Advertisement

ಫ್ರೆಂಚ್‌ ಓಪನ್‌ ಟೆನಿಸ್‌: ಮರಿಯಾ ಶರಪೋವಾಗೆ ವೈಲ್ಡ್‌ ಕಾರ್ಡ್‌?

10:23 AM Apr 22, 2017 | Karthik A |

ಪ್ಯಾರಿಸ್‌: ಉದ್ದೀಪನ ಮದ್ದು ಸೇವನೆ ಪ್ರಕರಣದಲ್ಲಿ ಸಿಲುಕಿ 15 ತಿಂಗಳು ನಿಷೇಧ ಶಿಕ್ಷೆಗೆ ಒಳಗಾದ ರಶ್ಯದ ಮರಿಯಾ ಶರಪೋವಾ ಮತ್ತೆ ಟೆನಿಸ್‌ ಲೋಕಕ್ಕೆ ಮರಳಲು ಸಿದ್ಧತೆ ನಡೆಸುತ್ತಿದ್ದಾರೆ. ಅವರು ಮುಂಬರುವ ಫ್ರೆಂಚ್‌ ಓಪನ್‌ ಕೂಟದಲ್ಲಿ ಪಾಲ್ಗೊಳ್ಳುವ ಸಾಧ್ಯತೆ ಇದೆ ಎನ್ನಲಾಗಿದೆ.

Advertisement

ಶರಪೋವಾ ಮೇಲಿನ ನಿಷೇಧ ಎ .26ಕ್ಕೆ ತೆರವಾಗಲಿದೆ. ಕೆಲ ದಿನಗಳ ಹಿಂದೆ ಫ್ರೆಂಚ್‌ ಓಪನ್‌ ಅರ್ಹತಾ ಕೂಟ ನಡೆದಿತ್ತು, ನಿಷೇಧದಿಂದಾಗಿ ಶರಪೋವಾಗೆ ಇದರಲ್ಲಿ ಭಾಗವಹಿಸಲು ಸಾಧ್ಯವಾಗಿರಲಿಲ್ಲ. ಸದ್ಯ ಶರಪೋವಾಗೆ ವೈಲ್ಡ್‌ ಕಾರ್ಡ್‌ ಪ್ರವೇಶ ಕೊಡಿಸಲು ಪ್ರಯತ್ನ ನಡೆಯುತ್ತಿದೆ ಎನ್ನಲಾಗಿದೆ. ಆದರೆ ಅದಿನ್ನೂ ಖಚಿತಗೊಂಡಿಲ್ಲ. ನಿಷೇಧದ ಬಳಿಕ ಸ್ಟಟ್‌ಗರ್ಟ್‌ ಕೂಟದಲ್ಲಿ ಶರಪೋವಾ ಅವರು ಆಡಲಿದ್ದಾರೆ. ಇದು ಕಳೆದ ಒಂದೂವರೆ ವರ್ಷದ ಅನಂತರ ಶರಪೋವಾ ಆಡಲಿರುವ ಮೊದಲ ಅಂತಾರಾಷ್ಟ್ರೀಯ ಪಂದ್ಯಾವಳಿ ಆಗಲಿದೆ.

Advertisement

Udayavani is now on Telegram. Click here to join our channel and stay updated with the latest news.

Next