Advertisement

ಮಾರ್ಗೋಳಿ : ಪಾಳುಬಿದ್ದ ಸಮಾಜ ಮಂದಿರ

09:11 PM Nov 22, 2020 | mahesh |

ಬಸ್ರೂರು: ಮಾರ್ಗೋಳಿ ಚರ್ಚ್‌ ಎದುರು ಇರುವ ಸಮಾಜ ಮಂದಿರ ಹಲವು ವರ್ಷಗಳಿಂದ ಮುಚ್ಚಿಯೇ ಇದ್ದು, ಈಗ ಶಿಥಿಲಗೊಂಡು ಪಾಳುಬಿದ್ದಿದೆ.

Advertisement

30 ವರ್ಷಗಳ ಹಿಂದೆ ನಿರ್ಮಾಣ
ಪ.ಜಾತಿ ಮತ್ತು ಹಿಂದುಳಿದ ವರ್ಗದವರ ಅನುಕೂಲಕ್ಕಾಗಿ ಸುಮಾರು ಮೂವತ್ತು ವರ್ಷಗಳ ಹಿಂದೆಯೇ ಇಲ್ಲಿ ಸಮಾಜ ಮಂದಿರ ನಿರ್ಮಾಣವಾಗಿತ್ತು. ಆದರೆ ಅನಂತರದಲ್ಲಿ ಇದರ ಬಳಕೆ ಹೆಚ್ಚಾಗಿ ಆಗಿಲ್ಲ. ಸದ್ಯ ಕಟ್ಟಡದ ಕಿಟಿಕಿಗಳು ಬಿದ್ದು ಹೋಗಿವೆ. ಬಾಗಿಲು, ಛಾವಣಿ ದುರ್ಬಲಗೊಂಡಿವೆ. ಮಂದಿರದ ಎದುರು ಬಾವಿ ಇದ್ದರೂ ನಿರುಪಯುಕ್ತವಾಗಿದೆ. ಮುಂಭಾಗದಲ್ಲಿ ಹುಲ್ಲು-ಗಿಡಗಂಟಿಗಳು ಬೆಳೆದಿವೆ. ಸಮಾಜ ಮಂದಿರ ಒಂದು ಪಾಳು ಬಿದ್ದ ಕಟ್ಟಡದ ರೀತಿ ಭಾಸವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಸಮಾಜಮಂದಿರವನ್ನು ತೆಗೆದು ಅಂಬೇಡ್ಕರ್‌ ಭವನ ನಿರ್ಮಿಸ ಬೇಕೆಂಬ ಒತ್ತಾಸೆ ಇದೆ.

ಅಂಬೇಡ್ಕರ್‌ ಭವನಕ್ಕೆ ಆಗ್ರಹ
ಬಸ್ರೂರು ಸುತ್ತಮುತ್ತಲ ಗ್ರಾಮಗಳಲ್ಲಿ ಅಂಬೇಡ್ಕರ್‌ ಭವನ, ಸಮುದಾಯ ಭವನಗಳಿದ್ದರೂ ಬಸ್ರೂರಿನಲ್ಲಿ ಯಾವ ಭವನವೂ ನಿರ್ಮಾಣವಾಗಿಲ್ಲ. ಇಲ್ಲಿ 36 ಸೆಂಟ್ಸ್‌ ಸರಕಾರಿ ಜಾಗವಿದ್ದು, ಈ ಸಮಾಜ ಮಂದಿರದ ದುಃಸ್ಥಿತಿಯನ್ನು ಕಂಡು ತಾಲೂಕು ದಲಿತ ಸಂಘರ್ಷ ಸಮಿತಿಯ ಸಂಚಾಲಕ ಗೋವಿಂದ ಮಾರ್ಗೋಳಿ ಅವರು ಈ ಸಮಾಜ ಮಂದಿರವನ್ನು “ಅಂಬೇಡ್ಕರ್‌ ಭವನ’ವನ್ನಾಗಿ ಮಾಡಬೇಕೆಂದು ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ. ಕುಂದಾಪುರ ಶಾಸಕರಿಗೂ ಈ ಬಗ್ಗೆ ಮನವಿ ಸಲ್ಲಿಸಿದ್ದಾರೆ.

ಶೀಘ್ರ ಭವನ ನಿರ್ಮಿಸಿ
ತಾಲೂಕು ದಲಿತ ಸಂಘರ್ಷ ಸಮಿತಿ ವತಿಯಿಂದ ಇಲ್ಲಿ “ಅಂಬೇಡ್ಕರ್‌ ಭವನ’ ನಿರ್ಮಾಣಕ್ಕಾಗಿ ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದೆ. ಕುಂದಾಪುರ ವಿಧಾನಸಭಾ ಸದಸ್ಯರ ಶಿಫಾರಸು ಪತ್ರವೂ ಬಂದಿರುತ್ತದೆ. ಶೀಘ್ರ ಅಂಬೇಡ್ಕರ್‌ ಭವನ ನಿರ್ಮಾಣವಾದರೆ ನಮಗೆ ಅನುಕೂಲ.
-ಗೋವಿಂದ ಮಾರ್ಗೋಳಿ, ಸಂಚಾಲಕ, ದ.ಸಂ.ಸ. ಕುಂದಾಪುರ

ಪ್ರಸ್ತಾವನೆ ಸಲ್ಲಿಕೆ
ಬಸ್ರೂರಿನ ಮಾರ್ಗೋಳಿಯಲ್ಲಿರುವ ಸಮಾಜ ಮಂದಿರವನ್ನು ಡಾ| ಬಿ.ಆರ್‌. ಅಂಬೇಡ್ಕರ್‌ ಭವನವನ್ನಾಗಿ ನಿರ್ಮಿಸುವ ಬಗ್ಗೆ ಪ್ರಸ್ತಾವವನ್ನು ಈಗಾಗಲೇ ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿಗಳಿಗೆ ಸಲ್ಲಿಸಲಾಗಿದೆ.
-ನಾಗೇಂದ್ರ ಜೆ., ಅಭಿವೃದ್ಧಿ ಅಧಿಕಾರಿ, ಗ್ರಾ.ಪಂ. ಬಸ್ರೂರು

Advertisement
Advertisement

Udayavani is now on Telegram. Click here to join our channel and stay updated with the latest news.

Next