Advertisement
ಪ್ರಥಮ ಪ್ರಾಶಸ್ತ್ಯದ ಮತಗಳಲ್ಲಿ 7933 ಮತಗಳ ನಿಗದಿತ ಕೋಟಾ ತಲುಪದಿದ್ದರು, ಅಲ್ಪ ಮುನ್ನಡೆ ಕಾಯ್ದುಕೊಂಡಿದ್ದ ಮರಿತಿಬ್ಬೇಗೌಡ, ದ್ವಿತೀಯ ಪ್ರಾಶಸ್ತ್ಯದ ಮತಗಳನ್ನು ಪಡೆದು ಗೆಲುವು ಸಾಧಿಸಿದರು. ಕಾಂಗ್ರೆಸ್ ಅಭ್ಯರ್ಥಿ ಎಂ.ಲಕ್ಷ್ಮಣ ಎರಡನೇ ಸ್ಥಾನ, ಬಿಜೆಪಿ ಅಭ್ಯರ್ಥಿ ಬಿ.ನಿರಂಜನಮೂರ್ತಿ ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟಿದ್ದಾರೆ.
Related Articles
Advertisement
ತೀವ್ರ ಪೈಪೋಟಿ: ಮತ ಎಣಿಕೆ ಆರಂಭದಿಂದ ಕೊನೆಯವರೆಗೂ ಮರಿತಿಬ್ಬೇಗೌಡ ಹಾಗೂ ಎಂ.ಲಕ್ಷ್ಮಣ ನಡುವೆ ತೀವ್ರ ಪೈಪೋಟಿ ಕಂಡುಬಂದರೂ ಅಂತಿಮವಾಗಿ 489 ಮತಗಳ ಮುನ್ನಡೆ ಕಾಯ್ದುಕೊಳ್ಳುವಲ್ಲಿ ಮರಿತಿಬ್ಬೇಗೌಡ ಸಫಲವಾದರು. ಉಳಿದಂತೆ ಪಕ್ಷೇತರರಾದ ಎ.ಎಚ್.ಗೋಪಾಲಕೃಷ್ಣ-7, ಡಿ.ಕೆ.ತುಳಸಪ್ಪ-2, ಡಾ.ಎಸ್.ಬಿ.ಎಂ.ಪ್ರಸನ್ನ-102, ಡಾ.ಮಹದೇವ್-295, ಎಂ.ಎನ್.ರವಿಶಂಕರ್-4, ಪಿ.ಎ.ಶರತ್‌ರಾಜು-6 ಮತಗಳನ್ನು ಪಡೆದರೆ, 13ಮತಗಳು ನೋಟಾ ಪಾಲಾಗಿತ್ತು.
ಚಲಾವಣೆಯಾಗಿದ್ದ 16696 ಮತಗಳಲ್ಲಿ 15,864 ಮತಗಳು ಕ್ರಮಬದ್ಧವಾಗಿದ್ದು, 882 ಮತಗಳು ತಿರಸ್ಕೃತಗೊಂಡಿದ್ದವು. ಎರಡನೇ ಪ್ರಾಶಸ್ತದ ಮತಗಳ ಎಣಿಕೆ ಜೊತೆಗೆ ಎಲಿಮಿನೇಷನ್ ಪ್ರಕ್ರಿಯೆ ಮೂಲಕ ಮತಗಳನ್ನು ವರ್ಗಾಯಿಸಿದಾಗ ಮರಿತಿಬ್ಬೇಗೌಡ ಅವರಿಗೆ 7170 ಮತಗಳು, ಎಂ.ಲಕ್ಷ್ಮಣ ಅವರಿಗೆ 6805 ಮತಗಳು ದೊರೆಯಿತು.
ಮೊದಲಿನಿಂದಲೂ ತೀವ್ರ ಪೈಪೋಟಿ ನೀಡುತ್ತಲೇ ಬಂದ ಎಂ.ಲಕ್ಷ್ಮಣ ಅವರಿಗಿಂತ ಮರಿತಿಬ್ಬೇಗೌಡ 365ಮತಗಳ ಮುನ್ನೆಡೆ ಕಾಯ್ದುಕೊಂಡರು. ಆದರೆ, ಗೆಲುವಿಗೆ ನಿಗದಿಪಡಿಸಿದ್ದ 7933 ಮತಗಳ ಕೋಟಾ ತಲುಪಲು ಇನ್ನೂ 763 ಮತಗಳ ಕೊರತೆ ಬಂದಿದ್ದರಿಂದ ಎಂ.ಲಕ್ಷ್ಮಣ ಮತಗಳನ್ನೇ ದ್ವಿತೀಯ ಪ್ರಾಶಸ್Âದ ಮತಗಳನ್ನಾಗಿ ವರ್ಗಾಯಿಸಲಾಯಿತು. ಅಂತಿಮವಾಗಿ 11022 ಮತಗಳೊಂದಿಗೆ ಮರಿತಿಬ್ಬೇಗೌಡ ಗೆಲುವಿನ ನಗೆ ಬೀರಿದರು.