ನವದೆಹಲಿ : ಮಾರುತಿ ಸುಜುಕಿ ತಾನು ತಯಾರಿಸಿರುವ 1,81,754 ಕಾರುಗಳನ್ನು ತಪಾಸಣೆಗಾಗಿ ಹಿಂಪಡೆಯಲಿರುವುದಾಗಿ ಘೋಷಿಸಿದೆ.
2018ರ ಮೇ 4ರಿಂದ, 2020ರ ಅ. 27ರೊಳಗೆ ತಯಾರಾಗಿರುವ ಸಿಯಾಜ್, ಎರ್ಟಿಗಾ, ವಿಟಾರಾ ಬ್ರೆಝಾ, ಎಸ್-ಕ್ರಾಸ್, ಎಕ್ಸ್‌ಎಲ್ 6 ಮಾದರಿಯ ಹಲವಾರು ಕಾರುಗಳಲ್ಲಿ ಕಾರುಗಳ ಮೋಟಾರ್ ಜನರೇಟರ್ ಯೂನಿಟ್‌ಗಳಲ್ಲಿ ಕೆಲವಾರು ತಾಂತ್ರಿಕ ದೋಷಗಳು ಕಾಣಿಸಿಕೊಂಡಿರುವ ಬಗ್ಗೆ ತಮಗೆ ಗ್ರಾಹಕರಿಂದ ಮಾಹಿತಿ ಬಂದಿದೆ.
ಪೆಟ್ರೋಲ್ ಇಂಜಿನ್ ಇರುವ ಕಾರುಗಳಲ್ಲೇ ಈ ಸಮಸ್ಯೆ ಕಾಣಿಸಿಕೊಂಡಿರುವುದರಿಂದ ಗ್ರಾಹಕರ ಹಿತಾಸಕ್ತಿ ಆಧಾರದಲ್ಲಿ ಆ ಅವಧಿಯಲ್ಲಿ ತಯಾರಾದ ಎಲ್ಲಾ ಕಾರುಗಳನ್ನು ವಾಪಸ್ ಪಡೆದು ತಪಾಸಣೆ ನಡೆಸಲು ನಿರ್ಧರಿಸಿರುವುದಾಗಿ ಮಾರುತಿ ಸುಜುಕಿ ಪ್ರಕಟಿಸಿದೆ.
ಮಾರುತಿ ಸುಜುಕಿಯಿಂದ ಇದೇ ಮೊದಲ ಬಾರಿಗೆ ಇಷ್ಟು ದೊಡ್ಡ ಪ್ರಮಾಣದಲ್ಲಿ ಇಂಥ ಕ್ರಮ ಕೈಗೊಳ್ಳಲಾಗಿದೆ.
ಇದನ್ನೂ ಓದಿ :ವರ್ಕ್ ಫ್ರಂ ಹೋಂನಲ್ಲಿ ಕೂಡ ಧೂಮಪಾನ ನಿಷೇಧ! ತನ್ನ ನೌಕರರಿಗೆ ಜಪಾನ್ ಕಂಪೆನಿಯ ಆದೇಶ