Advertisement

ಸೇನೆಗೆ ಸೇರಿದ ಹುತಾತ್ಮ ಯೋಧನ ಪತ್ನಿ ಸ್ವಾತಿ

08:20 AM Sep 10, 2017 | Harsha Rao |

ಚೆನ್ನೈ: ಇವರು ದೇಶಕ್ಕಾಗಿ ಪ್ರಾಣ ತೆತ್ತ ಪತಿಯನ್ನು ನೆನೆಯುತ್ತಾ, ಕಣ್ಣೀರುಡುತ್ತಾ ಬದುಕು ಸವೆಸಲಿಲ್ಲ. ಬದಲಿಗೆ ಸೇನೆ ಸೇರಿ ದೇಶಾದ್ಯಂತ ಇತರರಿಗೂ ಮಾದರಿಯಾಗಿದ್ದಾರೆ.

Advertisement

ಜಮ್ಮು-ಕಾಶ್ಮೀರದಲ್ಲಿ ಭಯೋತ್ಪಾದಕರೊಂದಿಗೆ ಹೋರಾಡಿ ಹುತಾತ್ಮರಾದ ಕರ್ನಲ್‌ ಸಂತೋಷ್‌ ಮಹಾದಿಕ್‌ ಅವರ ಪತ್ನಿ ಸ್ವಾತಿ ಮಹಾದಿಕ್‌(38) ಅವರ ದಿಟ್ಟತನದ ಕಥೆಯಿದು. 2 ವರ್ಷಗಳ ಹಿಂದೆ ಪತಿಯನ್ನು ಕಳೆದುಕೊಂಡ ಸ್ವಾತಿ, ಈಗ 11 ತಿಂಗಳ ಕಠಿಣ ತರಬೇತಿ ಮುಗಿಸಿ ತಾವೇ ಸ್ವತಃ ಸೈನ್ಯಕ್ಕೆ ಸೇರ್ಪಡೆಯಾಗಿದ್ದಾರೆ.

ಎರಡು ಮಕ್ಕಳ ತಾಯಿಯಾಗಿರುವ ಸ್ವಾತಿ ಮಹಾದಿಕ್‌ ಶನಿವಾರ ಸೇನಾ ಸಶಸ್ತ್ರ ಪಡೆಯ ಅಧಿಕಾರಿಯಾಗಿ ಅಧಿಕಾರ ವಹಿಸಿಕೊಂಡಿದ್ದಾರೆ. ಸೇನಾ ಪದಕ ವಿಜೇತ ಪತಿಯ ದಾರಿಯಲ್ಲೇ ನಡೆದ ಸ್ವಾತಿ ಕಳೆದ ಅಕ್ಟೋಬರ್‌ನಲ್ಲಿ ಚೆನ್ನೈನ ಸೇನಾಧಿಕಾರಿಗಳ ತರಬೇತಿ ಅಕಾಡೆಮಿಗೆ ಸೇರಿದ್ದರು. 11 ತಿಂಗಳ ತರಬೇತಿ ಬಳಿಕ ಪುಣೆಯಲ್ಲಿ ಕೆಲಸಕ್ಕೆ ಸೇರಿದ್ದಾರೆ. ಇವರಲ್ಲದೆ, ಕರ್ತವ್ಯದ ವೇಳೆ ಮೃತಪಟ್ಟ ಮತ್ತೂಬ್ಬ ಯೋಧನ ಪತ್ನಿ ನಿಧಿ ದುಬೆ ಎಂಬವರೂ ಶನಿವಾರ ಸೇನೆಗೆ ಸೇರ್ಪಡೆ ಗೊಂಡಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next