ಮುಂಬಯಿ : ಮುಂಬಯಿ ಶೇರು ಮಾರುಕಟ್ಟೆಯ ಸೆನ್ಸೆಕ್ಸ್ ಸೂಚ್ಯಂಕ ನಿರಂತರ 8ನೇ ದಿನವಾಗಿ ಇಂದು ಶುಕ್ರವಾರವೂ ಮುಗ್ಗರಿಸಿದ್ದು 96 ಅಂಕಗಳ ಕುಸಿತವನ್ನು ಅನುಭವಿಸಿತು.
ಇದೇ ರೀತಿ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 22.90 ಅಂಕಗಳ ನಷ್ಟವನ್ನು ಅನುಭವಿಸಿ 11,300 ಅಂಕಕ್ಕಿಂತ ಕೆಳ ಮಟ್ಟಕ್ಕೆ ಜಾರಿತು.
ಅಮೆರಿಕ-ಚೀನ ವಾಣಿಜ್ಯ ಬಿಕ್ಕಟ್ಟು ಕೊನೆಗೊಳ್ಳುವ ಸಾಧ್ಯತೆ ಕ್ಷೀಣವಾಗಿರುವುದೇ ಜಾಗತಿಕ ಶೇರು ಪೇಟೆಗಳ ಕುಸಿತಕ್ಕೆ ಕಾರಣವೆಂದು ತಿಳಿಯಲಾಗಿದೆ.
ಇಂದು ಶುಕ್ರವಾರದ ವಹಿವಾಟಿನಲ್ಲಿ ಟಾಟಾ ಸ್ಟೀಲ್ ಶೇರು ಶೇ.6ರ ಭಾರೀ ನಷ್ಟಕ್ಕೆ ಗುರಿಯಾದದ್ದು ವಿಶೇಷವೆನಿಸಿತು.
ಉಳಿದಂತೆ ಎಚ್‌ಸಿಎಲ್ ಟೆಕ್, ಎಸ್ ಬ್ಯಾಂಕ್, ಇಂಡಸ್ ಇಂಡ್ ಬ್ಯಾಂಕ್, ಟಿಸಿಎಸ್, ಒಎನ್‌ಜಿಸಿ, ಬಜಾಜ್ ಫಿನಾನ್ಸ್, ಪವರ್ ಗ್ರಿಡ್, ವೇದಾಂತ, ಏಶ್ಯನ್ ಪೇಂಟ್, ಎನ್‌ಟಿಪಿಸಿ ಮತ್ತು ಹೀರೋ ಮೋಟೋ ಕಾರ್ಪ್ ಶೇರುಗಳು ಶೇ.4.07ರ ಕುಸಿತಕ್ಕೆ ಗುರಿಯಾದವು. ದಿನದ ವಹಿವಾಟನ್ನು ಸೆನ್ಸೆಕ್ಸ್ 37,370.39 ಮತ್ತು ನಿಫ್ಟಿ 11,278 ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿದವು.
ಮುಂಬಯಿ ಶೇರು ಪೇಟೆಯಲ್ಲಿಂದು ಒಟ್ಟು 2,652 ಕಂಪೆನಿಗಳ ಶೇರುಗಳು ವಹಿವಾಟಿಗೆ ಒಳಪಟ್ಟವು; ಈ ಪೈಕಿ 1,212 ಶೇರುಗಳು ಮುನ್ನಡೆ ಸಾಧಿಸಿದವು; 1,274 ಶೇರುಗಳು ಹಿನ್ನಡೆಗೆ ಗುರಿಯಾದವು; 166 ಶೇರುಗಳ ಧಾರಣೆ ಯಾವುದೇ ಬದಲಾವಣೆ ಕಾಣಲಿಲ್ಲ.