Advertisement

ಹಾಲಿವುಡ್ ನಟಿಯ ಟ್ವೀಟರ್ ಖಾತೆ ಹ್ಯಾಕ್…ಅಶ್ಲೀಲ ಫೋಟೋ, ಟ್ವೀಟ್ ಅಪ್ ಲೋಡ್

10:21 AM Jan 02, 2020 | Nagendra Trasi |

ವಾಷಿಂಗ್ಟನ್: ಹಾಲಿವುಡ್ ಖ್ಯಾತ ನಟಿ, ಸಂಗೀತಗಾರ್ತಿ ಮರಿಯಾ ಕ್ಯಾರಿಯಾ ಟ್ವೀಟರ್ ಖಾತೆಯನ್ನು ಹೊಸ ವರ್ಷದ ಸಂದರ್ಭದ ಹಿನ್ನೆಲೆಯಲ್ಲಿ ಹ್ಯಾಕ್ ಮಾಡಿದ್ದು, ಸುಮಾರು 50ಕ್ಕೂ ಅಧಿಕ ಅಶ್ಲೀಲ ಟ್ವೀಟ್ ಗಳನ್ನು ಪೋಸ್ಟ್ ಮಾಡಲಾಗಿದೆ ಎಂದು ವರದಿ ತಿಳಿಸಿದೆ.

Advertisement

ಫೋಕ್ಸ್ ನ್ಯೂಸ್ ವರದಿ ಪ್ರಕಾರ, ಅಶ್ಲೀಲ ಫೋಟೋ, ಟ್ವೀಟ್ ಗಳ ಮರಿಯಾ ಅವರ ಟ್ವೀಟರ್ ಖಾತೆಯನ್ನು ಲಾಕ್ ಮಾಡಿ, ಎಲ್ಲಾ ಅಶ್ಲೀಲ ಟ್ವೀಟ್ ಗಳನ್ನು ತೆಗೆದುಹಾಕಲಾಗಿದೆ ಎಂದು ಹೇಳಿದೆ.

ಶೀಘ್ರವೇ ನಮಗೆ ಈ ವಿಷಯದ ಬಗ್ಗೆ ಗಮನಕ್ಕೆ ಬಂದಿದ್ದು, ನಾವು ಟ್ವೀಟ್ ಖಾತೆಯನ್ನು ಸ್ಥಗಿತಗೊಳಿಸಿ, ಅಶ್ಲೀಲ ಫೋಟೋ, ಟ್ವೀಟ್ ಅನ್ನು ಡಿಲೀಟ್ ಮಾಡಿದ್ದೇವೆ. ಅಲ್ಲದೇ ಟ್ವೀಟ್ ಹ್ಯಾಕ್ ಬಗ್ಗೆ ತನಿಖೆ ನಡೆಸುತ್ತಿದ್ದೇವೆ ಎಂದು ಟ್ವೀಟರ್ ವಕ್ತಾರ ಯುಎಸ್ ಎ ಟುಡೇಗೆ ತಿಳಿಸಿದ್ದಾರೆ.

ನಮ್ಮ ನಿಗೂಢ ತಂಡ ಟ್ವೀಟರ್ ಸಿಇಒ ಜಾಕ್ ಡೋರ್ ಸೈ, ನಟಿ ಚೋಲೆ ಗ್ರೇಸಿ ಮೋರ್ಟೆಝ್ ಸೇರಿದಂತೆ ಹಲವು ಗಣ್ಯ ವ್ಯಕ್ತಿಗಳ ಟ್ವೀಟರ್ ಖಾತೆಯನ್ನು ಹ್ಯಾಕ್ ಮಾಡಿರುವುದಾಗಿ ಹ್ಯಾಕರ್ಸ್ ಹೇಳಿರುವುದಾಗಿ ವರದಿ ವಿವರಿಸಿದೆ. ಏತನ್ಮಧ್ಯೆ ಹಾಲಿವುಡ್ ನಟಿ ಮರಿಯಾ ಅವರ ಮೊಬೈಲ್ ನಂಬರ್ ಅನ್ನು ಕೂಡಾ ಹ್ಯಾಕ್ ಮಾಡಿದ್ದಾರೆಯೇ ಎಂಬ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ ಎಂದು ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next