ಹೈದರಾಬಾದ್ : ಇಂದು ತೆಲುಗು ಚಿತ್ರರಂಗದಲ್ಲಿ ಸಮಂತಾ ಹಾಗೂ ನಾಗಚೈತನ್ಯ ಅವರ ವಿಚ್ಛೇದನ ವಿಷಯವೇ ಪ್ರಮುಖವಾಗಿದೆ. ಈ ದಂಪತಿ ಬೇರೆಯಾಗುತ್ತಿರುವುದಕ್ಕೆ ಸಾಕಷ್ಟು ಜನರು ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಆದರೆ, ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಮಾತ್ರ “ವಿಚ್ಛೇದನಗಳನ್ನು ಸಂಭ್ರಮಿಸಬೇಕು” ಎನ್ನುವ ಕಾಮೆಂಟ್ ಮಾಡಿ ಎಲ್ಲರ ಗಮನ ಸೆಳೆದಿದ್ದಾರೆ.
ನೇರ ನುಡಿ ಹಾಗೂ ವಿಭಿನ್ನ ಮ್ಯಾನರಿಸಂ ನಿಂದ ಖ್ಯಾತಿ ಪಡೆದಿರುವ ರಾಮ್ ಗೋಪಾಲ್ ವರ್ಮಾ ಈಗ ದಕ್ಷಿಣ ಭಾರತದ ತಾರೆಯರಾದ ಸಮಂತಾ ಅಕ್ಕಿನೇನಿ ಹಾಗೂ ನಾಗಚೈತನ್ಯ ಡೈವೋರ್ಸ್ ನೀಡಿರುವ ಬೆನ್ನಲ್ಲೇ ತಮ್ಮದೇ ಸ್ಟೈಲ್ ನಲ್ಲಿ ಟ್ವೀಟ್ ಮಾಡಿದ್ದಾರೆ.
ಸಂಭ್ರಮಿಸಬೇಕಾಗಿರುವುದು ಮದುವೆಗಳನ್ನಲ್ಲ, ವಿಚ್ಚೇದನಗಳನ್ನು.ಮದುವೆಗಳು ಸಾವಿದ್ದಂತೆ ಆದರೆ, ವಿಚ್ಚೇದನ ಒಂದು ರೀತಿ ಪುನರ್ಜನ್ಮ ಇದ್ದಂತೆ. ಮದುವೆಗಳು ನರಕದಲ್ಲಿ ಹಾಗೂ ವಿಚ್ಛೇದನಗಳು ಸ್ವರ್ಗದಲ್ಲಿ ನಿಶ್ಚಯವಾಗಿರುತ್ತವೆ ಎಂದಿದ್ದಾರೆ ಆರ್ ಜಿ ವಿ.
Related Articles
ಇನ್ನು ಪ್ರೀತಿಸಿ ಮದುವೆಯಾಗಿದ್ದ ನಾಗಚೈನತ್ಯ ಹಾಗೂ ಸಮಂತಾ ಅವರು ಇಂದು ಅಧಿಕೃತವಾಗಿ ಬ್ರೇಕಪ್ ಮಾಡಿಕೊಂಡರು. ನಾಲ್ಕು ವರ್ಷಗಳ ದಾಂಪತ್ಯಕ್ಕೆ ಗುಡ್ ಬೈ ಹೇಳಿದ ಈ ಜೋಡಿ, ನಮ್ಮ ಖಾಸಗಿ ಬದುಕನ್ನು ಎಲ್ಲರೂ ಗೌರವಿಸಿ, ಇಂತಹ ಸಂದರ್ಭದಲ್ಲಿ ನಮ್ಮ ಜೊತೆ ನಿಲ್ಲಿ ಎಂದು ಮಾಧ್ಯಮಗಳಿಗೆ ಹಾಗೂ ಅಭಿಮಾನಿಗಳಿಗೆ ಮನವಿ ಮಾಡಿದೆ.