Advertisement
ವೀರಶೈವ ಧರ್ಮ ಪ್ರವರ್ತಕರೆಂದು ಹೆಸರಾದ ಪಂಚಪೀಠಗಳಲ್ಲಿ ಪೀಠವೇ ಶ್ರೀಮದುಜ್ಜಯಿನಿ ಸದ್ಧರ್ಮ ಪೀಠ ಒಂದು. ಶ್ರೀ ಜಗದ್ಗುರು ಮರುಳಾರಾಧ್ಯರು ಇದರ ಸ್ಥಾಪಕರು. ಈಗ ಪರಂಪರೆಯನ್ನು ಶ್ರೀ ಸಿದ್ದಲಿಂಗ ರಾಜದೇಶಿ ಕೇಂದ್ರ ಶಿವಾಚಾರ್ಯ ಸ್ವಾಮಿಗಳು ಮುಂದುವರಿಸಿಕೊಂಡು ಹೋಗುತ್ತಿದ್ದಾರೆ.
ಈ ಪರಂಪರೆಯ ಶ್ರೀ ದಾರುಕರು ಹಿಂದುಳಿದ ಜಾತಿಯ ಕೀಲಿಗನಾದ ದಧೀಚಿಗೆ ಶಿವಾದ್ವೆ„ತವನ್ನು ಭೋದಿಸಿ, ಕುಲ ಹದಿನೆಂಟು ಜಾತಿಯನ್ನು ಉದ್ದರಿಸಿದ ಸಮಾಜ ಪರಿವರ್ತನ ಮಹಾಪ್ರವರ್ತಕರು. ಶ್ರೀ ಮರುಳಾರಾಧ್ಯ ಭಗತ್ಪಾದರು ಉಜ್ಜಯನಿಯ ಮಹಾರಾಜ ಶೌÅ$›ತಪಾಲ ಹಾಗೂ ರಾಣಿ ಭಾನುಮತಿ ಇವರಿಗೆ ಇಷ್ಟಲಿಂಗ ಧೀಕ್ಷೆ ಅನುಗ್ರಹಿಸಿ ಶಕ್ತಿ ವಿಶಿಷ್ಟಾದ್ವೆ„ತವನ್ನು ಉಪದೇಶಿಸಿದ್ದಾರೆ.
Related Articles
Advertisement
ತೈಲಾಭಿಷೇಕಮಹಾರಾಜ ವಿಕ್ರಮಾದಿತ್ಯನಿಗೆ ಬಂದೊದಗಿದ ಕಷ್ಟದ ನಿವಾರಣೆಗೆ ತಮ್ಮ ಇಷ್ಟಲಿಂಗ ತೈಲಾಭಿಷೇಕದ ಮೂಲಕ ಕಷ್ಟ ಪರಿಹಾರ ಮಾಡಿದರು. ಇಂಥ ವಿಶಿಷ್ಟ ಧಾರ್ಮಿಕ ತತ್ವ-ಸಿದ್ದಾಂತಗಳನ್ನೂ ಒಳಗೊಂಡಿರುವ ಶ್ರೀಪೀಠವು ವರ್ಷ ದುದ್ದಕ್ಕೂ ಅನೇಕ ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸುತ್ತಿವೆ. ಶ್ರೀ ಮರುಳಸಿದ್ದೇಶ್ವರ ಸ್ವಾಮಿಯ ರಥೋತ್ಸವ ಹಾಗೂ ತೈಲಾಭಿಷೇಕದ ಸಂದರ್ಭದಲ್ಲಿ ಅನೇಕ ಧರ್ಮಸಭೆ, ಸಮಾರಂಭ, ಸಮ್ಮೇಳನ ಹಾಗೂ ಕಲ್ಯಾಣ ಮಹೋತ್ಸವವನ್ನು ಹಮ್ಮಿಕೊಂಡು ಮಾನವೀಯ ಮೌಲ್ಯಗಳನ್ನು ಪರಿಚಯಿಸುವ, ಸಾಮರಸ್ಯ, ಭಾವೈಕ್ಯತೆ ಹಾಗೂ ಸದ್ಭಾವನೆಗಳನ್ನು ಬೆಳೆಸುವ ಕೆಲಸ ಮಾಡುತ್ತದೆ. ಮೇ 4ರ ಅಕ್ಷಯ ತದಿಗೆ ಅಮವಾಸ್ಯೆಯಂದು ಶ್ರೀ ಮರುಳಸಿದ್ಧೇಶ್ವರ ಸ್ವಾಮಿಗೆ ಕಂಕಣಧಾರಣೆ ಮಾಡುವುದರೊಂದಿಗೆ ಪ್ರತಿ ದಿವಸದ ವಾಹನೋತ್ಸವಗಳು ಜರುಗುತ್ತವೆ. 9ನೇ ತಾರೀಖು ಗುರುವಾರದಂದು ಶ್ರೀ ಜಗದ್ಗುರು ಮರುಳಸಿದ್ಧೇಶ್ವರ ಸ್ವಾಮಿಯ ಮಹಾರಥೋತ್ಸವ ನಡೆಯಲಿದೆ. 10ರ ಸಂಜೆ 4 ಗಂಟೆಗೆ ಶ್ರೀ ಮರುಳಸಿದ್ದೇಶ್ವರ ಸ್ವಾಮಿ ದೇವಾಲಯದ ಗೋಪುರದ ಶಿಖರಕ್ಕೆ ತೈಲಾಭೀಷೇಕವನ್ನು ನೆರವೇರಿಸಲಾಗುತ್ತದೆ. ನಿರಂಜನ ದೇವರಮನೆ