Advertisement

Mars; ಕೆಂಪು ಗ್ರಹದಲ್ಲಿ ಬೃಹತ್‌ ಜ್ವಾಲಾಮುಖಿ, ನೀರ್ಗಲ್ಲು!; ಆವಿಷ್ಕಾರದ ಲಾಭವೇನು?

01:13 AM Mar 15, 2024 | Team Udayavani |

ಟೆಕ್ಸಾಸ್‌: ಕೆಂಪು ಗ್ರಹದ ವಿಸ್ಮಯಗಳ ಸಾಲಿಗೆ ಮತ್ತೂಂದು ಸೇರ್ಪಡೆಯೆಂಬಂತೆ, ಮಂಗಳ ಗ್ರಹದಲ್ಲಿ ಬೃಹತ್‌ ಜ್ವಾಲಾಮುಖಿಯೊಂದನ್ನು ವಿಜ್ಞಾನಿಗಳು ಪತ್ತೆಹಚ್ಚಿದ್ದಾರೆ!

Advertisement

ಅಮೆರಿಕದ ಟೆಕ್ಸಾಸ್‌ನಲ್ಲಿ ನಡೆದ ವಿಜ್ಞಾನ ಸಮಾವೇಶವೊಂದರಲ್ಲಿ ಈ ಕುರಿತು ಘೋಷಣೆ ಮಾಡಲಾಗಿದೆ. ಮಂಗಳ ಗ್ರಹದ ಥಾರ್ಸಿಸ್‌ ಜ್ವಾಲಾಮುಖೀ ಪ್ರದೇಶದಲ್ಲಿ ಈ ಅಗಾಧವಾದ ಜ್ವಾಲಾಮುಖಿಯು ಅಡಗಿ ಕುಳಿತಿದ್ದು, ಇದರಡಿಯಲ್ಲಿ ನೀರ್ಗಲ್ಲುಗಳ ಪದರಗಳಿವೆ. +9,022 ಮೀಟರ್‌ ಎತ್ತರದ ಜ್ವಾಲಾಮುಖಿ ಇದಾಗಿದ್ದು, 450 ಕಿ.ಮೀ. ಅಗಲವಿದೆ. ಇದಕ್ಕೆ “ನಾಕ್ಟಿಸ್‌ ಜ್ವಾಲಾಮುಖಿ’ ಎಂದು ಹೆಸರಿಡಲಾಗಿದೆ. ದೀರ್ಘ‌ಕಾಲದಿಂದಲೂ ಇದು ಸಕ್ರಿಯವಾಗಿದೆ. 1971ರಿಂದಲೂ ಮಂಗಳನ ಸುತ್ತ ಸುತ್ತುತ್ತ ಫೋಟೋಗಳನ್ನು ರವಾನಿಸುತ್ತಿರುವ ಮರೈನರ್‌ 9 ಬಾಹ್ಯಾಕಾಶ ನೌಕೆಗೂ ಇದರ ಸ್ಪಷ್ಟ ಚಿತ್ರ ಸೆರೆಹಿಡಿಯಲು ಸಾಧ್ಯವಾಗಿಲ್ಲ.

ಈ ಆವಿಷ್ಕಾರದಿಂದ ಲಾಭವೇನು?: ಮಂಗಳ ಗ್ರಹದ ಭೌಗೋಳಿಕ ವಿಕಸನ ದ ಅಧ್ಯಯನಕ್ಕೆ ನೆರವಾಗಲಿದೆ. ಭವಿಷ್ಯದ ರೊಬೋಟಿಕ್‌ ಮತ್ತು ಮಾನವ ಅನ್ವೇಷಣೆ ಯೋಜನೆಗಳಿಗೆ, ಗ್ರಹವು ಮಾನವ ವಾಸ ಯೋಗ್ಯವೇ ಎಂದು ಅರಿಯಲು ಸಹಕಾರಿಯಾಗಲಿದೆ.

Advertisement

Udayavani is now on Telegram. Click here to join our channel and stay updated with the latest news.

Next