ಮುಂಬಯಿ : ಸಂಭ್ರಮ – ಸಡಗರದ ದೀಪಾವಳಿ ಹಬ್ಬದ ಈ ವಾರದ ಆರಂಭಿಕ ದಿನವಾದ ಇಂದು ಸೋಮವಾರ ಮುಂಬಯಿ ಶೇರು ಮಾರುಕಟ್ಟೆಯ ಸೆನ್ಸೆಕ್ಸ್ ಸೂಚ್ಯಂಕ 200.95 ಅಂಕಗಳ ಏರಿಕೆಯೊಂದಿಗೆ ದಾಖಲೆ ಎತ್ತರದ 32,633.64 ಅಂಕಗಳ ಮಟ್ಟಕೇರಿತು.
ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 63.40 ಅಂಕಗಳ ಏರಿಕೆಯೊಂದಿಗೆ ದಾಖಲೆಯ 10,230.90 ಅಂಕಗಳ ಮಟ್ಟವನ್ನು ತಲುಪಿತು.
ಇಂದು ವಹಿವಾಟಿಗೆ ಒಳಪಟ್ಟ ಶೇರುಗಳ ಪೈಕಿ 1,390 ಶೇರುಗಳು ಹಿನ್ನಡೆಗೆ ಗುರಿಯಾದರೆ 1,310 ಶೇರುಗಳು ಮುನ್ನಡೆಯನ್ನು ಕಂಡವು; 128 ಶೇರುಗಳ ಧಾರಣೆಯಲ್ಲಿ ಯಾವುದೇ ಬದಲಾವಣೆ ಉಂಟಾಗಲಿಲ್ಲ.
ಭಾರ್ತಿ ಏರ್‌ಟೆಲ್, ಟಾಟಾ ಮೋಟರ್ ಡಿವಿಆರ್, ಮತ್ತು ಟಾಟಾ ಪವರ್ ಶೇರುಗಳು ಟಾಪ್ ಗೇನರ್ ಎನಿಸಿದರೆ, ಎಕ್ಸಿಸ್ ಬ್ಯಾಂಕ್, ಅದಾನಿ ಪೋರ್ಟ್ ಶೇರುಗಳು ಟಾಪ್ ಲೂಸರ್ ಎನಿಸಿಕೊಂಡವು.
ಮಿಡ್ ಕ್ಯಾಪ್ ಶೇರುಗಳ ನಿರ್ವಹಣೆ ಇಂದು ಕಳಪೆ ಎನಿಸಿಕೊಂಡಿತು. ವಿಭಾಗೀಯ ಮುಂಚೂಣಿಯಲ್ಲಿ ಇನ್‌ಫ್ರಾ, ಆಟೋ, ಮೆಟಲ್ ರಂಗದ ಶೇರುಗಳು ಮಿಂಚಿದವು.