ಮುಂಬಯಿ : ಅಮೆರಿಕ ಮತ್ತು ಚೀನ ನಡುವಿನ ವಾಣಿಜ್ಯ ಬಿಕ್ಕಟ್ಟನ್ನು ಶಮನಗೊಳಿಸುವ ಮಾತುಕತೆಗಳು ಫಲಪ್ರದವಾಗುವ ಬಗ್ಗೆ ಶಂಕೆ ತೋರಲಾಗಿರುವುದನ್ನು ಅನುಸರಿಸಿ ಜಾಗತಿಕ ಶೇರು ಪೇಟೆಗಳಲ್ಲಿಂದು ಅಸ್ಥಿರತೆ ತೋರಿ ಬಂದಿದ್ದು, ಇದರ ಪರಿಣಾಮ ಎಂಬಂತೆ, ಮುಂಬಯಿ ಶೇರು ಪೇಟೆ ಇಂದು ಮಂಗಳವಾರದ ಆರಂಭಿಕ ವಹಿವಾಟಿನಲ್ಲಿ 100ಕ್ಕೂ ಅಧಿಕ ಅಂಕಗಳ ನಷ್ಟಕ್ಕೆ ಗುರಿಯಾಯಿತು.
ನಿನ್ನೆ ಸೋಮವಾರ ಮುಂಬಯಿ ಶೇರು ಪೇಟೆ 368 ಅಂಕಗಳ ನಷ್ಟ ಅನುಭವಿಸಿತ್ತು. ಅಂತೆಯೇ ರಾಷ್ಟ್ರೀಯ ಶೇರು ಪೇಟೆಯ ನಿಫ್ಟಿ ಸೂಚ್ಯಂಕ ಕೂಡ 119 ಅಂಕಗಳ ನಷ್ಟ ಅನುಭವಿಸಿತ್ತು.
ಇಂದು ಬೆಳಗ್ಗೆ 11.15ರ ಸುಮಾರಿಗೆ ನಿಫ್ಟಿ 119 ಅಂಕಗಳ ನಷ್ಟದೊಂದಿಗೆ 10,661.50 ಅಂಕಗಳ ಮಟ್ಟದಲ್ಲೂ ಸೆನ್ಸೆಕ್ಸ್ 368.84 ಅಂಕಗಳ ನಷ್ಟದೊಂದಿಗೆ 35,656.70 ಅಂಕಗಳ ಮಟ್ಟದಲ್ಲೂ ವ್ಯವಹಾರ ನಿರತವಾಗಿದ್ದವು.
ಝೀ ಎಂಟರ್‌ಟೇನ್‌ಮೆಂಟ್, ಮಾರುತಿ ಸುಜುಕಿ, ಎಸ್ ಬ್ಯಾಂಕ್, ಐಸಿಐಸಿಐ ಬ್ಯಾಂಕ್ ಶೇರುಗಳು ಇಂದು ಬೆಳಗ್ಗಿನ ವಹಿವಾಟಿನಲ್ಲಿ ಅತ್ಯಂ ಕ್ರಿಯಾಶೀಲವಾಗಿದ್ದವು.
ಡಾಲರ್ ಎದುರು ರೂಪಾಯಿ ಇಂದು ಬೆಳಗ್ಗಿನ ಆರಂಭಿಕ ವಹಿವಾಟಿಲ್ಲಿ 12 ಪೈಸೆ ಹಿನ್ನಡೆಯನ್ನು ಕಂಡು 71.22 ರೂ. ಮಟ್ಟದಲ್ಲಿ ವ್ಯವಹಾರ ನಿರತವಾಗಿತ್ತು.