Advertisement
ಪ್ರತೀ ಶುಕ್ರವಾರದಂದು ಪಂಚಾಯತ್ ಎದುರಿನ ಬಸ್ ತಂಗು ದಾಣದ ಒಳಗೆ ತಾತ್ಕಾಲಿಕ ಸಂತೆ ನಡೆಯುವುದರಿಂದ ಉಡುಪಿಯಿಂದ ಅಜೆಕಾರು, ಹೆಬ್ರಿಗೆ ಸಂಚರಿಸುವ ಬಸ್‌ಗಳು ಪೆರ್ಡೂರು ಬಸ್‌ಸ್ಟಾಂಡ್ ಒಳ ಪ್ರವೇಶಿಸಲು ಸಾಧ್ಯವಿಲ್ಲದೆ ರಸ್ತೆ ಮಧ್ಯದಲ್ಲೆ ಜನರನ್ನು ಇಳಿಸಿ ಹೋಗುತ್ತಿದ್ದಾರೆ.
ಪಂಚಾಯತ್ ಎದುರುಗಡೆ ನಬಾರ್ಡ್ 2014-15ನೇ ಯೋಜನೆ ಯಲ್ಲಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಅನುದಾನದಲ್ಲಿ ಸುಮಾರು 23.77 ಲ.ರೂ.ನಲ್ಲಿ ನಿರ್ಮಾಣಗೊಂಡ ಗ್ರಾಮೀಣ ಸಂತೆ ಮಾರುಕಟ್ಟೆ ಕಟ್ಟಡ ಇನ್ನೂ ಪ್ರಯೋಜನಕ್ಕೆ ಬಂದಿಲ್ಲ. ಈಗ ಇದು ಬೀದಿನಾಯಿ, ಕುಡುಕರ ವಾಸಸ್ಥಾನವಾಗಿದ್ದು ಇಲ್ಲಿಯೇ ಸಂತೆ ಮಾರುಕಟ್ಟೆ ಯಾಕೆ ನಡೆಸುತ್ತಿಲ್ಲ ಎಂದು ಸಾರ್ವಜನಿಕರು ಪ್ರಶ್ನಿಸಿದ್ದಾರೆ. ಅಂಗಡಿ ವ್ಯಾಪಾರಸ್ಥರಿಗೆ ಸಂಕಷ್ಟ
ಪೆರ್ಡೂರು ಬಸ್‌ಸ್ಟಾಂಡ್ ಬಳಿ ಅನೇಕ ಅಂಗಡಿಗಳಿದ್ದು, ಅದರ ಮುಂಭಾಗ ದಲ್ಲಿಯೇ ತಾತ್ಕಾಲಿಕ ಸಂತೆ ಮಾರುಕಟ್ಟೆ ನಿರ್ಮಾಣವಾಗಿದ್ದರಿಂದ ಜನಜಂಗುಳಿ ಯಿಂದಾಗಿ ಅಂಗಡಿ ವ್ಯಾಪಾರಸ್ಥರೂ ಕೂಡ ಸಂಕಷ್ಟಕ್ಕೆ ಸಿಲುಕುವಂತಾಗಿದೆ. ಜನರಿಗೆ ನಿಲ್ಲಲು ಸ್ಥಳವಿಲ್ಲದೆ ಅಂಗಡಿಯ ಮುಂಭಾಗದಲ್ಲಿ ಬಂದು ನಿಲ್ಲುತ್ತಾರೆ.
Related Articles
ಮಾರುಕಟ್ಟೆ ನಿರ್ಮಾಣವಾಗಿ 3 ವರ್ಷ ಗಳಾದರೂ ಜನರ ಸಮಸ್ಯೆಗೆ ಸ್ಪಂದಿಸುವ ಪಂಚಾಯತ್ ಈ ಬಗ್ಗೆ ಮೌನವಹಿಸಿದೆ ಎಂದು ಗ್ರಾ.ಪಂ. ಮಾಜಿ ಅಧ್ಯಕ್ಷ ಶಿವರಾಮ ಶೆಟ್ಟಿ ತಿಳಿಸಿದ್ದಾರೆ.
Advertisement
ಶೀಘ್ರ ಪಂಚಾಯತ್‌ಗೆ ಹಸ್ತಾಂತರ ಚುನಾವಣೆಯ ಅನಂತರ ಉದ್ಘಾಟನೆ ಮಾಡಿ ಪಂಚಾಯತ್‌ಗೆ ಬಿಟ್ಟು ಕೊಡಲಾಗುವುದು ಎನ್ನುವ ಮಾಹಿತಿ ಇದೆ.
-ಸುರೇಶ್, ಪಿಡಿಒ, ಗ್ರಾ.ಪಂ., ಪೆರ್ಡೂರು
- ಉದಯ ಕುಮಾರ್ ಶೆಟ್ಟಿ