ನವದೆಹಲಿ: ಮಾರ್ಕ್ ಮೊಬೈಲ್ ದೇಶದ ಮಾರುಕಟ್ಟೆಗೆ ಹೊಸ ಮೊಬೈಲ್, ಎಂ3 ಸ್ಮಾರ್ಟ್ ಅನ್ನು ಬಿಡುಗಡೆ ಮಾಡಿದೆ. ಇದೊಂದು ಬಜೆಟ್ ಮೊಬೈಲ್ ಆಗಿದೆ. ಅದರಲ್ಲಿ 2ಜಿಬಿ ರಾಮ್ ಮತ್ತು 32 ಜಿಬಿ ಸ್ಟೋರೇಜ್ ವ್ಯವಸ್ಥೆಯನ್ನು ಹೊಂದಿದೆ. ಈ ಮೊಬೈಲ್‌ಗೆ 7,999 ರೂ. ದರ ನಿಗದಿಪಡಿಸಲಾಗಿದೆ.
ಇದನ್ನೂ ಓದಿ:ದೇವಸ್ಥಾನಕ್ಕೆ ಶ್ರೀಕೃಷ್ಣನ ವರ್ಣಚಿತ್ರ ಉಡುಗೊರೆ | ಮುಸ್ಲಿಂ ಯುವತಿಯ ಕನಸು ನನಸು
ಆದರೆ, ಕೆಲ ದಿನಗಳವರೆಗೆ 6,999 ರೂ.ಗೆ ಅದನ್ನು ಕಂಪನಿ ಮಾರಾಟ ಮಾಡಲಿದೆ. ಅ.7ರಿಂದ ಫ್ಲಿಪ್‌ಕಾರ್ಟ್ ಮೂಲಕ ಹೊಸ ಮೊಬೈಲ್ ಗ್ರಾಹಕರಿಗೆ ಸಿಗಲಿದೆ. ಕಪ್ಪು ಮತ್ತು ನೀಲಿ ಬಣ್ಣಗಳಲ್ಲಿ ಅದು ಲಭ್ಯವಾಗಲಿದೆ. ಆ್ಯಂಡ್ರಾಯ್ಡ 10, 13 ಮೆಗಾ ಪಿಕ್ಸೆಲ್ ಕ್ಯಾಮರಾ ಸೇರಿದಂತೆ ಹಲವು ವಿಶೇಷತೆಗಳಿವೆ.
ಖಗೋಳಶಾಸ್ತ್ರಕ್ಕೆ ಮತ್ತೊಂದು ಉಪಗ್ರಹ
ಖಗೋಳಶಾಸ್ತ್ರದ ಅಧ್ಯಯನಕ್ಕೇ ಮೀಸಲಾಗಿ ಇರುವ ವಿಶೇಷ ಉಪಗ್ರಹ ಅಭಿವೃದ್ಧಿಪಡಿಸಿ ಉಡಾಯಿಸಲು ಇಸ್ರೋ ಚಿಂತನೆ ನಡೆಸುತ್ತಿದೆ. 2015 ಸೆ.28ರಂದು ಉಡಾಯಿಸಲಾಗಿದ್ದ ಆ್ಯಸ್ಟ್ರೋಸ್ಯಾಟ್‌ಗೆ ಆರು ವರ್ಷಗಳು ಪೂರ್ತಿಗೊಂಡಿದ್ದು, ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಸಂಸ್ಥೆಯ ಮಾಜಿ ಅಧ್ಯಕ್ಷ ಎ.ಎಸ್.ಕಿರಣ್‌ಕುಮಾರ್ ಹೇಳಿದ್ದಾರೆ.
ಬೆಂಗಳೂರಿನಲ್ಲಿ “ಪಿಟಿಐ’ ಸುದ್ದಿಸಂಸ್ಥೆ ಜತೆಗೆ ಮಾತನಾಡಿದ ಅವರು, ಹೊಸ ಮಾದರಿಯ ಖಗೋಳ ಶಾಸ್ತ್ರಕ್ಕಾಗಿನ ಉಪಗ್ರಹ ಅಭಿವೃದ್ಧಿಗೆ ಚಿಂತನೆ ನಡೆಯುತ್ತಿದೆ ಎಂದರು.