ಪುಣೆ: ಪುಣೆ ಮಹಾರಕ್ಷಕ್ ಯುವ ಬ್ರಿಗೇಡ್ ವತಿಯಿಂದ ಮಾ. 18 ರಂದು ಪುಣೆಯ ಸರಸ್ವತಿ ಅನಾಥ ಶಿಕ್ಷಣ ಸಂಸ್ಥೆಯಲ್ಲಿ ಹುತಾತ್ಮ ಮೇ| ಸಂದೀಪ ಉನ್ನಿಕೃಷ್ಣನ್ ಅವರ ಹುಟ್ಟುಹಬ್ಬವನ್ನು ಆಚರಿಸಲಾಯಿತು.
ಸಂದೀಪ್ ಉನ್ನಿಕೃಷ್ಣನ್ ಅವರ ಭಾವ ಚಿತ್ರಕ್ಕೆ ಪುಷ್ಪಾರ್ಚನೆ ಮಾಡುವುದರ ಮೂಲಕ ಕಾರ್ಯಕ್ರಮವನ್ನು ಪ್ರಾರಂ ಭಿಸಲಾಯಿತು. ಸಂದೀಪ್ ಉನ್ನಿಕೃಷ್ಣನ್ ಅವರ ಜೀವನ ಮತ್ತು ದೇಶಕ್ಕೊಸ್ಕರ ಮಡಿದ ವೀರರನ್ನು ಸದಾಕಾಲ ನೆನಪಿಸಿಕೊಳ್ಳುತ್ತಿರಬೇಕು ಎಂದು ಬ್ರಿಗೇಡ್ ಸದಸ್ಯರು ಅನಾಥ ಶಿಕ್ಷಣ ಸಂಸ್ಥೆಯ ಮಕ್ಕಳಿಗೆ ತಿಳಿಸಿದರು. ಭಾರತೀಯ ಸೇನೆಯ ಕುರಿತು ಮಕ್ಕಳಿಗೆ ಮಾಹಿತಿ ನೀಡಲಾಯಿತು.
ಹಾಗೆಯೇ ಮಕ್ಕಳಿಂದ ದೇಶ ಭಕ್ತಿ ಗೀತೆಗಳನ್ನು ಹಾಡಿಸಲಾಯಿತು. ಕಾರ್ಯಕ್ರಮದ ಕೊನೆಯಲ್ಲಿ ಮಕ್ಕಳಿಗೆ ಸಿಹಿ ತಿಂಡಿ ನೀಡಿ ಕಾರ್ಯಕ್ರಮವನ್ನು ಸಂಪನ್ನಗೊಳಿಸಲಾಯಿತು. ಪುಣೆ ಪರಿಸರದಲ್ಲಿ ಸದ್ದಿಲ್ಲದೆ ಸಾಮಾಜಿಕ ಜಾಗೃತಿ ಮೂಡಿಸುವ ಕಾರ್ಯವನ್ನು ಕನ್ನಡಿಗ ಯುವ ಬ್ರಿಗೇಡ್ ಸದಸ್ಯರು ಮಾಡುತ್ತಿದ್ದು, ಇತ್ತೀಚೆಗೆ ಸಂಘಟನೆಯ ವತಿಯಿಂದ ಚಿಂಚಾÌಡ್‌ನಲ್ಲಿ ಹರಿಯುವ ಪಾವನಾ ನದಿ ದಡವನ್ನು ಸ್ವತ್ಛಗೊಳಿಸುವ ಕಾರ್ಯವನ್ನು ಮಾಡಿ ಗಮನ ಸೆಳೆದಿದ್ದರು.
ಆದಿತ್ಯ ಬಿರ್ಲಾ ಆಸ್ಪತ್ರೆಯ ಹತ್ತಿರದಿಂದ ಹರಿಯುತ್ತಿರುವ ಈ ನದಿಯನ್ನು ಸಾರ್ವಜನಿಕರು ಕಸಗಳನ್ನು ಎಸೆದು ಹಾಳು ಮಾಡುತ್ತಿರುವುದನ್ನು ಗಮನಿಸಿದ ಸದಸ್ಯರು ಸ್ವತ್ಛತಾ ಅಭಿಯಾನವನ್ನು ಕೈಗೊಂಡು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಪ್ರಯತ್ನ ಮಾಡಿದ್ದರು. ದಯಾನಂದ, ಚೇತನ್, ನಿಂಗಪ್ಪ ಹಾಗೂ ಇನ್ನಿತರ ಸದಸ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ವರದಿ: ಕಿರಣ್ ಬಿ. ರೈ ಕರ್ನೂರು