ನವದೆಹಲಿ:ಸಿಖ್ಖ ಧರ್ಮಗುರು ಗುರುನಾನಕ್ ಅವರ ಜಯಂತಿ ಆಚರಣೆ ಹಿನ್ನೆಲೆಯಲ್ಲಿ ಸಿಖ್ಬ ಜಾಥಾದೊಂದಿಗೆ ಪಾಕಿಸ್ತಾನಕ್ಕೆ ತೆರಳಿದ್ದ ಕೋಲ್ಕತಾ ಮೂಲದ ವಿವಾಹಿತ ಮಹಿಳೆಯೊಬ್ಬಳು ಇಸ್ಲಾಂ ಧರ್ಮವನ್ನು ಸ್ವೀಕರಿಸಿ ಲಾಹೋರ್ ಮೂಲದ ವ್ಯಕ್ತಿಯನ್ನು ವಿವಾಹವಾಗಿರುವ ಘಟನೆ ತಡವಾಗಿ ಬೆಳಕಿಗೆ ಬಂದಿರುವುದಾಗಿ ವರದಿ ತಿಳಿಸಿದೆ.
ಇದನ್ನೂ ಓದಿ:ಶಬರಿಮಲೆಗೆ ತೆರಳುವ ಮಕ್ಕಳಿಗೆ ಆರ್‌ಟಿ-ಪಿಸಿಆರ್ ವರದಿ ಕಡ್ಡಾಯವಲ್ಲ : ಕೇರಳ ಸರಕಾರ
ಸಿಖ್ಖ ಯಾತ್ರಾರ್ಥಿಗಳ ಜತೆ ತೆರಳಿದ್ದ ಕೋಲ್ಕತಾ ಮೂಲದ ರಂಜಿತ್ ಕೌರ್ (ಹೆಸರು ಬದಲಾಯಿಸಲಾಗಿದೆ) ಎಂಬಾಕೆ ಇಸ್ಲಾಂಗೆ ಮತಾಂತರಗೊಂಡು, ಲಾಹೋರ್ ಮೂಲದ ಮುಹಮ್ಮದ್ ಇಮ್ರಾನ್ ಎಂಬಾತನನ್ನು ವಿವಾಹವಾಗಿದ್ದಾಳೆ. ಆದರೆ ಪಾಕಿಸ್ತಾನದಲ್ಲಿ ವಾಸ್ತವ್ಯ ಹೂಡಲು ಅವಕಾಶ ನೀಡದ ಕಾರಣ ಈಕೆ ಸಿಖ್ ಯಾತ್ರಾರ್ಥಿಗಳ ಜತೆ ಭಾರತಕ್ಕೆ ವಾಪಸ್ ಆಗಿರುವುದಾಗಿ ವರದಿ ವಿವರಿಸಿದೆ.
ಗಮನಾರ್ಹವಾದ ವಿಚಾರವೆಂದರೆ ರಂಜಿತ್ ಕೌರ್ ಮತ್ತು ಆಕೆಯ ಪತಿ ಪರಮ್ ದೀಪ್ ಸಿಂಗ್ (ಹೆಸರು ಬದಲಾಯಿಸಲಾಗಿದೆ) ಕಿವುಡ ಮತ್ತು ಮೂಕರಾಗಿದ್ದು, ಕುತೂಹಲದ ಸಂಗತಿ ಏನೆಂದರೆ ಮುಹಮ್ಮದ್ ಇಮ್ರಾನ್ ಕೂಡಾ ಕಿವುಡ ಮತ್ತು ಮೂಗನಾಗಿರುವುದಾಗಿ ವರದಿ ಹೇಳಿದೆ.
ವರದಿಯ ಪ್ರಕಾರ, ಕೌರ್ ಸಾಮಾಜಿಕ ಜಾಲತಾಣದ ಮೂಲಕ ಮುಹಮ್ಮದ್ ಇಮ್ರಾನ್ ನ ಪರಿಚಯವಾಗಿದ್ದು, ಈ ವಿಷಯ ಆಕೆಯ ಪತಿಗೂ ತಿಳಿದಿತ್ತು. ರಂಜಿತ್ ಕೌರ್ ತನ್ನ ಹೆಸರನ್ನು ಪರ್ವೀನ್ ಸುಲ್ತಾನಾ ಎಂದು ಬದಲಾಯಿಸಿಕೊಂಡಿರುವುದಾಗಿ ವರದಿ ತಿಳಿಸಿದೆ. ಮುಹಮ್ಮದ್ ಇಮ್ರಾನ್ ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ರಾಜನ್ ಪುರ್ ನಿವಾಸಿಯಾಗಿದ್ದಾನೆ.
ಪಾಕಿಸ್ತಾನದ ಕೋರ್ಟ್ ನಲ್ಲಿ ಭಾರತೀಯ ಮೂಲದ ಪತಿಯಿಂದ ರಂಜಿತ್ ಕೌರ್ ವಿಚ್ಛೇದನ ಪಡೆದುಕೊಂಡ ನಂತರ ನವೆಂಬರ್ 23ರಂದು ಲಾಹೋರ್ ನಲ್ಲಿ ಇಮ್ರಾನ್ ಜತೆ ವಿವಾಹವಾಗಿರುವುದಾಗಿ ವರದಿ ತಿಳಿಸಿದೆ. ಪಾಕಿಸ್ತಾನದಿಂದ ವಾಘಾ-ಅಟ್ಟಾರಿ ಗಡಿಗೆ ಕೌರ್ ವಾಪಸ್ ಆದ ಸಂದರ್ಭದಲ್ಲಿ ವಿಚಾರಣೆಗೊಳಪಡಿಸಲಾಗಿತ್ತು ಎಂದು ವರದಿ ತಿಳಿಸಿದೆ.