Advertisement
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಮರಿತಿಬ್ಬೇಗೌಡ, ನಾನು ಸ್ವಇಚ್ಛೆಯಿಂದ ಪರಿಷತ್ತು ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದೇನೆ. ಜೆಡಿಎಸ್ ನಲ್ಲಿ ಜಾತ್ಯತೀತ ತತ್ವಗಳು ಉಳಿದಿಲ್ಲ. ನಿಷ್ಠಾವಂತ ಕಾರ್ಯಕರ್ತರಿಗೆ ಬೆಲೆ ಇಲ್ಲದಂತಾಗಿದೆ. ಈ ಬಗ್ಗೆ ಪಕ್ಷದ ವರಿಷ್ಠರಿಗೆ ಹಲವು ಬಾರಿ ಮನವಿ ಮಾಡಿದರೂ ಪ್ರಯೋಜವಾಗಿಲ್ಲ ಎಂದರು.
Related Articles
Advertisement
ಮತ್ತೊಬ್ಬರು ರಾಜೀನಾಮೆ ಸಾಧ್ಯತೆ: ಹೊರಟ್ಟಿ
ವಿಧಾನ ಪರಿಷತ್ತು ಸದಸ್ಯ ಮರಿತಿಬ್ಬೇಗೌಡ ಅವರು ತಮ್ಮ ಸದಸ್ಯತ್ವಕ್ಕೆ ನೀಡಿದ ರಾಜೀನಾಮೆ ಅಂಗೀಕರಿಸಿದ್ದೇನೆ ಎಂದು ಸಭಾಪತಿ ಬಸವರಾಜ ಹೊರಟ್ಟಿ ತಿಳಿಸಿದರು.
ಮರಿತಿಬ್ಬೇಗೌಡ ಅವರು ಸ್ವ ಇಚ್ಛೆಯಿಂದ ರಾಜೀನಾಮೆ ನೀಡಿದ್ದಾಗಿ ಹೇಳಿದ್ದಾರೆ. ನಿಯಮದಂತೆ ರಾಜೀನಾಮೆ ಅಂಗೀಕರಿಸಿದ್ದು, ಇಂದಿನಿಂದ ಅವರು ಪರಿಷತ್ತು ಸದಸ್ಯರಲ್ಲ. ನನ್ನ ಅವಧಿಯಲ್ಲಿ ಒಟ್ಟು 11 ಜನ ಸದಸ್ಯರು ರಾಜೀನಾಮೆ ನೀಡಿದ್ದು ಇದೊಂದು ದಾಖಲೆಯಾಗಿದೆ. ಇನ್ನೆರಡು ದಿನಗಳಲ್ಲಿ ಮತ್ತೊಬ್ಬ ಸದಸ್ಯರು ರಾಜೀನಾಮೆ ನೀಡುವ ಸಾಧ್ಯತೆಯಿದೆ ಎಂದರಾದರೂ ಅವರು ಯಾರು ಎಂದು ಹೇಳಲಿಲ್ಲ.
ವಿಧಾನ ಮಂಡಲ ಅಧಿವೇಶನ ವರ್ಷದಲ್ಲಿ ಕನಿಷ್ಠ 60 ದಿನ ನಡೆಯಬೇಕೆಂಬ ನಿಯಮ ಇದೆ. ಆದರೆ ಅದು ಆಗುತ್ತಿಲ್ಲ ಎಂಬ ನೋವು ಇದೆ. ಅಧಿವೇಶನದಲ್ಲಿ ಆಡಳಿತ-ವಿಪಕ್ಷ ಸದ್ಯರು ವಿವಾದ, ಗದ್ದಲಕ್ಕೆ ಅವಕಾಶ ನೀಡದೆ ವಿಷಯಗಳ ಮೇಲೆ ಗಂಭೀರ ಚರ್ಚೆ ಆಗುವಂತಾಗಬೇಕಾಗಿದೆ ಎಂದರು.