ಮುಂಬಯಿ : ಇದೇ ಅಕ್ಟೋಬರ್ 5ರಂದು ಆರ್‌ಬಿಐ ಹಾಲಿ ಹಣಕಾಸು ಸಾಲಿನ ನಾಲ್ಕನೇ ದ್ವೆ„ಮಾಸಿಕ ನೀತಿಯನ್ನು ಪ್ರಕಟಿಸಲಿದ್ದು ಅದಕ್ಕೆ ಮುನ್ನವೇ ಎಚ್ಚರಿಕೆಯ ನಡೆಯನ್ನು ಇರಿಸಿರುವ ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್ ಸೂಚ್ಯಂಕ 300ಕ್ಕೂ ಅಧಿಕ ಅಂಕಗಳ ನಷ್ಟಕ್ಕೆ ಗುರಿಯಾತಿ ನಿರಂತರ ಮೂರನೇ ದಿನವೂ ತನ್ನ ಸೋಲಿನ ಪಯಣವನ್ನು ಆರಂಭಿಸಿತು.
ಡಾಲರ್ ಎದುರು ರೂಪಾಯಿಯ ನಿರಂತರ ಆತಂಕಕಾರಿ ಕುಸಿತ, ಮತ್ತು ಒಂದೇ ಸಮನೆ ಏರುತ್ತಿರುವ ಅಂತಾರಾಷ್ಟ್ರೀಯ ಕಚ್ಚಾತೈಲದ ಪರಿಣಾಮಗಳಿಂದ ನಲುಗುತ್ತಿರುವ ದೇಶದ ಆರ್ಥಿಕತೆಗೆ ಕಂಗೆಟ್ಟಿರುವ ಮುಂಬಯಿ ಶೇರು ಕಳೆದ ಎರಡು ದಿನಗಳ ವಹಿವಾಟಿನಲ್ಲಿ 1,356.98 ಅಂಕಗಳ ನಷ್ಟಕ್ಕೆ ಗುರಿಯಾಗಿತ್ತು.
ಇಂದು ಬೆಳಗ್ಗೆ 10.45ರ ಸುಮಾರಿಗೆ ಸೆನ್ಸೆಕ್ಸ್ 379.24 ಅಂಕಗಳ ನಷ್ಟದೊಂದಿಗೆ 34,789.92 ಅಂಕಗಳ ಮಟ್ಟದಲ್ಲೂ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 144.90 ಅಂಕಗಳ ನಷ್ಟದೊಂದಿಗೆ 10,454.40 ಅಂಕಗಳ ಮಟ್ಟದಲ್ಲೂ ವ್ಯವಹಾರ ನಿರತವಾಗಿದ್ದವು.
ಡಾಲರ್ ಎದುರು ರೂಪಾಯಿ ಇಂದಿನ ಆರಂಭಿಕ ವಹಿವಾಟಿನಲ್ಲಿ 6 ಪೈಸೆಗಳ ನಷ್ಟಕ್ಕೆ ಗುರಿಯಾಗಿ 73.52 ರೂ ಮಟ್ಟಕ್ಕೆ ಜಾರಿತು.
ಇಂದಿನ ಆರಂಭಿಕ ವಹಿವಾಟಿನಲ್ಲಿ ಬಿಪಿಸಿಎಲ್, ಎಚ್‌ಪಿಸಿಲ್, ರಿಲಯನ್ಸ್, ಗೇಲ್, ಐಸಿಐಸಿಐ ಬ್ಯಾಂಕ್ ಶೇರುಗಳು ಅತ್ಯಂತ ಕ್ರಿಯಾಶೀಲವಾಗಿದ್ದವು.
ಟಾಪ್ ಗೇನರ್‌ಗಳು : ಟೈಟಾನ್ ಕಂಪೆನಿ, ಸನ್ ಫಾರ್ಮಾ, ಭಾರ್ತಿ ಇನ್‌ಫ್ರಾಟೆಲ್, ಇಂಡಸ್‌ಇಂಡ್ ಬ್ಯಾಂಕ್, ಇನ್‌ಫೋಸಿಸ್.
ಟಾಪ್ ಲೂಸರ್‌ಗಳು : ಎಚ್‌ಪಿಸಿಎಲ್, ಬಿಪಿಸಿಎಲ್, ಒಎನ್‌ಜಿಸಿ, ಗೇಲ್, ಹಿಂಡಾಲ್ಕೊ.