Advertisement

ನಿರಂತರ 7ನೇ ದಿನವೂ ಗೆಲವು: ಮುಂಬಯಿ ಶೇರು 3 ವಾರಗಳ ಎತ್ತರಕ್ಕೆ

04:23 PM Nov 24, 2017 | |

ಮುಂಬಯಿ : ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್‌ ಸೂಚ್ಯಂಕ ಇಂದು ಶುಕ್ರವಾರ, ನಿರಂತರ ಏಳನೇ ದಿನವೂ ತನ್ನ ಗೆಲುವಿನ ಓಟವನ್ನು ಮುಂದುವರಿಸಿತು. ದಿನಾಂತ್ಯಕ್ಕೆ  91 ಅಂಕಗಳ ಏರಿಕೆಯೊಂದಿಗೆ 33,679.24 ಅಂಕಗಳ ಎತ್ತರವನ್ನು ತಲುಪಿದ ಸೆನ್ಸೆಕ್ಸ್‌ ಆ ಮೂಲಕ 3 ವಾರಗಳ ಗರಿಷ್ಠ ಎತ್ತರವನ್ನು ತಲುಪಿದ ಸಾಧನೆ ಮಾಡಿತು. 

Advertisement

ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ ಕೂಡ ಇಂದು 40.95 ಅಂಕಗಳ ಏರಿಕೆಯನ್ನು ದಾಖಲಿಸಿ ದಿನದ ವಹಿವಾಟನ್ನು 10,389.70 ಅಂಕಗಳ ಮಟ್ಟವನ್ನು ತಲುಪಿ ಕೊನೆಗೊಳಿಸಿತು.

ಇಂದಿನ ವಹಿವಾಟಿನ ನಡುವಿನಲ್ಲಿ ನಿಫ್ಟಿ ಒಂದು ಬಾರಿ 10,404.50 ಅಂಕಗಳ ದಾಖಲೆಯ ಎತ್ತರವನ್ನು ತಲುಪಿತ್ತು. ಅನಂತರದಲ್ಲಿ ಕಂಡು ಬಂದ ಲಾಭ ನಗದೀಕರಣದ ಮಾರಾಟ ಒತ್ತಡಕ್ಕೆ ಅದು ಗುರಿಯಾಗಿ 10,389.70 ಅಂಕಗಳ ಮಟ್ಟಕ್ಕೆ ಕೆಳ ತಳ್ಳಲ್ಪಟ್ಟಿತು. 

ನಿರಂತರ ಗೆಲುವಿನ ಓಟದ ಈ ವಾರದಲ್ಲಿ  ಸೆನ್ಸೆಕ್‌ಸ 336.44 ಅಂಕಗಳನ್ನು ಸಂಪಾದಿಸಿತು. ಅಂತೆಯೇ  ನಿಫ್ಟಿ 106.10 ಅಂಕಗಳನ್ನು ಸಂಪಾದಿಸಿತು.

Advertisement

Udayavani is now on Telegram. Click here to join our channel and stay updated with the latest news.

Next