Advertisement

ನೀರಿಲ್ಲದೇ ಒಣಗುತ್ತಿದೆ ಕಬ್ಬು

03:27 PM May 01, 2020 | Naveen |

ಮರಿಯಮ್ಮನಹಳ್ಳಿ: ಗ್ರಾಮೀಣ ಭಾಗಗಳಲ್ಲಿ ಕೇವಲ ಏಳುತಾಸು ಕರೆಂಟ್‌ ಕೊಡುವುದರಿಂದ ಕಡಿಮೆ ಸಾಮರ್ಥ್ಯದ ವಿದ್ಯುತ್‌ ಪರಿವರ್ತಕ ಪದೇ ಪದೇ ಸುಟ್ಟುಹೋಗುತ್ತಿದ್ದು ಸುಮಾರು
ಐವತ್ತು ಎಕರೆ ಕಬ್ಬಿನ ಬೆಳೆಗೆ ಸಮರ್ಪಕ ನೀರು ಸಿಗದೇ ಒಣಗಿ ಹೋಗುತ್ತಿದ್ದು ರೈತರು ಲಕ್ಷಾಂತರ ರೂಪಾಯಿಗಳ ನಷ್ಟ ಅನುಭವಿಸಬೇಕಾದಂಥ ದುಸ್ಥಿತಿ ಬಂದಿದೆ.

Advertisement

ಮರಿಯಮ್ಮನಹಳ್ಳಿ ಹೋಬಳಿ ವ್ಯಾಪ್ತಿಯ ಡಣಾಪುರ ಗ್ರಾಮಪಂಚಾಯಿತಿಗೆ ಒಳಪಡುವ ವ್ಯಾನಕೆರೆ ಗ್ರಾಮದ ಬಳಿಯಿರುವ ತುಂಗಭದ್ರಾ ಹಿನ್ನೀರಿಗೆ ಹತ್ತಿರದಲ್ಲಿರುವ ಕಬ್ಬು ಬೆಳೆಗಾರರು ವಿದ್ಯುತ್‌ ಪರಿವರ್ತಕದ ಸಮಸ್ಯೆಯಿಂದ ತೊಂದರೆಗೆ ಒಳಗಾಗಿದ್ದಾರೆ. ಗ್ರಾಮೀಣ ಭಾಗಗಳಲ್ಲಿ ಬೆಳಗಿನ ಜಾವ 3 ಗಂಟೆಯಿದ 10 ಗಂಟೆವರೆಗೆ 7 ಗಂಟೆ ಮಾತ್ರ ವಿದ್ಯುತ್‌ ಕೊಡುತ್ತಾರೆ ಇದರಿಂದ ಎಲ್ಲ ರೈತರು ಒಟ್ಟಿಗೆ ಮೋಟಾರುಗಳನ್ನು ಆನ್‌ ಮಾಡುತ್ತಾರೆ. ಇದರಿಂದ ಓವರ ಲೋಡ್‌ ಆಗಿ ಪರಿವರ್ತಕಗಳು ಹಾಳಾಗುತ್ತಿವೆ. ವಿದ್ಯುತ್‌ ಹೆಚ್ಚು ಸಮಯ ಕೊಟ್ಟರೆ ರೈತರು ಪರ್ಯಾಯ ಸಮಯಗಳಲ್ಲಿ ನೀರು ಹರಿಸಿಕೊಳ್ಳುತ್ತಾರೆ. ಸರ್ಕಾರ 16 ತಾಸು ವಿದ್ಯುತ್‌ ಕೊಡಬೇಕು ಎನ್ನುತ್ತಾರೆ ಹೆಸರು ಹೇಳಲು ಬಯಸದ ರೈತರು.

ಲಾಕ್‌ಡೌನ್‌ನಿಂದಾಗಿ ಮುನಿರಾಬಾದ್‌ನಿಂದ ಬರಬೇಕಾದ ರಿಪೇರಿ ಕೆಲಸಗಾರರು ಬರುತ್ತಿಲ್ಲ. ಹಾಗಾಗಿ ಪರಿವರ್ತಕಗಳ ರಿಪೇರಿ ಕೆಲಸ ವಿಳಂಬವಾಗುತ್ತಿದೆ. ಇದರಿಂದ ರೈತರು ತಮ್ಮ ಬೆಳೆ
ಒಣಗುತ್ತೆ ಎಂಬ ಭೀತಿಯಿಂದ ಹಗರಿಬೊಮ್ಮನಹಳ್ಳಿಯ ಖಾಸಗಿಯವರ ಬಳಿ ರಿಪೇರಿ ಮಾಡಿಸಿಕೊಳ್ಳುತ್ತಿದ್ದಾರೆ. ಜೊತೆಗೆ ಸಿಬ್ಬಂದಿ ಕೊರತೆಯೂ ಇದ್ದು ರೈತರಿಗೆ ಸಮಸ್ಯೆಯಾಗುತ್ತಿದೆ.
ನರೇಶ್‌,
ಜೆಸ್ಕಾಂನ ಹೊಸಪೇಟೆ ತಾಲೂಕಿನ ಎಇಇ

ವ್ಯಾಸನಕೆರೆ ವ್ಯಾಪ್ತಿಯಲ್ಲಿ ಸಾಕಷ್ಟು ರೈತರು ಅನಧಿಕೃತ ಕೊಳವೆ ಬಾವಿಗಳನ್ನು ಹಾಕಿಸಿಕೊಂಡಿದ್ದಾರೆ. ರೈತರು ಎಲ್ಲ ಕೊಳವೆ ಬಾವಿಗಳಿಗೆ ಹಾಕಿಕೊಂಡಿರುವ ಮೋಟಾರುಗಳಿಗೆ ಆರ್‌ಆರ್‌ ನಂಬರ್‌ ಪಡೆದರೆ ಸೂಕ್ತ ಸಾಮರ್ಥ್ಯದ ವಿದ್ಯುತ್‌ ಪರಿವರ್ತಕಗಳನ್ನು ಅಳವಡಿಸಲು ಸಾಧ್ಯವಾಗುತ್ತದೆ.
ವೆಂಕಟೇಶ್‌,
ವಿಭಾಗೀಯ ಅಧಿಕಾರಿ

Advertisement

Udayavani is now on Telegram. Click here to join our channel and stay updated with the latest news.

Next