Advertisement

ಶಿರ್ವದಲ್ಲಿ ಶುಭಾರಂಭಗೊಂಡ ಮರೀನಾ ಸಿಲ್ಕ್ಸ್ ಸಂಸ್ಥೆ

01:03 PM Oct 03, 2021 | Team Udayavani |

ಶಿರ್ವ: ಶಿರ್ವ ಮಂಚಕಲ್‌ ಪೇಟೆಯ ಮುಖ್ಯ ರಸ್ತೆಯ ಬಳಿ ಶಿರ್ವದ ಮರೀನಾ ಸಮೂಹ ಸಂಸ್ಥೆಗಳ ನೂತನ ವಾಣಿಜ್ಯ ಸಂಕೀರ್ಣ ಅಂಬ್ರೋಸ್‌ ಆರ್ಕೇಡ್‌ ಮತ್ತು ನೂತನ ಬಟ್ಟೆ ಮಳಿಗೆ ಮರೀನಾ ಸಿಲ್ಕ್ಸ್ ಸಂಸ್ಥೆಯು ರವಿವಾರ ಶುಭಾರಂಭಗೊಂಡಿತು.

Advertisement

ಮುದರಂಗಡಿ ಸಂತ ಫ್ರಾನ್ಸಿಸ್‌ ಕ್ಸೇವಿಯರ್‌ ಚರ್ಚ್‌ನ ಧರ್ಮಗುರು ಫಾ| ಫ್ರಾನ್ಸಿಸ್‌ ಕ್ಸೇವಿಯರ್‌ ಲೂವಿಸ್‌ ಅಂಬ್ರೋಸ್‌ ಆರ್ಕೇಡ್‌ ವಾಣಿಜ್ಯ ಮತ್ತು ವಸತಿ ಸಂಕೀರ್ಣವನ್ನು ಉದ್ಘಾಟಿಸಿದರು. ಶಿರ್ವ ಆರೋಗ್ಯ ಮಾತಾ ದೇವಾಲಯದ ಪ್ರಧಾನ ಧರ್ಮಗುರು ಫಾ| ಡೆನ್ನಿಸ್‌ ಡೇಸಾ ಪ್ರಾರ್ಥನಾ ವಿಧಿ ನೆರವೇರಿಸಿದರು.

ಮಣಿಪಾಲ ಕ್ರೈಸ್ಟ್‌ ಕಿಂಗ್‌ ಚರ್ಚ್‌ನ ಧರ್ಮಗುರು ಫಾ| ಫೆಡ್ರಿಕ್‌ ಡಿ‡ ಸೋಜಾ ಮರೀನಾ ಸಿಲ್ಕ್ಸ್ ಬಟ್ಟೆ ಮಳಿಗೆಯನ್ನು ಉದ್ಘಾಟಿಸಿದರು.

ಪೆರ್ನಾಲ್‌ ಫಾತಿಮಾ ಮಾತೆಯ ದೇವಾಲಯದ ಧರ್ಮಗುರು ಫಾ| ಜೆರೋಮ್‌ ಮೊಂತೆರಿಯೋ ಪ್ರಾರ್ಥನಾ ವಿಧಿ ನೆರವೇರಿಸಿದರು.ಬಳಿಕ ನಡೆದ ಸರಳ ಸಮಾರಂಭದಲ್ಲಿ ದ.ಕ.ಜಿಲ್ಲಾ ಪರಿಷತ್‌ನ ಮಾಜಿ ಉಪಾಧ್ಯಕ್ಷೆ ಲೀನಾ ಮತಾಯಸ್‌ ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.

Advertisement

ಅಧ್ಯಕ್ಷತೆ ವಹಿಸಿದ್ದ ಶಿರ್ವ ಆರೋಗ್ಯ ಮಾತಾ ದೇವಾಲಯದ ಪ್ರಧಾನ ಧರ್ಮಗುರು ರೆ|ಫಾ| ಡೆನ್ನಿಸ್‌ ಡೇಸಾ ಆಶೀರ್ವಚನ ನೀಡಿ ವ್ಯಾಪಾರವನ್ನು ಸವಾಲಾಗಿ ಸ್ವೀಕರಿಸಿದರೆ ಯಶಸ್ಸು ಸಿಗುತ್ತದೆ. ಮರೀನಾ ಸಮೂಹ ಸಂಸ್ಥೆಗಳು ಕಳೆದ 49 ವರ್ಷಗಳಿಂದ ಶಿರ್ವದಂತಹ ಗ್ರಾಮೀಣ ಪರಿಸರದಲ್ಲಿ ಗ್ರಾಹಕರ ವಿಶ್ವಾಸ ಮತ್ತು ನಂಬಿಕೆ ಉಳಿಸಿಕೊಂಡು ಸೇವೆ ನೀಡುತ್ತಿದ್ದು,ಸಂಸ್ಥೆ ಯಿಂದ ಗ್ರಾಹಕರಿಗೆ ಉತ್ತಮ ಸೇವೆ ಸಿಗುವಂತಾಗಲಿ ಎಂದು ಶುಭ ಹಾರೈಸಿದರು.

ಮುಖ್ಯ ಅತಿಥಿ ನ್ಯಾಯವಾದಿ ವಿಲ್ಸನ್‌ ರೊಡ್ರಿಗಸ್‌,ಶಿರ್ವ ಗ್ರಾ.ಪಂ. ಅಧ್ಯಕ್ಷ ಕೆ.ಆರ್‌. ಪಾಟ್ಕರ್‌ ಮತ್ತು ಶಿರ್ವದ ಹೊಟೇಲ್‌ ಮಂದಾರದ ಮಾಲಕ ಕೆ. ಮನೋಹರ ಶೆಟ್ಟಿ ಶುಭ ಹಾರೈಸಿದರು. ವಾಣಿಜ್ಯ ಸಂಕೀರ್ಣ ನಿರ್ಮಿಸಲು ಸಹಕರಿಸಿದ ವಾಸ್ತುಶಿಲ್ಪಿ,ಎಂಜಿನಿಯರ್‌ ಮತ್ತು ಗುತ್ತಿಗೆದಾರರನ್ನು ಫ್ರೆಡ್ರಿಕ್‌ ಮತಾಯಸ್‌ ಗೌರವಿಸಿದರು.

ಕಾರ್ಯಕ್ರಮದಲ್ಲಿ ಚಾರ್ಲ್ಸ್ ಮೆಂಡೋನ್ಸಾ, ಎಡ್ರಿನ್‌ ಮೆಂಡೋನ್ಸಾ, ಮರೀನಾ ಜಾರ್ಜ್‌ ಲೋಬೋ, ನವೀನ್‌ ಮತಾಯಸ್‌, ಮೀನಾ ರುಡಾಲ್ಫ್ ಮತಾಯಸ್‌,ಸುಧೀರ್‌ ಶೆಟ್ಟಿ, ಆರ್ವಿನ್ ಮೆನೇಜಸ್‌,ಯೋಗೀಶ್‌ ಕುಲಾಲ್‌,ಕುಮಾರ್‌ ಶಿರ್ವ ಮೊದಲಾದವರು ಉಪಸ್ಥಿತರಿದ್ದರು.
ಸಂಸ್ಥೆಯ ಪ್ರವರ್ತಕ ಫ್ರೆಡ್ರಿಕ್‌ ಮತಾಯಸ್‌ ಸ್ವಾಗತಿಸಿದರು.ಶಿಕ್ಷಕ ಆಲ್ವಿನ್‌ ದಾಂತಿ ನಿರೂಪಿಸಿ, ಜೆನೆವೀವ್‌ ಮತಾಯಸ್‌ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next