Advertisement
ಮಾ.17 ರಂದು ಕುಂದಾಪುರ ತಾಲೂಕಿನ ತೆಕ್ಕಟ್ಟೆ ಕುವೆಂಪು ಬಯಲು ರಂಗಮಂದಿರದಲ್ಲಿ ಯಕ್ಷದೀಪ ಕಲಾ ಟ್ರಸ್ಟ್ (ರಿ.) ಮಲ್ಯಾಡಿ ಹಾಗೂ ಯಶಸ್ವಿ ಕಲಾವೃಂದದ ಸಹಕಾರದೊಂದಿಗೆ ನಡೆದ ರಂಗೋತ್ಸವ 2019 ಎರಡು ದಿನಗಳ ನಾಟಕೋತ್ಸವದಲ್ಲಿ ಎಚ್.ಎಸ್.ಶಿವಪ್ರಕಾಶ್ ರಚನೆಯ, ರೋಹಿತ್ ಎಸ್.ಬೈಕಾಡಿ ನಿರ್ದೇಶನದಲ್ಲಿ ಕೈಲಾಸ ಕಲಾಕ್ಷೇತ್ರ ರಂಗ ತಂಡದಿಂದ ಅಭಿವ್ಯಕ್ತಗೊಂಡ ನಾಟಕ “ಮದುವೆ ಹೆಣ್ಣು ‘ ಗ್ರಾಮೀಣ ಭಾಗದ ಪ್ರೇಕ್ಷರನ್ನು ತನ್ನೆಡೆಗೆ ಸೆಳೆಯುವಲ್ಲಿ ಸಂಪೂರ್ಣ ಯಶಸ್ವಿಯಾಯಿತು.ಸಾರಾಂಶ : ಬುಡಕಟ್ಟು ಜನಾಂಗದ ಹಿರೇಕನ ಮಗ ಕಾಡಿನಲ್ಲಿ ಇಪ್ಪತ್ತು ದಿವಸ ಒಬ್ಬಂಟಿಯಾಗಿ ಬಾಳಿದ ನಂತರ ಇಪ್ಪತ್ತೂಂದನೆಯ ದಿನ ಒಬ್ಬ ಕಟ್ಟುಮಸ್ತಾದ ಆರೋಗ್ಯವಂತ ತರುಣನನ್ನು ಬೇಟೆಯಾಡಿ ಅವನ ತಲೆ ಬುರುಡೆಯನ್ನು ಮದುವೆಯ ಹೆಣ್ಣಿನ ತಂದೆಗೆ ತಂದೊಪ್ಪಿಸಬೇಕು. ಕುಲದ ನಿಯಮವನ್ನು ಮೀರಿದರೆ ಆಕೆಯ ತಂದೆ ತಾಯಿ ಅವನಿಗೆ ಹೆಣ್ಣು ಕೊಡುವಂತಿಲ್ಲ ಎನ್ನುವ ಭಯದ ನಡುವೆ ತೊಳಲಾಡುವ ದೃಶ್ಯ ಪ್ರೇಕ್ಷಕರನ್ನು ವಿಭಿನ್ನ ಕಲ್ಪನಾ ಸ್ತರದೆಡೆಗೆ ಕೊಂಡೊÂಯಿತು.
Related Articles
Advertisement
ಕೈಲಾಸ ಕಲಾಕ್ಷೇತ್ರ ರಂಗ ತಂಡ ಪ್ರಸ್ತುತಿಮಹಾಕರುಣೆಯ ಹಾದಿಯಲ್ಲಿ ನಡೆಯುತ್ತಿರುವ ಸಮಣಿಯಿಂದ ಗಂಡಿನ ಆತ್ಮಕ್ಕೆ ಮುಕ್ತಿ ದೊರೆಯುತ್ತದೆ. ವಿಧಿಯ ಕ್ರೂರ ಆಟಕ್ಕೆ ಬಲಿಯಾಗಿ , ಅಪರಾಧಿಗಳಾಗಿ ನರಳುತ್ತಿರುವ ಜಗದ ಎಲ್ಲಾ ನೊಂದ ಮನಗಳಿಗೆ ಬುದ್ಧನ ಮಹಾಕರುಣೆ, ಶಾಂತಿ ಲಭಿಸಲಿ ಎನ್ನುವುದೇ ನಾಟಕದ ಮೂಲ ಆಶಯ. – ಟಿ.ಲೋಕೇಶ್ ಆಚಾರ್ಯ ತೆಕ್ಕಟ್ಟೆ