Advertisement
ಸುಮಾರು ಐದು ದಶಕಗಳ ಹಿಂದಿನ ಸನ್ನಿವೇಶವಿದು. ಆ ಕಾಲವೇ ಹಾಗಿತ್ತು. ಹೆಣ್ಣುಮಕ್ಕಳಿಗೆ ಹೆಚ್ಚಿನ ವಿದ್ಯಾಭ್ಯಾಸಕ್ಕೆ ಸಾಮಾನ್ಯವಾಗಿ ಅವಕಾಶವಿರಲಿಲ್ಲ. “”ಹತ್ತನೆಯ ತರಗತಿಯೆಂದರೆ ಒಂದು ಘಟ್ಟ . ಹುಡುಗಿಯರಿಗೆ ಪೋಸ್ಟ್ ಕಾಗದ ಓದಲು, ಬರೆಯಲು ಬರಬೇಕು. ಹಾಲಿನ ಲೆಕ್ಕ, ತರಕಾರಿ ಲೆಕ್ಕ ಇತ್ಯಾದಿ ಸಣ್ಣಪುಟ್ಟ ವ್ಯವಹಾರಗಳಿಗೆಲ್ಲ ಕಲಿತ ಲೆಕ್ಕ ಸಾಕು. ಇನ್ನೂ ಹೆಚ್ಚಿನ ಓದೇಕೆ? ಹೆಚ್ಚು ಓದಿದರೆ ಮುಸುರೆ ತಿಕ್ಕುವುದು ತಪ್ಪುತ್ತದೆಯೇ? ಸುಮ್ಮನೆ ಹಣವೂ ಖರ್ಚು, ಹುಡುಗಿಗೆ ಶ್ರಮವೂ ಆಗುತ್ತದೆ…” ಎಂದು ಹೆಣ್ಣು ಹೆತ್ತ ಮಾತಾಪಿತರಲ್ಲಿ ಹೆಚ್ಚಿನವರ ಲೆಕ್ಕಾಚಾರ.
Related Articles
Advertisement
ಇದೀಗ ಎಂಟು ವರ್ಷಗಳ ಬಳಿಕ, ಮಹತಿಯೇ ಅವರ ಬಾಳಿನ ಕೇಂದ್ರಬಿಂದು. ನೊಂದ ಹೆತ್ತವರು ಹೆಣೆದ ಬಿಗಿಭದ್ರತೆಯ ಕೋಟೆಯಲ್ಲಿ ಮಹತಿ ಇರಬೇಕಾದ ಅನಿವಾರ್ಯತೆ. ಅಕ್ಕನ ವಿಚಾರ ತಿಳಿದಿದ್ದ ಆಕೆ ಅಂತಹ ದಾರಿ ತನಗಲ್ಲದ, ಒಲ್ಲದ ದಾರಿ ಎಂದು ಬಾರಿ ಬಾರಿ ಅತ್ತುಕೊಂಡು ಪ್ರಮಾಣ ವಚನದಂತೆ ಹೇಳಿಕೊಂಡಿದ್ದಳು. ಹಿರಿಯರೊಳಗಿನ ಹೆಪ್ಪುಗಟ್ಟಿದ ನೋವು ಅದನ್ನು ಅಂಗೀಕರಿಸಲಿಲ್ಲ, ಕ್ರಮೇಣ ಅವಳ ಕಾಲೇಜು ವಿದ್ಯಾಭ್ಯಾಸಕ್ಕೆ ಅಸ್ತುಮುದ್ರೆ ಬಿದ್ದಿತ್ತು.
ಶಿಸ್ತಿನ ಸಿಪಾಯಿಗಳಾಗಿದ್ದ ಹೆತ್ತವರನ್ನು ಕಾಡಿಬೇಡಿ ಸಹಶಿಕ್ಷಣದ ಕಾಲೇಜಿಗೆ ಸೇರಿಕೊಂಡದ್ದಾಯ್ತು, ಅದು ಮನೆಗೆ ಸಮೀಪದ ಕಾಲೇಜು ಎಂಬ ಕಾರಣಕ್ಕಾಗಿ. ಆದರೆ… “ಸಹಪಾಠಿ ಹುಡುಗರೊಂದಿಗೆ ಮಾತುಕತೆ ಸಲ್ಲದು, ಓಡಾಡುವಂತಿಲ್ಲ, ಕಾಲೇಜು ಮುಗಿದ ತಕ್ಷಣ ಮನೆಗೆ ವಾಪಸಾಗಬೇಕು. ವರ್ಷ ವರ್ಷವೂ ಪಾಸಾಗುತ್ತ ಮುಂದೆ ಸಾಗಬೇಕು, ಅನುತ್ತೀರ್ಣಳಾದರೆ ಕಾಲೇಜು ವ್ಯಾಸಂಗ ಅಲ್ಲಿಗೆ ಬಂದ್’ ಇತ್ಯಾದಿ ಶರತ್ತುಗಳ ಮಾಲೆ ಅವಳಿಗೆ ಒಡ್ಡಿದ್ದರು. ಅದನ್ನು ನಗು ನಗುತ್ತಲೇ ಧರಿಸಿಕೊಂಡಿದ್ದಳು ವಿನೀತ ಪುತ್ರಿ, ಫ್ಯಾಶನ್-ಗೀಶನ್‌ಗೆಲ್ಲ ಅವಕಾಶವಿಲ್ಲ, ಉಡುಪು ಸೀರೆ, ಅಪ್ಪಟ ಸೀರೆ ಮಾತ್ರವೇ, ಅದು ಅವಳಿಗೂ ಪ್ರಿಯವಾದ್ದರಿಂದ ತಕರಾರಿನ ಪ್ರಶ್ನೆಯಿಲ್ಲ.
ಮನೆಯಲ್ಲಿ ಆಗೀಗ ವಿಚಾರಣೆಯಾಗುತ್ತಿತ್ತು, ಹೊಸತರಲ್ಲಿ. ಅಮ್ಮನ ಪ್ರಶ್ನೆಗಳಿಗೆ ಸೀಮಿತ ವಲಯ, ತಣ್ಣಗಿನ ಹಿನ್ನೆಲೆ…“”ಮಹತೀ… ಯಾರು ನಿನ್ನ ಫ್ರೆಂಡ್ಸ್ ಕಾಲೇಜಿನಲ್ಲಿ…” “”ಫಿಲೋಮಿನಾ ಮತ್ತು ಸಹನಾ ಅಂತ…” “”ಇಬ್ಬರೆಯಾ? ಎಷ್ಟು ಹುಡುಗಿಯರಿದ್ದಾರೆ?” “”ಹುಡುಗಿಯರು ಹನ್ನೆರಡು ಮಂದಿ ಇದ್ದಾರೆ, ನನೆY ಫ್ರೆಂಡ್ಸ್ ಇಬ್ರೇ… ಮತ್ಯಾರೂ ಇಲ್ಲ…” “”ಆಯ್ತು… ಆದ್ರೆ… ಯಾರ ಹತ್ರವೂ ಹೆಚ್ಚು ಫ್ರೆಂಡ್‌ಶಿಪ್ ಬೇಡ… ಆಯ್ತಾ?…” ಇಂಥದ್ದೇ ಪ್ರಶ್ನಾವಳಿ ಆಗಾಗ… ಮಗಳು ಸ್ನಿಗ್ಧ ಮಂದಸ್ಮಿತದೊಂದಿಗೆ ಮಾತಿಗೆ ಮಂಗಳ ಹಾಡುತ್ತಿದ್ದಳು ಪ್ರತಿ ಬಾರಿಯೂ. ಆ ಮಂದಹಾಸದಲ್ಲಿ ಏನೆಲ್ಲ ಒಳಗೊಂಡಿತ್ತು? ಆತ್ಮವಿಶ್ವಾಸ, ತಾಯಿಯ ಮುಗ್ಧ, ಅತಿ ಕಾಳಜಿ ಬಗ್ಗೆ ಕನಿಕರ, ತಂದೆಯ ಬಗ್ಗೆ ಭಯ ಇತ್ಯಾದಿ ಎಲ್ಲ… ಎಲ್ಲವೂ…! ಅಪ್ಪನೂ ಒಮ್ಮೊಮ್ಮೆ ತನಿಖಾಧಿಕಾರಿಯೇ. ಆಗ ಮತ್ತಷ್ಟು ವಿವರಗಳ ಸೇರ್ಪಡೆ. “”ನಿನ್ನ ಕ್ಲಾಸ್‌ಮೇಟ್ಸ್ ಹುಡುಗರೆಲ್ಲ ಹೇಗೆ?” “”ಹೇಗೆ ಅಂದ್ರೆ? ಎಲ್ಲಾ ಪಾಪದವರೇ… ಅವ್ರ ಪಾಡಿಗೆ ಅವ್ರು ಇರ್ತಾರೆ… ಅಷ್ಟೇ…” “”ಸರಿ ಸರಿ… ಲೆಕ್ಚರರ್ ಹೇಗೆ? ಗಂಡಸರಿದ್ದಾರಾ?” “”ಇದ್ದಾರೆ ಅಪ್ಪಾ… ನಾಲ್ವರಿದ್ದಾರೆ…” “”ಸಣ್ಣ ಪ್ರಾಯದವರೆ? ಯಾವ ಜಾತಿಯವ್ರು?” “”ಹೌದಪ್ಪ… ಇಬ್ರು ಯಂಗ್… ಯಾರದ್ದಾದ್ರೂ ಜಾತಿ, ಪ್ರಾಯ, ಎಲ್ಲಾ ಹೇಗೆ ಗೊತ್ತಾಗ್ಬೇಕು ನನೆY? ಅದೂ ಅಲ್ಲದೆ, ಅದ್ಯಾಕೆ ನನೆY?”
“”ಸುಮ್ನೆ ಕೇಳಿದೆ… ಮಹತೀ… ನಿನ್ನ ಪಾಡಿಗೆ ನೀನಿದ್ರೆ ಸಾಕು… ಚೆನ್ನಾಗಿ ಕಲೀಬೇಕಷ್ಟೇ…” “”ಆಯ್ತಪ್ಪಾ… ಎಲ್ಲ ನೆನಪುಂಟು…” ಅಂಥದ್ದೇ ಬಿಗುವಿನ ಪ್ರಶ್ನೆಗಳು ಅಪ್ಪನಿಂದಲೂ… ಮಗಳದು ಸದಾ ಮುಗುಳ್ನಗುವಿನ ಉತ್ತರಗಳೇ. ಒಮ್ಮೊಮ್ಮೆ ತಲೆ ಕೊಡಹಿಯಾಳು ಅಷ್ಟೇ. ಒಂದೆರಡು ತಿಂಗಳು ಕಳೆದಿರಬಹುದು. ಒಂದು ದಿನ ಕಾಲೇಜಿನಿಂದ ಮನೆಗೆ ಮರಳಿದಾಕೆಗೆ ಹೆತ್ತವರ ಬಿರುನುಡಿಯ ಮಾತುಕತೆ ಬಾಗಿಲಲ್ಲೇ ಕಿವಿಗೆ ಅಪ್ಪಳಿಸಿದವು. ಮೊದಲ ನುಡಿ ಅಮ್ಮನದೇ! “”ಬೇಡವೆಂದ್ರೂ ಅವಳನ್ನು ಕಾಲೇಜಿಗೆ ಕಳಿಸಿದ್ದು ನೀವೇ ಅಲ್ವಾ? ಈಗ ಹೀಗಂದ್ರೆ ಹೇಗೆ?” “”ಹಾಗಲ್ವೇ… ಆ ಅಂಗಡಿಯವ° ಮಾತು ಕೇಳಿ ನನೊYಂದು ಡೌಟ್ ಅಷ್ಟೇ…” “”ಇರ್ಲಿ… ನಾಳೆ ನೋಡ್ವಾ… ಅವ್ಳು ಬಸ್ಸಿಳಿದು ಬರುವಾಗ ನಾನೇ ಗಮನಿಸ್ತೇನೆ… ಏನು ಸಮಾಚಾರ ಅಂತ ಆಯ್ತಾ? ಸುಮ್ಮನಿರಿ ಈಗ… ಅವ್ಳು ಬರ್ಲಿಕ್ತಾಯ್ತು…”ಮತ್ತೆ ಗವ್ವೆಂದಿತು ಮೌನ. ಯಾರೂ ನೀರವತೆ ಕದಡಲಿಲ್ಲ ಸ್ವಲ್ಪ ಕಾಲ. ಒಬ್ಬೊಬ್ಬರು ಒಂದೊಂದು ದಿಕ್ಕು ಹಿಡಿದಿದ್ದರು. ಮತ್ತೆಲ್ಲ ಮಾಮೂಲು ಮಾತುಕತೆ. ಮರುದಿನ, ಸಂಜೆ ಮನೆಗೆ ಮರಳಿದ ಮಹತಿಗೆ ಎದುರಾದದ್ದು ತಂದೆಯ ಗಡಸು ಮುಖ, ತಾಯಿಯೂ ಗಂಭೀರವದನೆಯೇ! ಇವಳ್ಳೋ, ಮುದುಡಿದ ಗುಬ್ಬಚ್ಚಿಮರಿ… ಆದರೂ ಒಂದಿಷ್ಟು ಒಳಧೈರ್ಯ ಬೆನ್ನು ತಟ್ಟುತ್ತಿತ್ತು. ತಪ್ಪೇ ಮಾಡದವಳಿಗೇಕೆ ಭಯ? “”ನಿಲ್ಲು ಮಹತೀ… ನಿನೆY ನಾನು ಹೇಳಿದ್ದೇನು? ಈಗ ನೀನು ಮಾಡ್ತಿರೋದೇನು?” ತಂದೆ ಅಣತಿ ಮಹತಿಯ ಮುನ್ನಡೆಗೆ ತಡೆಯಾಯ್ತು. ಗಕ್ಕನೆ ನಿಂತುಬಿಟ್ಟಳು ಮಗಳು. “”ನಾನೇನು ಮಾಡಿದೆ ಅಪ್ಪಾ?” “”ಹುಡುಗರತ್ರ ಮಾತಾಡುವ ಅಗತ್ಯವಿಲ್ಲ ಅಂತ ನಾನು ಖಡಕ್ಕಾಗಿ ಹೇಳಿದ್ರೂ ನೀನು ಯಾರೋ ಹುಡುಗನೊಟ್ಟಿಗೆ ಮಾತಾಡ್ತಾ ಬರಿ¤àಯಂತೆ, ಮನೆಗೆ ಬರುವಾಗ?” “”ಇಲ್ಲಪ್ಪಾ…” “”ಇಲ್ವಾ? ಎರಡು-ಮೂರು ದಿನಗಳಿಂದ ನೀನು ಬಸ್ಸಿಳಿದು ಮನೆಗೆ ಬರ್ತಾ ಯಾವನ ಜತೆಯೋ ನಗ್ತಾ, ಮಾತಾಡ್ತಾ ಬರಿ¤àಯಂತೆ. ಆ ಅಂಗಡಿಯವನು ಹೇಳಿದಾಗ ನಾನು ನಂಬ್ಲಿಲ್ಲ… ಆದ್ರೇ… ನಿನ್ನೆ ನಿನ್ನ ಅಮ್ಮನೇ ನೋಡಿದ್ಲಂತೆ… ಏನು ಮಾತು… ಏನು ನಗು! ಆಮೇಲೆ ಬೇರೆಯೇ ಕಥೆ ಆಗ್ತದೆ ಅದು…” ಗುಡುಗಿತು ಧ್ವನಿ. ಆದರೆ, ಮಳೆ ಸುರಿಯಲಿಲ್ಲ. ಮಗಳು ಮಂದಮಾರುತವಾದಳು. “”ಅಪ್ಪಾ… ಅದಾ? ಅದು ಅವನಲ್ಲ… ಅವಳು. ನಮ್ಮ ಕಾಲೇಜಿನ ಜೂಲಿಯಾನಾ ಅಂತ, ನಮ್ಮ ನೆರೆಮನೆಯ, ನನ್ನ ಕ್ಲಾಸ್‌ಮೇಟ್ ಫಿಲೋಮಿನಾ ಇದ್ದಾಳಲ್ಲ… ಅವಳ ಅಕ್ಕ, ಫಿಲೋಮಿನಾಗೆ ಜ್ವರ ಅಂತ ಹೇಳ್ತಿದು… ಮಾತಾಡ್ತಿದ್ದೆವು…” “”ಮತ್ತೆ ಹುಡುಗ ಅಂತ ಅಂಗಡಿಯವ, ಹೋಗ್ಲಿ… ನಿನ್ನ ಅಮ್ಮ ಹೇಳಿದ್ದು ಸುಳ್ಳಾ ಹಾಗಾದ್ರೆ…?” “”ಅಲ್ಲಪ್ಪ… ಅಮ್ಮ ಹಾಗೆ ಹೇಳಿಕ್ಕೆ ಅವಳ ಡ್ರೆಸ್ಸೇ ಕಾರಣ. ಜೂಲಿಯಾನಾ ಎನ್‌ಸಿಸಿಗೆ ಸೇರಿದ್ದಾಳೆ, ಕಾಲೇಜಿಂದ ಅದೇ ಡ್ರೆಸ್ಸಲ್ಲಿ ಮನೆಗೆ ಬರಿ¤ದುÉ. ಬಸ್ಸಿಳಿದು ನಾವು ಮಾತಾಡ್ತಾ ಜತೆಗೇ ಬರಿ¤ದ್ದೆವು ಅಷ್ಟೇ… ದೂರದಿಂದ ನೋಡಿದ ಅಂಗಡಿಯವ್ನು , ಅಮ್ಮ ಎಲ್ಲಾ ತಪ್ಪು ತಿಳ್ಕೊಂಡಿದ್ದಾರೆ ಅಷ್ಟೇ ಅಪ್ಪಾ…” “”ನಿಜ ಹೇಳ್ತಿದ್ಯಾ ನೀನು…” “”ಹೌದಪ್ಪ… ಇದೇ ಸತ್ಯ… ಬೇಕಿದ್ರೆ ನೀವೂ ವಿಚಾರಿಸಿ. ನಿಮೂY ಅವಳ ತಂದೆ ಗೊತ್ತಲ್ವಾ…?”””ಹೌದಾ? ಸರಿ. ವಿಚಾರಣೆ ಏನೂ ಬೇಡ. ನಿನ್ನನ್ನು, ನಿನ್ನ ಮಾತನ್ನು ಎಲ್ಲಾ ನಂಬೆ¤àನೆ. ಆದ್ರೂ ಮಗಳೇ…” ಮತ್ತೂ ಸಂಶಯಾತ್ಮನ ಧ್ವನಿ ಮಹತಿಯನ್ನು ತಟ್ಟಿದ್ದು ಬಲವಾಗಿಯೇ. “”ಅಪ್ಪಾ… ಸಂಶಯವೇ ಬೇಡ. ನನ್ನ ವಿದ್ಯೆಯ ಮೇಲಾಣೆ. ಎಲ್ಲ ವಿವರಿಸಿದ್ದಾಯ್ತಲ್ಲ? ನಾನು ತಪ್ಪು ಮಾಡ್ಲಿಲ್ಲ… ಮಾಡೋದು ಇಲ್ಲ…” “”ಇದಕ್ಕೆಲ್ಲ ಆಣೆ ಭಾಷೆ ಬೇಡ ಮಹತೀ, ಇನ್ನು ಆರಾಮವಾಗಿರು…” ಅಳುಕುತ್ತಲೇ ಮೌನಿಯಾಗಿದ್ದು ತಾಯಿ ಈಗ ಜತೆಗೂಡಿದ್ದರು. “”ನಿನ್ನ ಆರಾಮವೇ ನಮಗೂ ಬೇಕಾದ್ದು. ಆಗ ನಾವೂ ಆರಾಮವೇ” ನಗುತ್ತ ತಾಯಿ ಮುಂದುವರಿದಳು. “”ಆಯ್ತು, ಸಮಸ್ಯೆ ಏನಿಲ್ಲದೆ ಎಲ್ಲಾ ಮುಗೀತಲ್ಲ… ಮಹತೀ, ನಿನೆY ಟೀ, ಚಿಪ್ಸ್ ಜತೆಗೆ ಸ್ವಲ್ಪ ಕೇಸರಿಬಾತ್ ಮಾಡ್ತೇನೆ… ನಿಮ್ಗೆ ಇಬ್ರಿಗೂ ಇಷ್ಟ ಅಲ್ವಾ?….” ಅಡುಗೆ ಕೋಣೆಗೆ ಸಾಗಿದರು ತಾಯಿ.””ಹಾಂ… ನಾನೂ ಹೆಲ್ಪ್ ಮಾಡ್ತೇನೆ…” ಜತೆಗೇ ಸಾಗಿದಳು ಮಗಳು. “”ಇದು ಸೋಲಲ್ಲ… ಗೆಲುವು…” ಸ್ವಗತದೊಂದಿಗೆ ತಂದೆಯೂ ನಿರಾಳವಾಗಿದ್ದ. ವರ್ಷಗಳು ಉರುಳತೊಡಗಿದ್ದವು. ಮಹೇಶರು ಇತ್ತೀಚೆಗೆ ಪಕ್ಕಾ ಲೆಕ್ಕಾಚಾರದಲ್ಲಿ ತೊಡಗಿಕೊಂಡರು. ಮಹತಿ ಬಿ.ಎ. ಪದವೀಧರೆಯಾದೊಡನೆಯೇ ವರಾನ್ವೇಷಣೆ, ವಿವಾಹ ಇತ್ಯಾದಿ ಕರ್ತವ್ಯ ಪೂರೈಸಿಬಿಡಬೇಕು, ಹಣದ ವಿಲೇವಾರಿ- ಎಂಬೆಲ್ಲ ಮುಂದಾಲೋಚನೆ… ಅವಕ್ಕೆಲ್ಲ ಸದಾ ಮೀನಾಕ್ಷಿಯ ಅಸ್ತುಮುದ್ರೆಯೇ. ಆದರೆ ಮಾನವ ಲೆಕ್ಕಾಚಾರಗಳನ್ನೆಲ್ಲ ಮೇಲಿನ ಮೇಧಾವಿ ಗಣಿತಜ್ಞ ಅಂಗೀಕರಿಸಬೇಕಲ್ಲ? ಫೈನಲ್ ಬಿ.ಎ. ಪರೀಕ್ಷೆಯಲ್ಲಿ ಕಾಲೇಜಿಗೇ ಟಾಪರ್ ಆಗಿ ಪ್ರತಿಭಾ ಪ್ರಕಾಶನದೊಂದಿಗೆ ಹೊರಹೊಮ್ಮಿದಳು ಮಹತಿ. ಪದವೀಧರೆಯಾದೊಡನೆಯೇ ಮತ್ತೆ ವಿದ್ಯೆಯ ಗೀಳು ಬೆಂಬತ್ತಿತು. “”ಇನ್ನು ಎರಡೇ ವರ್ಷ ಸ್ನಾತಕೋತ್ತರ ಪದವಿಗೆ” ಎಂಬ ಅವಳ ಆಸೆಗೆ ಹೆತ್ತವರು ಇಂಬು ನೀಡಬೇಕಾಯಿತು. ಹಾಗೆ ಮಹತಿ ಸ್ನಾತಕೋತ್ತರ ಪದವಿ ಪಡೆದು ಹಿರಿಹಿರಿ ಹಿಗ್ಗಿದಳು. ಕಲಿತ ಪದವಿ ಕಾಲೇಜಿನಲ್ಲೇ ಉಪನ್ಯಾಸಕಿಯ ಹುದ್ದೆಯೂ ದೊರೆಯುವಂತಾದಾಗ “”ಒಂದು ವರ್ಷ ಮಾತ್ರ ಕೆಲಸ…” ಎಂದು ಹೆತ್ತವರನ್ನು ಒಲಿಸಿಕೊಂಡು ಪ್ರಿಯ ಉದ್ಯೋಗ ನಿರ್ವಹಿಸತೊಡಗಿದಳು. ಮುಂದಿನ ಲೆಕ್ಕಾಚಾರ ಬೇರೆಯೇ ಆಗಿತ್ತು. ವಿಧಿ ಹೆಣೆದ ದಾರಿ ಭಿನ್ನವಾಗಿತ್ತು. ಆರೇ ತಿಂಗಳಲ್ಲಿ ಸಹೋದ್ಯೋಗಿ ಪ್ರಶಾಂತ್, ಮಹತಿಯನ್ನು ಮೆಚ್ಚಿಕೊಂಡಿದ್ದವನು ಅವಳ ಹೆತ್ತವರನ್ನು ಮುಖಾಮುಖೀಯಾದ, ಸುಸೂತ್ರವಾಗಿ ವಿವಾಹ ಮಹೋತ್ಸವ ನೆರವೇರಿತು, ಯಾವ ತಡೆಯೂ ಇಲ್ಲದೆ. “ಎಲ್ಲಾ ದೇವರ ದಯೆ!’ ಸಾರ್ಥಕ್ಯ ಹಾಗೂ ಭಕ್ತಿಯ ಆಧಿಕ್ಯದಿಂದ ಮೀನಾಕ್ಷಿಗೆ ಪರಮ ಸಂತೃಪ್ತಿ. “”ಮಹತಿಯದೇನೂ ತಪ್ಪಿಲ್ಲ… ಅಳಿಯಂದಿರಿಂದಲೇ ಪ್ರಪೋಸಲ್ ಬಂದದ್ದು. ಇದು ಸೆಮಿಲವ್ ಮ್ಯಾರೇಜ್…” ಅನ್ನುತ್ತ ಬಂಧುಬಳಗದವರ ಮುಂದೆ ನಗೆಯಾಡುತ್ತಿದ್ದರು ಮಹೇಶ್. – ಸುಶೀಲಾ ಆರ್. ರಾವ್