Advertisement

ಸ್ಯಾಂಡಲ್‌ವುಡ್‌ನಲ್ಲಿ ಧೂಳೆಬ್ಬಿಸಿದ ಧ್ರುವ್‌ ಸರ್ಜಾ ಅಭಿನಯದ “ಮಾರ್ಟಿನ್‌”ಟೀಸರ್‌

04:12 PM Feb 24, 2023 | Team Udayavani |

ಬೆಂಗಳೂರು: ಧ್ರುವ್‌ ಸರ್ಜಾ ಅಭಿನಯದ ಬಹುನಿರೀಕ್ಷಿತ ಚಿತ್ರ “ಮಾರ್ಟಿನ್‌”ನ ಟೀಸರ್‌ ಬಿಡುಗಡೆ ಕಾರ್ಯಕ್ರಮ ಫೆ. 23ರಂದು ನಡೆದಿದೆ. ಅಲ್ಲದೇ ಚಿತ್ರದ ಟೀಸರ್‌ ಭಾರೀ ಸದ್ದು ಮಾಡುತ್ತಿದ್ದು, ಬಿಡುಗಡೆಯಾದ ಕೆಲವೇ ಕ್ಷಣಗಳಲ್ಲಿ ಪ್ರೇಕ್ಷಕರ ಮನಗೆದ್ದಿದೆ. ಸದ್ಯಕ್ಕೆ ಈ ಆಕ್ಷನ್‌ ಸಿನೆಮಾದ ಟೀಸರ್‌ ಯೂಟ್ಯೂಬ್‌ ಟ್ರೆಂಡಿಂಗ್‌ ಲಿಸ್ಟ್‌ನಲ್ಲಿ 4 ನೇ ಸ್ಥಾನದಲ್ಲಿದ್ದು ಈವರೆಗೆ 2,10,00,000 ವೀಕ್ಷಣೆಯಾಗಿದೆ.

Advertisement

ಕಾಂತಾರ, KGF,ಕಬ್ಜ ಹೀಗೆ ಸಾಲು ಸಾಲು ಪ್ಯಾನ್‌ ಇಂಡಿಯಾ  ಸಿನೆಮಾಗಳನ್ನು ಸೃಷ್ಠಿಸಿರುವ ಸ್ಯಾಂಡಲ್‌ವುಡ್‌ ಮೇಲೆ ಎಲ್ಲರಿಗೂ ಭಾರೀ ನಿರೀಕ್ಷೆಯಿದೆ ಎನ್ನುವುದು ಈ ಟೀಸರ್‌ಗೆ ಸಿಕ್ಕಿದ ರೆಸ್ಪಾನ್ಸ್‌ನಿಂದ ಸ್ಪಷ್ಟವಾಗಿದೆ. ಅಲ್ಲದೇ ಈ ಟೀಸರ್‌ಗೆ ಬೇರೆ ಬೇರೆ ಭಾಷೆಗಳ ನಟರು, ತಂತ್ರಜ್ಙರು ಮೆಚ್ಚುಗೆ ಸೂಚಿಸಿದ್ದಾರೆ. ಅಂತೂ ಕನ್ನಡ ಸಿನೆಮಾಗಳು ಬಾಲಿವುಡ್‌ ನಿದ್ದೆಗೆಡಿಸುತ್ತಿರುವುದಂತೂ ಸತ್ಯ.

ಧ್ರುವ್‌ ಸರ್ಜಾ ಮತ್ತು ಎ.ಪಿಅರ್ಜುನ್‌ ಕಾಂಬಿನೇಷನ್‌ನಲ್ಲಿ ಮೂಡಿಬರುತ್ತಿರುವ ಈ ಚಿತ್ರದ ಟೀಸರ್‌ ನೋಡಲು ಪ್ರೇಕ್ಷಕರು ತುದಿಗಾಲಲ್ಲಿ  ನಿಂತಿದ್ದರು. ಇದೇ ಮೊದಲ ಬಾರಿ ಹಣ ತೆತ್ತು ಟಿಕೆಟ್‌ ಖರೀದಿಸಿ ಟೀಸರ್‌ ನೋಡುವ ವ್ಯವಸ್ಥೆ ಮಾಡಲಾಗಿತ್ತು. ದುಡ್ಡು ಕೊಟ್ಟು ಟೀಸರ್‌ ನೋಡಿದ್ರೂ ಮೋಸ ಆಗಿಲ್ಲ ಅಂತ ಅಭಿಮಾನಿಗಳು ಹೇಳಿದ್ದಾರೆ.

ಈ ಟೀಸರ್‌ನಲ್ಲಿ ತಮ್ಮ ಬಾಡಿ ಮೂಲಕವೇ ಧ್ರುವ್‌ ಸಿನಿರಸಿಕರ ಮನಗೆದ್ದಿದ್ದಾರೆ. ಧ್ರುವ್‌ನ ಕಟ್ಟುಮಸ್ತಾದ ದೇಹ ಟೀಸರ್‌ನಲ್ಲಿ ಕಂಡುಬಂದಿದೆ. ಪಕ್ಕಾ ಆಕ್ಷನ್‌ ಸಿನೆಮಾ ಅನ್ನುವಂತೆ ಭಾಸವಾಗಿದ್ದು ಗನ್‌, ಬಾಂಬ್‌ ದೃಶ್ಯಗಳು ಟೀಸರ್‌ ತುಂಬೆಲ್ಲಾ ಕಂಡಿದೆ.

Advertisement

ನಾಯಕ ಪಾಕಿಸ್ತಾನದಲ್ಲಿ ಬಂಧಿತನಾಗಿರುವ ನಾಯಕನ ಸುತ್ತವೇ ಸುತ್ತುವಂತೆ ಚಿತ್ರದ ಕಥೆ ಹೆಣೆಯಲಾಗಿದ್ದು, ತನ್ನ ಟೀಸರ್‌ನಿಂದಲೇ ಈಗಾಗಲೇ ಭರ್ಜರಿ ಸದ್ದು ಮಾಡಿದೆ. ಅಂತೂ ಕನ್ಬ್ಯಾನಡ ಸಿನೆಮಾಗಳು ಕ್‌ ಟು ಬ್ಯಾಕ್‌ ಪ್ಯಾನ್‌ ಇಂಡಿಯಾ ಚಿತ್ರಗಳ ಮೂಲಕ ಸಿನಿಪ್ರಿಯರ ನಿದ್ದೆಗೆಡಿಸುವುದಂತೂ ಸುಳ್ಳಲ್ಲ.

Advertisement

Udayavani is now on Telegram. Click here to join our channel and stay updated with the latest news.

Next