Advertisement

ಓಮ್ನಿ ಬಳಿಕ ಜಿಪ್ಸಿ ಉತ್ಪಾದನೆ ಸ್ಥಗಿತಕ್ಕೆ ಮಾರುತಿ ನಿರ್ಧಾರ

06:59 AM Nov 15, 2018 | |

ಹೊಸದಿಲ್ಲಿ: ಓಮ್ನಿ ವ್ಯಾನ್‌ ಉತ್ಪಾದನೆ ಸ್ಥಗಿತಗೊಳಿಸುವುದಕ್ಕೆ ಈಗಾಗಲೇ ನಿರ್ಧರಿಸಿರುವ ಮಾರುತಿ ಸುಜುಕಿ ಮತ್ತೂಂದು ಮಹತ್ವ ಕ್ರಮಕ್ಕೆ ಮುಂದಾಗಿದೆ. 2019ರ ಏಪ್ರಿಲ್‌ ಬಳಿಕ ತನ್ನ ಮತ್ತೂಂದು ಜನಪ್ರಿಯ ವಾಹನ ಮಾರುತಿ ಜಿಪ್ಸಿ ಮಾರಾಟ ಸ್ಥಗಿತ ಗೊಳಿಸಲಿದೆ. “ದ ಕಿಂಗ್‌ ಆಫ್ ರೋಡ್ಸ್‌’ ಎಂಬ ಹೆಗ್ಗಳಿಕೆಯನ್ನು ಅದರ ಬಳಕೆದಾರರಿಂದ ಪಡೆದುಕೊಂಡ ಈ ವಾಹನ 1985ರಲ್ಲಿ ಉತ್ಪಾದನೆ ಆರಂಭವಾಗಿತ್ತು. ಜಪಾನ್‌ ಮತ್ತು ದಕ್ಷಿಣ ಏಷ್ಯಾ ಮಾರುಕಟ್ಟೆಗಳಲ್ಲಿ ಜನಪ್ರಿಯತೆ ಪಡೆದಿತ್ತು. ಸದ್ಯ ಮಾರುತಿ ಜಿಪ್ಸಿ ಬಿಎಸ್‌ 4, 1.3 ಲೀಟರ್‌ ಲೀಟರ್‌ ಡಿರೈವೇಟಿವ್‌ ಜಿ.13 ಬಿಎ ಎಂಜಿನ್‌ ಹೊಂದಿದೆ. 

Advertisement

2019ರಲ್ಲಿ ವಾಹನಗಳಲ್ಲಿ ಬಿಎಸ್‌ 6 ಪರಿಸರಾತ್ಮಕ ಕ್ರಮ, ಎಬಿಎಸ್‌ ಮತ್ತು ಇತರ ವ್ಯವಸ್ಥೆಗಳನ್ನು ಅಳವಡಿಸಬೇಕು ಎಂಬ ನಿಮಯಗಳ ಹಿನ್ನೆಲೆಯಲ್ಲಿ ಜಿಪ್ಸಿಯನ್ನು ಅಪ್‌ಡೇಟ್‌ ಮಾಡದೆ ಇರಲು ನಿರ್ಧರಿಸಲಾಗಿದೆ. ಹೀಗಾಗಿ ಅದನ್ನು ಖರೀದಿಸಬೇಕೆಂದು ಬಯಸುವವರು ಡಿಸೆಂಬರ್‌ ಅಥವಾ ಜನವರಿ ಒಳಗಾಗಿ ಬುಕಿಂಗ್‌ ಮಾಡಬೇಕು. ಕಳೆದ ವರ್ಷದ ಏಪ್ರಿಲ್‌ನಿಂದ ಅದರ ಮಾರಾಟವೂ ಇಳಿದಿತ್ತು.

Advertisement

Udayavani is now on Telegram. Click here to join our channel and stay updated with the latest news.

Next