Advertisement

ಜಿಎಸ್‌ಟಿ ಎಚ್ಚರಿಕೆಯ ನಡೆ: ಮುಂಬಯಿ ಶೇರು 154 ಅಂಕ ಕುಸಿತ

11:55 AM Jun 30, 2017 | |

ಮುಂಬಯಿ : ಇಂದು ಶುಕ್ರವಾರ ಮಧ್ಯರಾತ್ರಿ ಐತಿಹಾಸಿಕ ಜಿಎಸ್‌ಟಿ ಅನುಷ್ಠಾನಗೊಳ್ಳುವುದಕ್ಕೆ ವಿಶೇಷ ಸಂಸತ್‌ ಅಧಿವೇಶನ ಸಾಕ್ಷಿಯಾಗಲಿದ್ದು ಅದಕ್ಕೆ ಮುನ್ನ ಜಿಎಸ್‌ಟಿ ಕುರಿತಾದ ಭಯ, ಆತಂಕ, ಗೊಂದಲ ಇತ್ಯಾದಿಗಳಿಂದಾಗಿ ಮುಂಬಯಿ ಶೇರು ಪೇಟೆ ಇಂದಿನ ಆರಂಭಿಕ ವಹಿವಾಟಿನಲ್ಲಿ  154 ಅಂಕಗಳ ಕುಸಿತಕ್ಕೆ ಗುರಿಯಾಯಿತು. 

Advertisement

ಇದರೊಂದಿಗೆ ಇಂದು ಆರಂಭಗೊಂಡ ಜುಲೈ ತಿಂಗಳ ವಾಯಿದೆ ವಹಿವಾಟು ನೇತ್ಯಾತ್ಮಕ ಚಾಲನೆಯನ್ನು ಪಡೆದುಕೊಂಡಿತು. 

ಬೆಳಗ್ಗೆ 12 ಗಂಟೆಯ ಹೊತ್ತಿಗೆ ಸೆನ್ಸೆಕ್ಸ್‌  61.42 ಅಂಕಗಳ ನಷ್ಟದೊಂದಿಗೆ 30,796.10 ಅಂಕಗಳ ಮಟ್ಟದಲ್ಲೂ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 21.35 ಅಂಕಗಳ ನಷ್ಟದೊಂದಿಗೆ 9,482.75 ಅಂಕಗಳ ಮಟ್ಟದಲ್ಲೂ  ವ್ಯವಹಾರ ನಿರತವಾಗಿತ್ತು. 

ಬೆಳಗ್ಗಿನ ವಹಿವಾಟಿನಲ್ಲಿ ಸನ್‌ ಫಾರ್ಮಾ, ಬ್ಯಾಂಕ್‌ ಆಫ್ ಬರೋಡ, ಅರಬಿಂದೋ ಫಾರ್ಮಾ, ಐಟಿಸಿ ಮತ್ತು ಸಿಪ್ಲಾ ಟಾಪ್‌ ಗೇನರ್‌ ಆಗಿದ್ದವು. ಲಾರ್ಸನ್‌, ಟಾಟಾ ಮೋಟರ್‌, ಭಾರ್ತಿ ಏರ್‌ಟೆಲ್‌, ಐಸಿಐಸಿಐ ಬ್ಯಾಂಕ್‌ ಟಾಪ್‌ ಲೂಸರ್‌ ಎನಿಸಿಕೊಂಡವು. 

Advertisement

Udayavani is now on Telegram. Click here to join our channel and stay updated with the latest news.

Next