Advertisement
“ಅಮ್ಮಾ ನಂಗೀಗ್ಲೆ ಮದ್ವೆ ಬೇಡ… ನಾನು ಸೆಟ್ಲ ಆಗ್ಬೇಕು. ಆಮೇಲೆ ಮದ್ವೆ- ಮಕ್ಳು ಎಲ್ಲಾ…’ ಮಗಳು ಫೈನಲ್ಲಾಗಿ ಘೋಷಿಸಿಬಿಟ್ಟಳು. ವಯಸ್ಸು ಇಪ್ಪತ್ತೆಂಟಾದರೂ ಮದ್ವೆ ಬೇಡ ಅಂತಿದ್ದಾಳಲ್ಲ, ಅವಳ ಓರಗೆಯವರೆಲ್ಲ ಮದ್ವೆಯಾಗಿದ್ದಾರೆ. ಇವಳಿಗೆ ಹ್ಯಾಗಪ್ಪಾ ಹೇಳ್ಳೋದು ಅನ್ನೋ ಚಿಂತೆ ಅಮ್ಮನದು. ಇದು ನಮ್ಮ ಯುವ ಪೀಳಿಗೆಯವರ ಕಥೆ.
Related Articles
ಮದ್ವೆ ಎಂಬುದು ಪವಿತ್ರ ಬಂಧವಲ್ಲ, ಅದೊಂದು “ಬಂಧನ’ ಎಂಬ ಭಾವನೆ ಈಗಿನವರದ್ದು. ಮೊದಲು, ಉದ್ಯೋಗ ಬರೀ ಪುರುಷರ ಲಕ್ಷಣವಾಗಿತ್ತು. ಆದರೀಗ ಹುಡುಗಿಯೂ ದುಡಿಯುತ್ತಿದ್ದಾಳೆ. ನಾನು ಉದ್ಯೋಗದಲ್ಲಿ ಮೇಲಕ್ಕೆ ಏರಬೇಕು, ವಿದೇಶಕ್ಕೆ ಹಾರಬೇಕು. ಮದುವೆಯಾಗಿ ಬಿಟ್ಟರೆ ನನ್ನ ರೆಕ್ಕೆಗಳು ಮುರಿಯುತ್ತವೆ. ಇನ್ಯಾರೋ ನನ್ನನ್ನು ಕಂಟ್ರೋಲ್ ಮಾಡುತ್ತಾರೆ. ಸಂಗಾತಿಯ ಜೊತೆಗೆ ಹೊಂದಾಣಿಕೆ ಮಾಡಿಕೋಬೇಕು. ಆಗ ನನ್ನ ಕೆರಿಯರ್ ಹಾಳಾಗುತ್ತದೆ; ಹೀಗೆ ಯೋಚಿಸಿ ಮ ದ್ವೆ ಯಿಂದ ದೂರ ಉಳಿಯುವ ಹುಡುಗ-ಹುಡುಗಿಯರ ಸಂಖ್ಯೆ ಹೆಚ್ಚುತ್ತಿದೆ.
Advertisement
2. ಯಾರ್ರೀ ಹೊಂದಿಕೊಳ್ತಾರೆ?ಮದ್ವೆಗೆ ಇನ್ನೊಂದು ಹೆಸರೇ ಹೊಂದಾಣಿಕೆ. ಗಂಡು- ಹೆಣ್ಣು ಪರಸ್ಪರ ಅರ್ಥ ಮಾಡಿಕೊಂಡು ಒಂದೇ ಸೂರಿನಡಿ ಬದುಕಬೇಕು. ಆದರೆ, ಇಂದಿನವರಿಗೆ ಅದು ಹಿಂಸೆಯಂತೆ ಕಾಣುತ್ತದೆ. ಡೈವೋರ್ಸ್‌ಗೆ ಅರ್ಜಿ ಹಾಕುವ ಜೋಡಿಗಳು ನೀಡುವ ಕಾರಣಗಳನ್ನು ನೋಡಿದರೆ, ಹೊಂದಾಣಿಕೆ ಎಂಬುದು ಇಂದಿನವರಿಗೆ ಎಷ್ಟು ಕಷ್ಟ ಎಂಬುದು ಅರ್ಥವಾಗುತ್ತದೆ. ಗಂಡ- ಹೆಂಡತಿ ಒಂದೇ ಟಾಯ್ಲೆಟ್ ಬಳಸುವ ವಿಷಯಕ್ಕೆ ಜಗಳವಾಡಿ, ಡೈವೋರ್ಸ್ ಪಡೆದ ಉದಾಹರಣೆಯೂ ಇದೆ ಎಂದರೆ ಯೋಚಿಸಿ ನೋಡಿ! 3. ಒಂಟಿಯಾಗಿರುವುದೇ ಲೇಸು!
ಜಗತ್ತಿನಲ್ಲಿ ಎಲ್ಲರೂ ಒಂಟಿ, ಯಾವ ಸಂಬಂಧವೂ ಶಾಶ್ವತವಲ್ಲ ಎಂಬ ಸಿನಿಕತನ ನಮ್ಮೊಳಗೆ ಮೂಡುತ್ತಿದೆ. ಅಯ್ಯೋ, ನಾನು ಒಂಟಿಯಾಗಿಯೇ ಖುಷಿಯಾಗಿದ್ದೇನೆ. ಸಂಬಂಧಗಳ ಗೊಡವೆಯೇ ಬೇಡ ಎಂದು ಯುವ ಪೀಳಿಗೆ ಮದ್ವೆಯನ್ನು ನಿರಾಕರಿಸುತ್ತಿದೆ. ಹೀಗೆ ನಾನು, ನಾನು ಎಂದು ಯೋಚಿಸಿದರೆ ಇನ್ನೊಬ್ಬರನ್ನು ಸುಲಭವಾಗಿ ಒಪ್ಪಿಕೊಳ್ಳಲು, ಸಂಬಂಧ ಬೆಸೆಯಲು ಕಷ್ಟವಾಗುತ್ತದೆ. ಪ್ರೇಮ ವೈಫಲ್ಯಗಳು ಕೂಡ ಈ ಮನಃಸ್ಥಿತಿ ಮೂಡಲು ಕಾರಣ ಎನ್ನುತ್ತಾರೆ ಮನೋವೈದ್ಯರು. 4. ಜವಾಬ್ದಾರಿ ಹೊರಲಾಗದ ಮನಃಸ್ಥಿತಿ
ಇಂದಿನವರದ್ದು ಕೇರ್ ಫ್ರೀ ಮನಃಸ್ಥಿತಿ. ಮದ್ವೆಯ ತಲೆನೋವು ಯಾರಿಗೆ ಬೇಕು ಎಂದು ಯೋಚಿಸಿ ಸಂಸಾರ ಸಾಗರಕ್ಕಿಳಿಯಲು ಹಿಂದೇಟು ಹಾಕುತ್ತಿದ್ದಾರೆ ಈಗಿನವರು. ಒಬ್ಬ ಸಂಗಾತಿಯ ಜೊತೆಗೆ ಜೀವಿಸುವುದು, ಅವರ ಇಷ್ಟ-ಕಷ್ಟಗಳಿಗೆ ಹೊಂದಿಕೊಳ್ಳುವುದು ಇಂದಿನವರಿಗೆ ಒಗ್ಗದ ಸಂಗತಿ. ಹಾಗಾಗಿ ಹೆಚ್ಚಿನವರು ಲಿವ್ ಇನ್ ರಿಲೇಶನ್‌ನಲ್ಲಿದ್ದಾರೆಯೇ ಹೊರತು, ಅದನ್ನು ಮದ್ವೆಯವರೆಗೆ ತೆಗೆದುಕೊಂಡು ಹೋಗುವುದಿಲ್ಲ. 5. ನಾನು ಯಾರಿಗೂ ಕಮ್ಮಿಯಿಲ್ಲ!
ಹೆಣ್ಣು ಮಕ್ಕಳು ಇಂದು ತಮಗೆ ಸಿಕ್ಕಿರುವ ಸ್ವಾತಂತ್ರ್ಯ ಮತ್ತು ಅವಕಾಶಗಳಿಂದ ಎತ್ತರೆತ್ತರಕ್ಕೆ ಬೆಳೆಯುತ್ತಿದ್ದಾರೆ. ಮದ್ವೆಯಾಗಿ, ಮಕ್ಕಳನ್ನು ಹೆತ್ತು, ಮಾದರಿ ಸೊಸೆಯಾಗಿರುತ್ತೇನೆ ಎಂದು ಯಾವ ಹುಡುಗಿಯೂ ಹೇಳುವುದಿಲ್ಲ. ಆರ್ಥಿಕವಾಗಿಯೂ ಸ್ವಾವಲಂಬಿಯಾಗಿರುವ ಆಕೆ ಗಂಡಿನ ಆಶ್ರಯವನ್ನು ನಂಬಿಕೊಂಡಿಲ್ಲ. ಈ ಕಾರಣದಿಂದ ಹೆಣ್ಣು ಮಕ್ಕಳು ಕೂಡ ಮ ದ್ವೆ ಎಂದರೆ ಮೂಗು ಮುರಿಯುತ್ತಿದ್ದಾರೆ. 6. ಹೆಚ್ಚುತ್ತಿರುವ ವಿಚ್ಛೇದನ
ಇತ್ತೀಚೆಗೆ ಎಲ್ಲ ಮದ್ವೆಗಳೂ ಡೈವೋರ್ಸ್‌ನಲ್ಲಿ ಅಂತ್ಯ ಕಾಣುತ್ತಿವೆ. ಹಿರಿಯರು ನಿಶ್ಚಯಿಸಿದ ಮ ದ್ವೆಯಷ್ಟೇ ಅಲ್ಲ, ಪ್ರೀತಿಸಿ ಮ ದ್ವೆಯಾದವರೂ ವಿಚ್ಛೇದನ ಪಡೆಯುತ್ತಿದ್ದಾರೆ. ಇದು ಸಮಾಜದ ಮೇಲೆ ಎಂಥ ಪರಿಣಾಮ ಬೀರುತ್ತಿದೆಯೆಂದರೆ, ಇಂದಿನ ಪೀಳಿಗೆ ಮದ್ವೆಯ ಬಗ್ಗೆ ನಂಬಿಕೆ ಕಳೆದುಕೊಳ್ಳುತ್ತಿದೆ.