ಮುಂಬೈ: ಜಾಗತಿಕ ಷೇರುಪೇಟೆ ಬೆಳವಣಿಗೆಗಳು ಮುಂಬೈ ಷೇರುಪೇಟೆ ಮೇಲೆ ಪರಿಣಾಮ ಬೀರಿದ್ದು, ಶುಕ್ರವಾರ(ಜನವರಿ 08, 2021) ಸೆನ್ಸೆಕ್ಸ್ ಸೂಚ್ಯಂಕ ದಾಖಲೆಯ ಏರಿಕೆಯೊಂದಿಗೆ ವಹಿವಾಟು ಮುಕ್ತಾಯಗೊಳಿಸಿದೆ.
ಬಾಂಬೆ ಷೇರುಪೇಟೆ ಸೂಚ್ಯಂಕ (ಬಿಎಸ್ ಇ) 689.19 ಅಂಕಗಳ ಜಿಗಿತದೊಂದಿಗೆ 48,782.51 ಅಂಕಗಳೊಂದಿಗೆ ವಹಿವಾಟು ಮುಕ್ತಾಯಗೊಂಡಿದೆ. ಇದು ಇತ್ತೀಚೆಗಿನ ದಿನದ ದಾಖಲೆಯ ಏರಿಕೆಯಾಗಿದೆ ಎಂದು ಮಾರುಕಟ್ಟೆ ತಜ್ಞರು ವಿಶ್ಲೇಷಿಸಿದ್ದಾರೆ.
ಅದೇ ರೀತಿ ನಿಫ್ಟಿ ಸೂಚ್ಯಂಕ 209.90 ಅಂಕಗಳ ಏರಿಕೆಯೊಂದಿಗೆ ದಾಖಲೆಯ 14,347.25 ಅಂಕಗಳೊಂದಿಗೆ ವಹಿವಾಟು ಮುಕ್ತಾಯಗೊಳಿಸಿದೆ. ಇದರೊಂದಿಗೆ ನಿಫ್ಟಿ ಸಾರ್ವಕಾಲಿಕ ದಾಖಲೆ ಬರೆದಿದೆ.
ಷೇರುಪೇಟೆ ಸೆನ್ಸೆಕ್ಸ್ ಸೂಚ್ಯಂಕ ದಾಖಲೆ ಏರಿಕೆಯಿಂದ ಮಾರುತಿ, ಟೆಕ್ ಮಹೀಂದ್ರಾ, ಇನ್ಫೋಸಿಸ್, ಆಲ್ಟ್ರಾಚಾಮ್, ಮಹೀಂದ್ರಾ ಆ್ಯಂಡ್ ಮಹೀಂದ್ರಾ, ಪವರ್ ಗ್ರಿಡ್, ಎನ್ ಟಿಪಿಸಿ, ಸನ್ ಫಾರ್ಮಾ, ಎಚ್ ಸಿಎಲ್ ಟೆಕ್, ಟಿಸಿಎಸ್, ಒಎನ್ ಜಿಸಿ ಮತ್ತು ಎಲ್ ಟಿ ಷೇರು ಶೇ.5.95ರಷ್ಟು ಏರಿಕೆ ಕಂಡಿವೆ.
ಇಂಡಸ್ ಲ್ಯಾಂಡ್ ಬ್ಯಾಂಕ್, ಭಾರ್ತಿ ಏರ್ ಟೆಲ್, ಎಸ್ ಬಿಐ, ಐಟಿಸಿ, ಎಚ್ ಡಿಎಫ್ ಸಿ ಮತ್ತು ಬಜಾಜ್ ಫೈನಾನ್ಸ್ ಷೇರುಗಳು ಶೇ.1.37ರಷ್ಟು ನಷ್ಟ ಅನುಭವಿಸಿದೆ.