Advertisement

ಕರಡಿ ಆಡಿಸುವ ಕುಟುಂಬಕ್ಕೆ ನಿವೇಶನ ಹಂಚಿಕೆಗೆ ಕ್ರಮ

07:36 PM Oct 25, 2019 | Team Udayavani |

ಮರಿಯಮ್ಮನಹಳ್ಳಿ: ಕರಡಿ ಆಡಿಸುವ ಕುಟುಂಬಗಳಿಗೆ ಸರಕಾರ ನೀಡಿದ ಜಮೀನಿನಲ್ಲಿ ನಿವೇಶನಗಳನ್ನು ಮಾಡಿ ಕೂಡಲೇ ಹಂಚಿಕೆ ಮಾಡಲು ಕ್ರಮ ಕೈಗೊಳ್ಳಿ ಎಂದು ಬಳ್ಳಾರಿ ಜಿಲ್ಲಾ ಸಂಸದ ವೈ. ದೇವೇಂದ್ರಪ್ಪ ಅವರು ಡಣಾಪುರ ಗ್ರಾಪಂ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ಸೂಚನೆ ನೀಡಿದರು.

Advertisement

ಅವರು ಸಮೀಪದ 114 ಡಣಾಪುರ ಗ್ರಾಮಪಂಚಾಯಿತಿಯ 2019ನೇ ಸಾಲಿನ 2ನೇ ಗ್ರಾಮಸಭೆಯಲ್ಲಿ ದಿಢೀರನೆ ಬಂದು ಪಾಲ್ಗೊಂಡು ಸಭೆಯಲ್ಲಿ ಎಲ್ಲ ನಿಲುವಳಿ ಬಗ್ಗೆ ಕೂಲಂಕಷವಾಗಿ ಆಲಿಸಿ ನಂತರ ಮಾತನಾಡಿದರು. 112 ವೆಂಕಟಾಪುರ ಗ್ರಾಮದ ಕರಡಿ ಆಡಿಸುತ್ತಿದ್ದ ಖಲಂದರ್‌ ಕುಂಟುಂಬಗಳು ಹಲವು ದಶಕಗಳಿಂದಲೂ ತಮ್ಮ ಸಾಂಪ್ರದಾಯಿಕ ವೃತ್ತಿಯಾದ ಕರಡಿ ಆಡಿಸುವ ಮೂಲಕ ಜನರಿಗೆ ಮನರಂಜನೆ ನೀಡಿ ಜೀವನ ಸಾಗಿಸುತ್ತಿದ್ದರು.

ಅರಣ್ಯ ಕಾಯಿದೆ ವನ್ಯಜೀವಿಗಳ ಸಂರಕ್ಷಣಾ ಕಾಯಿದೆಯಿಂದಾಗಿ ಅರಣ್ಯ ಇಲಾಖೆಯವರು ಇವರ ಕರಡಿಗಳನ್ನು ವಶಪಡಿಸಿಕೊಂಡರು. ನಂತರ ಇವರ ಜೀವನ ಸಂಕಷ್ಟಕ್ಕೊಳಗಾಗಿದೆ ಈ ಕುಟುಂಬಗಳ ಹೋರಾಟದಿಂದಾಗಿ ಸರ್ಕಾರ ಇವರಿಗೆ ನಿವೇಶನ ನೀಡಲು ಮುಂದಾಗಿ ಜಮೀನು ಮಂಜೂರು ಮಾಡಿದ್ದಾರೆ ಇನ್ನುಮುಂದೆ ವಿಳಂಬಮಾಡದೇ ಸುಮಾರು 60 ಕುಟುಂಬಗಳಿಗೆ ನಿವೇಶನ ನೀಡಲು ಈ ಸಭೆಯಲಿ ಠರಾವು ಪಾಸುಮಾಡಿ ಅವರ ಬದುಕಿಗೆ ಭದ್ರತೆ ನೀಡಿ ಎಂದರು. ಅಲ್ಲದೇ ಈ ಸಮುದಾಯ ದರವೇಶಿ ಸಮುದಾಯವೆಂದು ಜಾತಿ ಪ್ರಮಾಣ ಪತ್ರನೀಡಲು ಮನವಿಮಾಡಿಕೊಂಡಿದ್ದಾರೆ.

ಈ ಸಮುದಾಯದಬಗ್ಗೆ ಕನ್ನಡ ವಿಶ್ವವಿದ್ಯಾಲಯದ
ವಿದ್ವಾಂಸರಾದ ಕೆ.ಎಂ. ಮೈತ್ರಿ ಅವರೂ ವಿವರ ನೀಡಿರುತ್ತಾರೆ. ಈ ಬಗ್ಗೆ ತಹಶೀಲ್ದಾರರೊಂದಿಗೆ ಮಾತನಾಡಿ ಸೂಕ್ತ ಕ್ರಮಕೈಗೊಳ್ಳುತ್ತೇನೆ ಎಂದರು.

ನಂತರ ಸಭೆಯಲ್ಲಿ ವ್ಯಾಸನಕೆರೆ ಗ್ರಾಮದಲ್ಲಿ ಸ.ಕಿ.ಪ್ರಾ.ಶಾಲೆಗೆ ಸ್ವಂತ ಜಾಗವಿಲ್ಲ ಅದಕ್ಕೆ ಸ್ವಂತ ಜಾಗ ಖರೀದಿಸಲು ಠರಾವು ಪಾಸು ಮಾಡಲಾಯಿತು. ರಾಷ್ಟ್ರೀಯ ಹೆದ್ದಾರಿ 50 ಕಾಮಗಾರಿಗೆ ಗಾಳೆಮ್ಮನಗುಡಿ ಹನುಮನಹಳ್ಳಿ ಗ್ರಾಮಗಳ ಮನೆಗಳು ಕಳೆದುಕೊಂಡ ಕುಟುಂಬಗಳಿಗೆ ನಿವೇಶನ ಹಂಚಲು ಸರ್ವೇ ನಂ. 82ರಲ್ಲಿ ಕಾಯ್ದಿರಿಸಲು ಸಭೆಯಲ್ಲಿ ನಿರ್ಣಯಿಸಲಾಯಿತು.

Advertisement

ಗ್ರಾಮಸಭೆಯಲ್ಲಿ ಜನರ ಯೋಜನೆ ಜನರ ಅಭಿವೃದ್ಧಿ, ಘನತ್ಯಾಜ್ಯ ನಿರ್ವಹಣ ಘಟಕದ ಕ್ರಿಯಾಯೋಜನೆ, ಗಾಳೆಮ್ಮನಗಡಿ ಅರಣ್ಯ ಭೂಮಿಯಲ್ಲಿ ವಾಸಮಾಡುತ್ತಿದ್ದ ಕುಟುಂಬಗಳಿಗೆ ನಿವೇಶನ ಹಂಚಿಕೆ ಮಾಡಲು ಸರ್ವೆನಂ 82/2ರಲ್ಲಿ ನಿವೇಶನ ಹಂಚಲು ಅನುಮೋದನೆ ಮಾಡಲಾಯಿತು. ಗ್ರಾಪಂ ಅಧ್ಯಕ್ಷ ಸಿ.ಎ. ಗಾಳೆಪ್ಪ ಸಭೆ ಅಧ್ಯಕ್ಷತೆ ವಹಿಸಿದ್ದರು. ಪಿಡಿಓ ಮಂಜುಳಾರಾಣಿ ವಿ., ಎಸ್‌ಡಿಎ ಮಾರೇಶ್‌, ಹೊಸಪೇಟೆ ಶಿಶು ಅಭಿವೃದ್ಧಿ ಯೊಜನಾಧಿಕಾರಿ ಅಮರೇಶ್‌, ವಿವಿಧ ಶಾಲೆಗಳ ಮುಖ್ಯ ಶಿಕ್ಷಕರು, ಅಂಗನವಾಡಿ ಕಾರ್ಯಕರ್ತರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next