ಹೊಸದಿಲ್ಲಿ : ಅಗ್ರಮಾನ್ಯ ಪ್ಯಾರಾ ಹೈ-ಜಂಪರ್ ಮರಿಯಪ್ಪನ್ ತಂಗವೇಲು ಟೋಕಿಯೊ ಪ್ಯಾರಾಲಿಂಪಿಕ್ಸ್‌ನಲ್ಲಿ ತ್ರಿವರ್ಣ ಧ್ವಜಧಾರಿಯ ಗೌರವಕ್ಕೆ ಪಾತ್ರರಾಗಲಿದ್ದಾರೆ.
ಭಾರತದ ಪ್ಯಾರಾ-ಆ್ಯತ್ಲೆಟಿಕ್ಸ್ ಚೇರ್ಮನ್ ಆರ್. ಸತ್ಯನಾರಾಯಣ ಶುಕ್ರವಾರ ಇದನ್ನು ಪ್ರಕಟಿಸಿದರು. ಆ. 24ರಂದು ಈ ಕ್ರೀಡಾಕೂಟ ಆರಂಭವಾಗಲಿದೆ.
2016ರ ರಿಯೋ ಪ್ಯಾರಾಲಿಂಪಿಕ್ಸ್‌ನ ಟಿ-42 ಹೈಜಂಪ್ ಸ್ಪರ್ಧೆಯಲ್ಲಿ 1.89 ಮೀ. ಸಾಧನೆಯೊಂದಿಗೆ ಚಿನ್ನದ ಪದಕ ಜಯಿಸಿದ ಹಿರಿಮೆ ತಂಗವೇಲು ಅವರದ್ದಾಗಿದೆ. ಈ ಸಾಧನೆಗಾಗಿ ಕಳೆದ ವರ್ಷ ಪ್ರತಿಷ್ಠಿತ ಖೇಲ್‌ರತ್ನ ಗೌರವಕ್ಕೆ ಭಾಜನರಾಗಿದ್ದರು.
ಟೋಕಿಯೊದಲ್ಲಿ ವಿಶ್ವದಾಖಲೆಯೊಂದಿಗೆ ಚಿನ್ನದ ಪದಕ ಗೆಲ್ಲುವುದು ತನ್ನ ಗುರಿ ಎಂಬುದಾಗಿ ತಮಿಳುನಾಡಿನ ಸೇಲಂ ಜಿಲ್ಲೆಯವರಾದ 25 ವರ್ಷದ ತಂಗವೇಲು ಹೇಳಿದ್ದಾರೆ. ಟೋಕಿಯೊ ಪ್ಯಾರಾಲಿಂಪಿಕ್ಸ್‌ನಲ್ಲಿ 72 ಸ್ಪರ್ಧಿಗಳು ಭಾರತವನ್ನು ಪ್ರತಿನಿಧಿಸಲಿದ್ದಾರೆ. ಇದರಲ್ಲಿ 18 ಮಂದಿ ವನಿತೆಯರು.
ಇದನ್ನೂ ಓದಿ : ಧೋನಿ ಹುಟ್ಟುಹಬ್ಬಕ್ಕೆ ಸುದೀಪ್ ಸಿಡಿಪಿ