳವಡಿಸಲು ಒತ್ತು ನೀಡಲಿದೆ ಎಂದು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next