Advertisement

ಮಾರ್ಕೆಟ್‌ ಅವ್ಯವಸ್ಥೆ:ಕೆಂಡವಾದ ಮೇಯರ್‌

12:03 PM Oct 12, 2018 | Team Udayavani |

ಬೆಂಗಳೂರು: ಕಲಾಸಿಪಾಳ್ಯದ ಸಗಟು ಮಾರುಕಟ್ಟೆ ಹಾಗೂ ಬಸ್‌ ನಿಲ್ದಾಣಗಳಲ್ಲಿ ಸ್ವತ್ಛತೆ ಕಾಪಾಡದ ಹಿನ್ನೆಲೆಯಲ್ಲಿ
ಪಾಲಿಕೆಯ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಮೇಯರ್‌ ಗಂಗಾಂಬಿಕೆ, ಪಾದಚಾರಿ ಮಾರ್ಗ ಒತ್ತುವರಿ
ಮಾಡಿಕೊಂಡಿದ್ದ ಮಳಿಗೆಗೆ 10 ಸಾವಿರ ರೂ. ದಂಡ ವಿಧಿಸುವಂತೆ ಸೂಚಿಸಿದರು.

Advertisement

ಪಾಲಿಕೆಯಿಂದ ಕೈಗೊಂಡಿರುವ ಕಲಾಸಿಪಾಳ್ಯ ಮಾರುಕಟ್ಟೆ ಹಾಗೂ ಬಸ್‌ ನಿಲ್ದಾಣದ ಕಾಮಗಾರಿ ಪರಿಶೀಲಿಸಿದ
ಅವರು, ಎಲ್ಲೆಂದರಲ್ಲಿ ತ್ಯಾಜ್ಯ ವಿಲೇವಾರಿಯಾಗಿರುವುದನ್ನ ಕಂಡು ಆಕ್ರೋಶ ವ್ಯಕ್ತಪಡಿಸಿದರು. ಇದರೊಂದಿಗೆ ಮಾರುಕಟ್ಟೆ ಪಾದಚಾರಿ ಮಾರ್ಗ ಒತ್ತುವರಿ ಮಾಡಿಕೊಂಡು ವ್ಯಾಪಾರ ನಡೆಸುತ್ತಿದ್ದರೂ ಯಾವುದೇ ಕ್ರಮಕ್ಕೆ ಮುಂದಾಗದ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ನಂತರ ಬಿಎಂಟಿಸಿ ಬಸ್‌ ನಿಲ್ದಾಣದಲ್ಲಿ ಹಾಳಾಗಿರುವ ರಸ್ತೆಗಳನ್ನು ವೀಕ್ಷಿಸಿದ ಅವರು, ಕೂಡಲೇ ವೈಟ್‌ಟಾಪಿಂಗ್‌
ಕಾಮಗಾರಿ ಕೈಗೆತ್ತಿಕೊಳ್ಳುವಂತೆ ಸೂಚಿಸಿದರು. ಅದಕ್ಕೆ ಸಂಬಂಧಿಸಿದಂತೆ ಅಂದಾಜು ವೆಚ್ಚದ ಪ್ರಸ್ತಾವನೆ ಸಲ್ಲಿಸುವಂತೆ ಅಧಿಕಾರಿಗಳಿಗೆ ತಿಳಿಸಿದರು. 

ಅಲ್ಲಿಂದ ಮಾರಿಯಮ್ಮ ದೇವಾಲಯದ ಬಳಿಯಿರುವ ವಾಹನ ಟೈರ್‌ ಮಾರಾಟ ಅಂಗಡಿಗಳ ಮುಂಭಾಗದ ಪಾದಚಾರಿ ಮಾರ್ಗದಲ್ಲಿ ಮಳಿಗೆದಾರರು ಟೈರ್‌ಗಳನ್ನು ಜೋಡಿಸಿರುವುದಕ್ಕೆ ಅಸಮಾಧಾನಗೊಂಡ ಅವರು, ಜನರು ಓಡಾಡುವ ಜಾಗದಲ್ಲಿ ಟೈರುಗಳನ್ನು ಇಟ್ಟರೆ ಜನರು ಎಲ್ಲಿ ಓಡಾಡಬೇಕೆಂದು ಮಳಿಗೆದಾರರನ್ನು ಪ್ರಶ್ನಿಸಿದ ಅವರು, ಕೆಜಿಎನ್‌ ರೋಡ್‌ ಲೈನ್ಸ್‌ ಮಳಿಗೆ ಮಾಲೀಕರಿಗೆ 10 ಸಾವಿರ ರೂ. ದಂಡ ವಿಧಿಸಿ ಆದೇಶಿಸಿದರು.  

ಕಲಾಸಿಪಾಳ್ಯ ಸಗಟು ಮಾರುಕಟ್ಟೆಯನ್ನು 9.29 ಕೋಟಿ ರೂ. ವೆಚ್ಚದಲ್ಲಿ ಮರು ನಿರ್ಮಾಣ ಮಾಡಲಾಗುತ್ತಿದ್ದು,
ಒಟ್ಟು 3 ಘಟಕಗಳಲ್ಲಿರುವ 382 ಮಳಿಗೆಗಳ ನಿರ್ಮಾಣ ಮಾಡಲಾಗುತ್ತಿದೆ. ಮಾರುಕಟ್ಟೆ ನವೀಕರಣ ನಂತರ ಒಟ್ಟು 1.20 ಕೋಟಿ ರೂ. ತೆರಿಗೆ, ಬಾಡಿಗೆ ಸಂಗ್ರಹ ಗುರಿಯನ್ನು ಹೊಂದಲಾಗಿದ್ದು, ಮಾರುಕಟ್ಟೆ ಆಧುನಿಕಯನ್ನು ಆಧುನಿಕ
ತಂತ್ರಜ್ಞಾನ ಬಳಸಿ ನಿರ್ಮಿಸಲಾಗುತ್ತಿದೆ.
 ಗಂಗಾಂಬಿಕೆ, ಮೇಯರ್‌

Advertisement
Advertisement

Udayavani is now on Telegram. Click here to join our channel and stay updated with the latest news.

Next