ಮುಂಬಯಿ : ಜಾಗತಿಕ ಮತ್ತು ದೇಶೀಯ ಮಾರುಕಟ್ಟೆಗಳಲ್ಲಿ ಕಂಡು ಬಂದ ಮಿಶ್ರ ಪ್ರತಿಕ್ರಿಯೆಯನ್ನು ಲೆಕ್ಕಿಸಿ ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್ ಸೂಚ್ಯಂಕ ಇಂದು ಗುರುವಾರ 15.45 ಅಂಕಗಳ ಇಳಿಕೆಯನ್ನು ಕಂಡು ದಿನದ ವಹಿವಾಟನ್ನು 39,741.36 ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿತು.
ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 7.85 ಅಂಕಗಳ ಏರಿಕೆಯನ್ನು ಕಂಡು ದಿನದ ವಹಿವಾಟನ್ನು 11,914.05 ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿತು.
ದಿನಪೂರ್ತಿ ಏಳು ಬೀಳುಗಳನ್ನು ಕಾಣುತ್ತಲೇ ಸಾಗಿದ ಮುಂಬಯಿ ಶೇರು ಇಂದು ಒಂದು ಹಂತದಲ್ಲಿ 300ಕ್ಕೂ ಅಧಿಕ ಅಂಕಗಳ ಕುಸಿತವನ್ನು ಕಂಡಿತ್ತು. ದಿನಾಂತ್ಯಕ್ಕೆ ಈ ಕುಸಿತ 15.45 ಅಂಕಗಳಿಗೆ ಸೀಮಿತವಾಯಿತು.
ಇಂದಿನ ವಹಿವಾಟನಲ್ಲಿ ಎಸ್ ಬ್ಯಾಂಕ್ ಶೇರು ಶೇ.7.85ರ ಭಾರೀ ಕುಸಿತವನ್ನು ಕಂಡಿತು. ಖಾಸಗಿ ರೇಟಿಂಗ್ ಸಂಸ್ಥೆ ಮೂಡೀಸ್, ಎಸ್ ಬ್ಯಾಂಕ್ ಕ್ರಮಾಂಕವನ್ನು ಕೆಳಮಟ್ಟಕ್ಕೆ ಪುನರ್ ವಿಮರ್ಶಿಸುವ ಸಾಧ್ಯತೆ ಇದೆ ಎಂಬುದೇ ಕುಸಿತಕ್ಕೆ ಕಾರಣವಾಗಿದೆ.
ಇಂದಿನ ಟಾಪ್ ಗೇನರ್ ಗಲ ಪೈಕಿ ಪವರ್ ಗ್ರಿಡ್, ಮಹೀಂದ್ರ, ಕೋಟಕ್ ಬ್ಯಾಂಕ್, ಬಜಾಜ್ ಫಿನಾನ್ಸ್, ಭಾರ್ತಿ ಏರ್‌ಟೆಲ್ ಮತ್ತು ಅವಳಿ ಎಚ್ ಡಿ ಎಫ್ ಸಿ ಶೇರುಗಳು ಶೇ.1.54ರ ಏರಿಕೆಯನ್ನು ಕಂಡವು.
ಮುಂಬಯಿ ಶೇರು ಪೇಟೆಯಲ್ಲಿಂದು ಒಟ್ಟು 2,688 ಕಂಪೆನಿಗಳ ಶೇರುಗಳು ವಹಿವಾಟಿಗೆ ಒಳಪಟ್ಟವು; ಈ ಪೈಕಿ 922 ಶೇರುಗಳು ಮುನ್ನಡೆ ಸಾಧಿಸಿದವು; 1,611 ಶೇರುಗಳು ಹಿನ್ನಡೆಗೆ ಗುರಿಯಾದವು; 155 ಶೇರುಗಳ ಧಾರಣೆ ಯಾವುದೇ ಬದಲಾವಣೆ ಕಾಣಲಿಲ್ಲ.