Advertisement
ಏನಿದು ಮಾರ್ಷಲ್ ಲಾ? :
Related Articles
Advertisement
ತುರ್ತು ಪರಿಸ್ಥಿತಿ :
ಸದ್ಯ ಉಕ್ರೇನ್‌ನಲ್ಲಿ ರಾಷ್ಟ್ರೀಯ ತುರ್ತು ಪರಿಸ್ಥಿತಿ ಘೋಷಿಸಲಾಗಿದೆ. ಅಂದರೆ ದೇಶಕ್ಕೆ ನಿಯಂತ್ರಿಸಲಾಗದ ಅಥವಾ ತಡೆಯಲಾಗದ ಪರಿಸ್ಥಿತಿ ಉಂಟಾದರೆ ಆಗ ತುರ್ತು ಪರಿಸ್ಥಿತಿ ಜಾರಿ ಮಾಡಲಾಗುತ್ತದೆ. ಈ ಅವಧಿಯಲ್ಲಿ ಸರಕಾರದ ಕೆಲವೊಂದು ಕಾರ್ಯಾಚರಣೆಗಳು ಸ್ಥಗಿತವಾಗುತ್ತವೆ. ಹಾಗೆಯೇ ಜನರ ಮೂಲಭೂತ ಹಕ್ಕುಗಳನ್ನೂ ನಿಯಂತ್ರಿಸಲಾಗುತ್ತದೆ.
ಮಿಲಿಟರಿ ಆಪರೇಶನ್ :
ರಾಷ್ಟ್ರೀಯ ಭದ್ರತೆಯನ್ನು ರಕ್ಷಿಸುವ ಸಲುವಾಗಿ ಮಿಲಿಟರಿ ಆಪರೇಶನ್ ನಡೆಸಲಾಗುತ್ತದೆ. ಇದರಲ್ಲಿ ಸೇನೆಯ ವಿವಿಧ ಪಡೆಗಳು ಭಾಗವಹಿಸುತ್ತವೆ. ಅಷ್ಟೇ ಅಲ್ಲ, ನೈಸರ್ಗಿಕ ವಿಕೋಪದ ಸಂದರ್ಭದಲ್ಲಿ ಮತ್ತು ದೇಶದೊಳಗಿನ ದಂಗೆಯಂಥ ಸ್ಥಿತಿಯನ್ನು ನಿಯಂತ್ರಿಸಲೂ ಮಿಲಿಟರಿ ಆಪರೇಶನ್ ನಡೆಸಲಾಗುತ್ತದೆ.
ಏರ್ ರೈಡ್ ಸೈರನ್ :
ಪ್ರದೇಶವೊಂದರ ಮೇಲೆ ಯುದ್ಧ ವಿಮಾನಗಳ ದಾಳಿ ನಡೆಯುತ್ತದೆ ಎಂಬ ಮುನ್ಸೂಚನೆ ಮೇರೆಗೆ ಆ ಪ್ರದೇಶದ ಜನರಿಗೆ ಮೊದಲೇ ಸೈರನ್ ಮೂಲಕ ಎಚ್ಚರಿಕೆ ನೀಡಲಾಗುತ್ತದೆ. ಗುರುವಾರ ಬೆಳಗ್ಗೆ ಉಕ್ರೇನ್‌ನಲ್ಲಿ ಈ ರೀತಿಯ ಸೈರನ್ ಅನ್ನು ಮೊಳಗಿಸಲಾಗಿತ್ತು.
ಬಾಂಬ್ ಶೆಲ್ಟರ್ :
ಬಾಂಬ್ ಶೆಲ್ಟರ್‌ಗಳೆಂದರೆ ಇವು ಸಾಮಾನ್ಯವಾಗಿ ಹೇಳುವುದಾದರೆ ಕೊಠಡಿಗಳಷ್ಟೇ. ಸಾಮಾನ್ಯವಾಗಿ ಇವುಗಳು ಕಟ್ಟಡವೊಂದರ ಕೆಳಭಾಗದಲ್ಲಿ ಇರುತ್ತವೆ. ಬಾಂಬ್‌ಗಳಿಂದ ರಕ್ಷಣೆ ಮಾಡುವ ಸಲುವಾಗಿ ಇವುಗಳನ್ನು ಬಳಕೆ ಮಾಡಲಾಗುತ್ತದೆ. ಗುರುವಾರ ಭಾರತ ಸರಕಾರ, ಉಕ್ರೇನ್‌ನಲ್ಲಿ ಇರುವ ತನ್ನ ನಾಗರಿಕರಿಗೆ ಗೂಗಲ್ ಮ್ಯಾಪ್‌ನಲ್ಲಿ ಬಾಂಬ್ ಶೆಲ್ಟರ್ ಇರುವ ಸ್ಥಳಗಳನ್ನು ಹುಡುಕಿ ಹೋಗುವಂತೆ ಸೂಚನೆ ನೀಡಿದೆ.
ಮಿಲಿಟರಿ ಮೂಲಸೌಕರ್ಯ :
ಮಿಲಿಟರಿ ಮೂಲಸೌಕರ್ಯದ ಒಳಗೆ ಕಟ್ಟಡಗಳು, ಶಾಶ್ವತ ನೆಲೆಗಳು ಬರುತ್ತವೆ. ದೇಶದ ಮಿಲಿಟರಿ ಪಡೆಗೆ ನೆಲೆ ನೀಡುವ ಸ್ಥಳಗಳಾಗಿವೆ. ಕೆಲವೊಂದು ಕಾರ್ಯಾಚರಣೆ ವೇಳೆ ಇಂಥ ಮೂಲಸೌಕರ್ಯಗಳನ್ನು ಬಳಸಿಕೊಳ್ಳಲಾಗುತ್ತದೆ.
ವಾರ್‌ಝೋನ್‌ನಲ್ಲಿ ಯಾರು, ಯಾರ ಕಡೆ? :
ಸದ್ಯ ಯುದ್ಧ ಶುರುವಾಗಿದ್ದು, ರಷ್ಯಾ ಮತ್ತು ಉಕ್ರೇನ್ ಮಾತ್ರ ಮುಖ್ಯ ವೇದಿಕೆಯಲ್ಲಿ ಕಾಣಿಸಿಕೊಳ್ಳುತ್ತಿವೆ. ಆದರೆ ರಷ್ಯಾ ಪರ ಹಾಗೂ ಉಕ್ರೇನ್ ಪರ ಯಾರಿದ್ದಾರೆ ಎಂಬ ಕುತೂಹಲಗಳಿವೆ. ರಷ್ಯಾ ಪರ ಸದ್ಯಕ್ಕೆ ಚೀನ, ಸಿರಿಯಾ, ವೆನಜುವೆಲಾ, ಬೆಲಾರಸ್ ದೇಶಗಳಿವೆ. ಭಾರತ ಯಾರ ಪರವೂ ಇಲ್ಲ, ಯಾರ ವಿರುದ್ಧವೂ ಇಲ್ಲ. ಆದರೆ ಉಕ್ರೇನ್ ಪರ ಅಮೆರಿಕ, ಬ್ರಿಟನ್, ಜರ್ಮನಿ, ಐರೋಪ್ಯ ಒಕ್ಕೂಟ, ಬಲ್ಗೇರಿಯಾ, ಈಸ್ಟೋನಿಯಾ, ಲಾಟ್ವಿಯಾ, ಲಿಥಾನಿಯಾ, ರೋಮ್ಯಾನಿಯಾ, ಸ್ಲೋವಾಕಿಯಾ, ಸ್ಲೋವಾನಿಯಾ, ಬೆಲ್ಜಿಯಂ, ಚೆಕ್ ರಿಪಬ್ಲಿಕ್, ಹಂಗೇರಿ, ಪೋಲ್ಯಾಂಡ್ ದೇಶಗಳಿವೆ.
ವಾರ್ ಆನ್ ಅಗ್ರೆಶನ್ :
ಒಂದು ದೇಶವು ಮತ್ತೂಂದು ದೇಶದ ಮೇಲೆ ನಡೆಸುವ ಅಪ್ರಚೋದಿತ ಮಿಲಿಟರಿ ದಾಳಿ ಇದು. ಅಂತಾರಾಷ್ಟ್ರೀಯ ಪ್ರಾಧಿಕಾರ, ದೇಶದ ಒಪ್ಪಿಗೆ ಮೇಲೆಗೆ ಇಂಥ ದಾಳಿ ನಡೆಸಬಹುದು.
ರಷ್ಯಾ-ಉಕ್ರೇನ್ ಸಮರ ಜಾಗತಿಕ ಆರ್ಥಿಕತೆ ಮೇಲೆ ಪ್ರಹಾರ:
ಕೊರೊನಾದಿಂದ ಕುಸಿತ ಕಂಡಿದ್ದ ಆರ್ಥಿಕತೆಗೆ ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ಧ ಮತ್ತೆ ಪ್ರಹಾರ ಮಾಡಿದೆ. ಇದಕ್ಕೆ ಸಾಕ್ಷಿ ಜಗತ್ತಿನಾದ್ಯಂತ ಎಲ್ಲ ಷೇರು ಮಾರುಕಟ್ಟೆಗಳು ಕುಸಿತ ಕಂಡಿರುವುದು. ಇದಷ್ಟೇ ಅಲ್ಲ, ಈ ದೇಶಗಳಿಂದ ರಫ್ತು ಮತ್ತು ಆಮದು ಮಾಡುತ್ತಿದ್ದ ದೇಶಗಳಲ್ಲಿನ ಹಣದುಬ್ಬರವೂ ಹೆಚ್ಚಾಗಲಿದ್ದು, ಮುಂದಿನ ದಿನಗಳಲ್ಲಿ ಮತ್ತಷ್ಟು ಕಷ್ಟ ಇದಿರಾಗುವ ಎಲ್ಲ ಲಕ್ಷಣಗಳು ತೋರುತ್ತಿವೆ.
ಜಗತ್ತಿನ ಜಿಡಿಪಿಗೆ ಈ ಎರಡು ದೇಶಗಳ ಕೊಡುಗೆ ಶೇ.2ರಷ್ಟಾಗಿದೆ. ಆದರೆ ಈ ದೇಶಗಳು ಜಗತ್ತಿನ ಹಲವಾರು ದೇಶಗಳ ಜತೆ ವಾಣಿಜ್ಯ- ವ್ಯಾಪಾರ ಸಂಬಂಧ ಹೊಂದಿವೆ. ಜತೆಗೆ ರಷ್ಯಾ ಜಗತ್ತಿನ ಮೂರನೇ ಅತೀ ದೊಡ್ಡ ಪೆಟ್ರೋಲಿಯಂ ರಫ್ತುದಾರ ದೇಶವಾಗಿದೆ. ಹಾಗೆಯೇ ಉಕ್ರೇನ್ ಜಗತ್ತಿನ ಹಲವಾರು ದೇಶಗಳಿಗೆ ಆಹಾರ ಪದಾರ್ಥಗಳನ್ನು ರಫ್ತು ಮಾಡುತ್ತದೆ.
ಯೂರೋಪ್‌ಗೆ ಭಾರೀ ನಷ್ಟ: ಕೊರೊನಾ ಅನಂತರದಲ್ಲಿ ಈಗ ಐರೋಪ್ಯ ಒಕ್ಕೂಟದ ದೇಶಗಳು ನಿಧಾನಕ್ಕೆ ಚೇತರಿಸಿಕೊಳ್ಳುತ್ತಿದ್ದವು. ಆದರೆ ರಷ್ಯಾ ಮೇಲಿನ ದಿಗ್ಬಂಧನ ಮತ್ತು ಉಕ್ರೇನ್ ಮೇಲಿನ ದಾಳಿಯಿಂದಾಗಿ ಈ ದೇಶಗಳು ಆಮದು ಮಾಡಿಕೊಳ್ಳುವುದನ್ನು ನಿಲ್ಲಿಸಿವೆ. ವರದಿಗಳ ಪ್ರಕಾರ, ರಷ್ಯಾದಿಂದ ಐರೋಪ್ಯ ದೇಶಗಳಿಗೆ ಶೇ.40ರಷ್ಟು ಪೆಟ್ರೋಲಿಯಂ ಉತ್ಪನ್ನಗಳು ರಫ್ತಾಗುತ್ತವೆ. ಇದು ನಿಂತರೆ ಆರ್ಥಿಕತೆಗೆ ಭಾರೀ ಪೆಟ್ಟು ಬೀಳುವುದು ಖಚಿತ. ಅದರಲ್ಲೂ ಈಗಾಗಲೇ ಐರೋಪ್ಯ ದೇಶಗಳಲ್ಲಿ ನೈಸರ್ಗಿಕ ಅನಿಲದ ಬೆಲೆ ಹೆಚ್ಚಳವಾಗಿದ್ದು, ಇದರ ಜತೆಗೆ ಈಗ ಮತ್ತೆ ಪೂರೈಕೆ ಕೊರತೆಯಿಂದ ಬೆಲೆ ಹೆಚ್ಚಳವಾದರೆ ಜನಸಾಮಾನ್ಯನ ಜೇಬಿಗೆ ಕತ್ತರಿ ಗ್ಯಾರಂಟಿ.
ಇನ್ನು ಕಪ್ಪು ಸಮುದ್ರದ ಬಂದರು ಮುಚ್ಚಿರುವುದರಿಂದ, ಜಗತ್ತಿನ ಬೇರೆ ಭಾಗಕ್ಕೆ ಗೋಧಿಯನ್ನು ರಫ್ತು ಮಾಡಲು ಸಾಧ್ಯವಾಗುವುದಿಲ್ಲ. ಇದರಿಂದಾಗಿಯೂ ಜಾಗತಿಕ ಆಹಾರೋತ್ಪನ್ನಗಳ ಮೇಲೆ ಅಡ್ಡಪರಿಣಾಮ ಬೀರಬಹುದು ಎಂಬ ವಿಶ್ಲೇಷಣೆ ಇದೆ.