ಮುಂಬಯಿ : ದೇಶದ ಸ್ಥೂಲ ಆರ್ಥಿಕಾಭಿವೃದ್ಧಿ ಅಂಕಿ ಅಂಶಗಳು ಆಶಾದಾಯಕವಾಗಿರುವ ಹಿನ್ನೆಲೆಯಲ್ಲಿ ನಡೆದ ಮುಂಚೂಣಿ ಶೇರುಗಳ ಉತ್ತಮ ಖರೀದಿಯ ಬಲದಲ್ಲಿ ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್ ಸೂಚ್ಯಂಕ ಇಂದು ಮಂಗಳವಾರದ ವಹಿವಾಟನ್ನು 207 ಅಂಕಗಳ ಮುನ್ನಡೆಯೊಂದಿಗೆ 37,852 ಅಂಕಗಳ ಮಟ್ಟದಲ್ಲಿ ಹೊಸ ಭರವಸೆಯೊಂದಿಗೆ ಮುಗಿಸಿತು.
ಇದೇ ರೀತಿ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 79.35 ಅಂಕಗಳ ಏರಿಕೆಯೊಂದಿಗೆ ದಿನದ ವಹಿವಾಟನ್ನು 11,452.45 ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿತು.
ಜೂನ್ ನಲ್ಲಿ ಶೇ.5.77ರಷ್ಟಿದ್ದ ಹಣದುಬ್ಬರ ಜುಲೈ ತಿಂಗಳಲ್ಲಿ ಶೇ.5.09ಕ್ಕೆ ಇಳಿದಿರುವುದು ಶೇರು ಮಾರುಕಟ್ಟೆಯಲ್ಲಿ ಹೊಸ ಭರವಸೆಯನ್ನು ಮೂಡಿಸಿತು.
ಇಂದಿನ ಟಾಪ್ ಗೇನರ್‌ಗಳು: ಸನ್ ಫಾರ್ಮಾ, ಎಸ್ ಬ್ಯಾಂಕ್, ಲೂಪಿನ್, ಬಜಾಜ್ ಫಿನಾನ್ಸ್,ಅಲ್‌ಟ್ರಾ ಟೆಕ್ ಸಿಮೆಂಟ್; ಟಾಪ್ ಲೂಸರ್‌ಗಳು : ಯುಪಿಎಲ್, ಹೀರೋ ಮೋಟೋ ಕಾರ್ಪ್, ಲಾರ್ಸನ್, ಎಚ್ ಪಿ ಸಿ ಎಲ್,ಅದಾನಿ ಪೋರ್ಟ್.
ಮುಂಬಯಿ ಶೇರು ಪೇಟೆಯಲ್ಲಿಂದು 2,833 ಕಂಪೆನಿಗಳ ಶೇರುಗಳು ವಹಿವಾಟಿಗೆ ಒಳಪಟ್ಟವು; 1,302 ಶೇರುಗಳು ಮುನ್ನಡೆ ಸಾಧಿಸಿದವು; 1,390 ಶೇರುಗಳು ಹಿನ್ನಡೆಗೆ ಗುರಿಯಾದವು; 141 ಶೇರುಗಳು ಯಾವುದೇ ಬದಲಾವಣೆ ಕಾಣಲಿಲ್ಲ.