ಮುಂಬಯಿ: ಕಳೆದ ವಾರಾಂತ್ಯದಲ್ಲಿ ಭಾರೀ ಕುಸಿತ ಕಂಡಿದ್ದ ಮುಂಬಯಿ ಷೇರುಪೇಟೆ ಸಂವೇದಿ ಸೂಚ್ಯಂಕ ಸೋಮವಾರ (ನವೆಂಬರ್ 29) 153 ಅಂಕಗಳ ಏರಿಕೆಯೊಂದಿಗೆ ದಿನಾಂತ್ಯದ ವಹಿವಾಟನ್ನು ಕೊನೆಗೊಳಿಸಿದೆ.
ಇದನ್ನೂ ಓದಿ:ರಾಜ್ಯಸಭೆಯಲ್ಲಿ ಕಾಂಗ್ರೆಸ್, ಸಿಪಿಎಂ ಗದ್ದಲ, ಕೋಲಾಹಲ; 12 ಮಂದಿ ಸಂಸದರ ಅಮಾನತು
ಮುಂಬಯಿ ಷೇರುಪೇಟೆಯ ಸಂವೇದಿ ಸೂಚ್ಯಂಕ 153.43 ಅಂಕಗಳಷ್ಟು ಏರಿಕೆಯೊಂದಿಗೆ 57,260.58 ಅಂಕಗಳಲ್ಲಿ ದಿನಾಂತ್ಯದ ವಹಿವಾಟು ಅಂತ್ಯಗೊಂಡಿದೆ. ಅದೇ ರೀತಿ ಎನ್ ಎಸ್ ಇ ನಿಫ್ಟಿ 27.50 ಅಂಕ ಏರಿಕೆಯಾಗಿದ್ದು, 17,054.00 ಅಂಕಗಳಲ್ಲಿ ವಹಿವಾಟು ಮುಕ್ತಾಯಗೊಂಡಿದೆ.
ಸೆನ್ಸೆಕ್ಸ್, ನಿಫ್ಟಿ ಏರಿಕೆಯಿಂದ ಕೋಟಕ್ ಮಹೀಂದ್ರ ಬ್ಯಾಂಕ್, ಎಚ್ ಡಿಎಫ್ ಸಿ ಲೈಫ್, ಎಚ್ ಸಿಎಲ್ ಟೆಕ್ನಾಲಜೀಸ್, ಟಿಸಿಎಸ್ ಮತ್ತು ವಿಪ್ರೋ ಷೇರುಗಳು ಲಾಭಗಳಿಸಿದೆ. ಬಿಪಿಸಿಎಲ್, ಸನ್ ಫಾರ್ಮಾ, ಯುಪಿಎಲ್, ಒಎನ್ ಜಿಸಿ ಮತ್ತು ಅದಾನಿ ಪೋರ್ಟ್ಸ್ ಷೇರುಗಳು ನಷ್ಟ ಕಂಡಿದೆ.
ದಕ್ಷಿಣ ಆಫ್ರಿಕಾದಲ್ಲಿ ಪತ್ತೆಯಾದ ಕೋವಿಡ್ ನ ರೂಪಾಂತರಿ ವೈರಸ್ ಒಮಿಕ್ರಾನ್, ಜಗತ್ತಿನ ಹಲವು ದೇಶಗಳಲ್ಲಿ ಪತ್ತೆಯಾಗತೊಡಗಿರುವುದು ಹಾಗೂ ಅನಿಶ್ಚಿತತೆ ಮುಂಬಯಿ ಷೇರುಮಾರುಕಟ್ಟೆ ವಹಿವಾಟಿನ ಮೇಲೆ ಪರಿಣಾಮ ಬೀರುವಂತಾಗಿದೆ.