Advertisement

ಮಾರುತಿ ಶೋ ರೂಂಗೆ ಚಾಲನೆ

06:35 AM Mar 20, 2019 | |

ಬೆಂಗಳೂರು: ದೇಶದ ನಂ.1 ಮಾರುತಿ ಸುಜುಕಿ ಕಾರ್‌ ಡೀಲರ್ ವರುಣ್‌ ಮೋಟಾರ್ ಪ್ರೈ.ಲಿ., ನಗರದ ಹೆಬ್ಟಾಳ ರಿಂಗ್‌ ರೋಡ್‌ನ‌ಲ್ಲಿ ಆರಂಭಿಸಿರುವ ಮೊದಲ ಹೊಸ ಮಾರುತಿ ಸುಜುಕಿ ಅರಿನಾ ಶೋ ರೂಂಗೆ ಉಪಮುಖ್ಯಮಂತ್ರಿ ಜಿ. ಪರಮೇಶ್ವರ ಚಾಲನೆ ನೀಡಿದರು. ನಂತರ ಮಾತನಾಡಿದ ಅವರು ಬೆಂಗಳೂರು ಮಹಾನಗರ ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಅಗ್ರಸ್ಥಾನ ಅಲಂಕರಿಸಿದೆ.

Advertisement

ಇಲ್ಲಿ ಸ್ಟಾರ್ಟ್‌ಅಪ್‌ ಕಂಪನಿಗಳನ್ನು ಆರಂಭಿಸುವವರಿಗೆ ಉತ್ತಮ ವಾತಾವರಣ ಹಾಗೂ ಬಹಳಷ್ಟು ಅವಕಾಶಗಳಿವೆ. ಹೊಸದಾಗಿ ಕಂಪನಿಗಳನ್ನು ಆರಂಭಿಸಲು ಇಚ್ಛಿಸುವ ಉದ್ದಿಮೆದಾರರಿಗೆ ಸರ್ಕಾರದಿಂದ ನೀಡುವ ಸಹಕಾರ, ಸವಲತ್ತುಗಳನ್ನು ಮುಂದುವರಿಸಲಾಗುವುದು. ಅದೇ ರೀತಿ ಮಾರುತಿ ಸುಜುಕಿ ಇಂಡಿಯಾ ಲಿ., ಕರ್ನಾಟಕದಲ್ಲಿ ಉತ್ಪದನಾ ಘಟಕ ಸ್ಥಾಪಿಸಲು ಇಚ್ಛಿಸಿದ್ದಲ್ಲಿ ಮುಕ್ತ ಅವಕಾಶ ಕಲ್ಪಿಸಿ ಎಲ್ಲ ಸಹಕಾರ ನೀಡಲಾಗುವುದು ಎಂದರು.

ಈ ಸಂದರ್ಭದಲ್ಲಿ ಮಾರುತಿ ಸುಜುಕಿ ಇಂಡಿಯಾದ ಕಾರ್ಯನಿರ್ವಾಹಕ ನಿರ್ದೇಶಕ ಟಿ. ಹಾಷಿಮೊಟೊ ಮಾತನಾಡಿ, ವರುಣ್‌ ಮೋಟಾರ್ ಪ್ರೈ.ಲಿ., ಮಾರುತಿ ಸುಜುಕಿಯ ಅತ್ಯಂತ ಭರವಸೆಯ ಡೀಲರ್‌ ಆಗಿದೆ. ಅತ್ಯುತ್ತಮ ಗ್ರಾಹಕ ಸೇವೆಗೆ ಸತತವಾಗಿ 13 ಬಾರಿ ಪ್ಲಾಟಿನಂ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿರುವುದು ಅದರ ಸೇವೆಗಿಡಿದ‌ ಕೈಗನ್ನಡಿ. 2016ರ ಏಪ್ರಿಲ್‌ನಿಂದ ಕಾರ್ಯಾಚರಣೆ ಆರಂಭಿಸಿದ ವರುಣ್‌ ಮೋಟಾರ್ ನಗರದ ಜನತೆಗೆ ಉತ್ತಮ ಸೇವೆ ನೀಡುತ್ತಿದೆ. ಗ್ರಾಹಕರಿಂದ ವರುಣ್‌ ಮೋಟಾರ್ ಬಗ್ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿರುವುದು ಸಂತಸ ತಂದಿದೆ ಎಂದರು.

ಮಾರುತಿ ಸುಜುಕಿ ಇಂಡಿಯಾ ಲಿ., ಹಿರಿಯ ಕಾರ್ಯನಿರ್ವಾಹಕ ನಿರ್ದೇಶಕ ಆರ್‌.ಎಸ್‌. ಕಲ್ಸಿ, ಬ್ಯಾಂಕ್‌ ಆಫ್‌ ಬರೋಡ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ಪಿ.ಎಸ್‌. ಜಯಕುಮಾರ್‌, ವರುಣ್‌ ಸಮೂಹದ ಅಧ್ಯಕ್ಷ ವಿ. ಪ್ರಭು ಕಿಶೋರ್‌, ವ್ಯವಸ್ಥಾಪಕ ನಿರ್ದೇಶಕ ವರುಣ್‌ ದೇವ್‌, ಕಾರ್ಯ ನಿರ್ವಾಹಕ ನಿರ್ದೇಶಕ ಆರ್‌.ಸಿ. ರಾಜು, ನಿರ್ದೇಶಕ ಡಿ.ಕೆ. ರಾಜು, ಸಿಇಒ ವಿಜಯ್‌ ರೆಡ್ಡಿ ಹಾಗೂ ಜನರಲ್‌ ಮ್ಯಾನೇಜರ್‌ ಕಲೀಮ್‌ ಶೇಖ್‌ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next