ಮುಂಬಯಿ : ಮುಂಬಯಿ ಶೇರು ಮಾರುಕಟ್ಟೆಯ ಸೆನ್ಸೆಕ್ಸ್ ಸೂಚ್ಯಂಕ ನಿರಂತರ ಮೂರನೇ ದಿನವಾಗಿ 191 ಅಂಕಗಳ ಏರಿಕೆಯನ್ನು ದಾಖಲಿಸಿ 35,160 ಅಂಕಗಳ ಮಟ್ಟವನ್ನು ತಲುಪಿದೆ.
ಕಾರ್ಪೊರೇಟ್ ಫಲಿತಾಂಶಗಳು ಉತ್ತಮವಾಗಿರುವುದು, ಜಾಗತಿಕ ಶೇರು ಮಾರುಕಟ್ಟೆಗಳಲ್ಲಿ ಸ್ಥಿರತೆಯ ವಾತಾವಾರಣ ತೋರಿ ಬಂದಿರುವುದು ಇದಕ್ಕೆ ಮುಖ್ಯ ಕಾರಣ ಎನ್ನಲಾಗಿದೆ.
ಆರ್‌ಬಿಐ ಇಸಿಬಿ ನೀತಿಯನ್ನು ಉದಾರೀಕರಿಸಿರುವುದರ ಸಹಿತ ಹಲವು ಧನಾತ್ಮಕ ಕ್ರಮಗಳಿಂದ ಪ್ರಭಾವಿತವಾಗಿರುವ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ ಇಂದು ಸೋಮವಾರದ ವಹಿವಾಟಿನಲ್ಲಿ 10,700 ಅಂಕಗಳ ಗಡಿಯನ್ನು ದಾಟಿ ದಿನಾಂತ್ಯಕ್ಕೆ 47.05 ಅಂಕಗಳ ಏರಿಕೆಯೊಂದಿಗೆ 10,739.35 ಅಂಕಗಳ ಮಟ್ಟ ತಲುಪುವಲ್ಲಿ ಸಫಲವಾಯಿತು.
ಕಳೆದ ಎರಡು ದಿನಗಳ ವಹಿವಾಟಿನಲ್ಲಿ ಸೆನ್ಸೆಕ್ಸ್ ಒಟ್ಟಾರೆಯಾಗಿ 468.43 ಅಂಕಗಳ ಏರಿಕೆಯನ್ನು ದಾಖಲಿಸಿದೆ.
ಮುಂಬಯಿ ಶೇರು ಪೇಟೆಯಲ್ಲಿ ಇಂದು ಒಟ್ಟು 2,807 ಕಂಪೆನಿಗಳ ಶೇರುಗಳು ವಹಿವಾಟಿಗೆ ಒಳಪಟ್ಟವು; 1,404 ಶೇರುಗಳು ಮುನ್ನಡೆ ಕಂಡವು; 1,255 ಶೇರುಗಳು ಹಿನ್ನಡೆಗೆ ಗುರಿಯಾದವು; 148 ಶೇರುಗಳು ಯಾವುದೇ ಬದಲಾವಣೆ ಕಾಣಲಿಲ್ಲ.
ನಾಳೆ ಮೇ 1ರ ಮಂಗಳವಾರದಂದು ಮುಂಬಯಿ ಶೇರು ಮಾರುಕಟ್ಟೆಗೆ “ಮಹಾರಾಷ್ಟ್ರ ಡೇ’ ಪ್ರಯುಕ್ತ ರಜೆ ಇದೆ.