Advertisement
5 ಬಾರಿಯ ಗ್ರ್ಯಾನ್‌ಸ್ಲಾಮ್ ವಿಜೇತ ಶರಪೋವಾಗೆ ಎ. 24ರಿಂದ ಜರ್ಮನಿಯಲ್ಲಿ ಆರಂಭವಾಗಲಿರುವ ಪೋರ್ಷೆ ಗ್ರ್ಯಾನ್‌ಪ್ರಿ ಟೆನಿಸ್ ಟೂರ್ನಿಯಲ್ಲಿ ಆಡಲು ವೈಲ್ಡ್‌ಕಾರ್ಡ್ ಸಿಕ್ಕಿದೆ. ಹೀಗಾಗಿ ಎ. 26ರಂದು ಶರಪೋವಾ ಸಿಂಗಲ್ಸ್ ಆಡಲಿದ್ದಾರೆ.
ಈ ನಡುವೆ ಶರಪೋವಾ ನಡೆಗೆ ಶರಪೋವಾಗೆ ಅವಕಾಶ ನೀಡಿರುವುದಕ್ಕೆ ಯಾವುದೇ ಸಮಸ್ಯೆಯಿಲ್ಲ. ಆಕೆ ಅತ್ಯುತ್ತಮ ಆಟಗಾರ್ತಿ. ಆದರೆ ನಿಷೇಧದ ಅವಧಿ ಅಂತ್ಯವಾಗುವುದೇ ಎ. 26ರಂದು. ಟೂರ್ನಿ ಆರಂಭ ವಾಗುವುದು ಎ. 24ರಿಂದ. ಹೀಗಾಗಿ ಇದು ಇತರ ಆಟಗಾರರಿಗೆ ಮತ್ತು ಎಟಿಪಿಗೆ ಅಗೌರವ ಸೂಚಿಸಿದಂತೆ ಆಗುವ ಸಾಧ್ಯತೆಯಿದೆ ಎಂದು ಮಾಜಿ ವಿಶ್ವ ನಂ.1 ಆಟಗಾರ್ತಿ ಡೆನ್ಮಾರ್ಕ್‌ನ ಕ್ಯಾರೋಲಿನ್ ವೋಜ್ನಿಯಾಕಿ ಅಸಮಾ ಧಾನ ವ್ಯಕ್ತಪಡಿಸಿದ್ದಾರೆ.