Advertisement

ODI Worldcup ಫೈನಲ್‌ ಬ್ಯಾಟ್‌ಗೆ ಮಾರ್ನಸ್‌ ಲಬುಶೇನ್‌ ವಿದಾಯ!

11:15 PM Aug 12, 2024 | Team Udayavani |

ಮೆಲ್ಬರ್ನ್: ಆಸ್ಟ್ರೇಲಿಯದ ಕ್ರಿಕೆಟಿಗ ಮಾರ್ನಸ್‌ ಲಬುಶೇನ್‌ ಕಳೆದ ಏಕದಿನ ವಿಶ್ವಕಪ್‌ ಫೈನಲ್‌ನಲ್ಲಿ ಬಳಸಿದ ಬ್ಯಾಟ್‌ಗೆ ವಿದಾಯ ಹೇಳಲು ನಿರ್ಧರಿಸಿದ್ದಾರೆ. ಇದನ್ನವರು ತಮ್ಮ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಬರೆದುಕೊಂಡಿದ್ದಾರೆ. ಜತೆಗೆ ಬ್ಯಾಟ್‌ನ ಚಿತ್ರವನ್ನೂ ಹಾಕಿದ್ದಾರೆ.

Advertisement

2023ರ ನ. 19ರಂದು ಆತಿಥೇಯ ಭಾರತದ ವಿರುದ್ಧ ಅಹ್ಮದಾಬಾದ್‌ನಲ್ಲಿ ಆಡಲಾದ ಫೈನಲ್‌ನಲ್ಲಿ ಮಾರ್ನಸ್‌ ಲಬುಶೇನ್‌ ಈ ಬ್ಯಾಟ್‌ ನೆರವಿನಿಂದ 58 ರನ್‌ ಹೊಡೆದಿದ್ದರು. 110 ಎಸೆತಗಳ ಈ ಇನ್ನಿಂಗ್ಸ್‌ ನಲ್ಲಿ 4 ಬೌಂಡರಿ ಒಳಗೊಂಡಿತ್ತು. ಆಸ್ಟ್ರೇಲಿಯ 6ನೇ ವಿಶ್ವಕಪ್‌ ಗೆಲ್ಲುವಲ್ಲಿ ಲಬುಶೇನ್‌ ಕೊಡುಗೆಯೂ ದೊಡ್ಡದಿತ್ತು.

ಆದರೀಗ ಈ ಬ್ಯಾಟ್‌ನ ಸ್ಥಿತಿ ಹದಗೆಟ್ಟಿದ್ದು, ಮೇಲ್ಭಾಗ ಕಿತ್ತು ಹೋಗಲಾರಂಭಿಸಿದೆ. ಹೀಗಾಗಿ ಈ ಬ್ಯಾಟನ್ನು ಸವಿನೆನಪಿಗಾಗಿ ಜೋಪಾನವಾಗಿ ಕಾದಿರಿಸುವುದು ಲಬುಶೇನ್‌ ಉದ್ದೇಶವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next