Advertisement
ಮಂಗಳೂರಿನ ರೋಮನ್ ಕೆಥೋಲಿಕ್ ಕುಟುಂಬದಲ್ಲಿ 1942ರ ಎಪ್ರಿಲ್ 14ರಲ್ಲಿ ಜನಿಸಿದ ಮಾರ್ಗರೇಟ್ ಆಳ್ವ, ಬೆಂಗಳೂರಿನ ಮೌಂಟ್ ಕಾರ್ಮೆಲ್ ಕಾಲೇಜಿನಲ್ಲಿ ಬಿಎ, ಗವರ್ನ್ಮೆಂಟ್ ಲಾ ಕಾಲೇಜಿನಲ್ಲಿ ಕಾನೂನು ಪದವಿ ಪಡೆದರು. ತಮ್ಮ ಶಾಲಾ-ಕಾಲೇಜಿನ ದಿನಗಳಿಂದಲೇ ಅವರಲ್ಲಿ ನಾಯಕತ್ವ ಗುಣ ಬೆಳೆದಿತ್ತು. ಚರ್ಚಾ ಸ್ಪರ್ಧೆಗಳಲ್ಲಿ ಆಳ್ವÌರದ್ದು ಎತ್ತಿದ ಕೈ. ಹಲವು ವಿದ್ಯಾರ್ಥಿ ಚಳವಳಿಗಳಲ್ಲೂ ಪಾಲ್ಗೊಂಡು ಸೈ ಎನಿಸಿಕೊಂಡಿದ್ದರು.
Related Articles
Advertisement
ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ದುಡಿದವರುಶಿರಸಿ: ಉಪರಾಷ್ಟ್ರಪತಿ ಅಭ್ಯರ್ಥಿಯಾಗಿ ಮಾರ್ಗರೇಟ್ ಆಳ್ವ ಹೆಸರು ಪ್ರಕಟವಾಗುತ್ತಿದ್ದಂತೆ ಉತ್ತರ ಕನ್ನಡದ ಹಿರಿಯ ಕಾಂಗ್ರೆಸ್ಸಿಗರಲ್ಲೂ ಹರ್ಷ ಗರಿಗೆದರಿದೆ. 1999ರಲ್ಲಿ ಉತ್ತರ ಕನ್ನಡದಿಂದ ಲೋಕಸಭೆಗೆ ಆಯ್ಕೆ ಆಗಿದ್ದ ಮಾರ್ಗರೇಟ್ ಅವರು ಅನಂತರದ ಸಂಸತ್ತಿನ ಚುನಾವಣೆಯಲ್ಲಿ ಬಿಜೆಪಿಯ ಅನಂತ ಕುಮಾರ ಹೆಗಡೆ ಎದುರು ಸೋಲುಂಡರು. ಆದರೂ ಸರಳತೆಯಿಂದಲೇ ಜಿಲ್ಲೆಯ ಸಂಪರ್ಕ ಇಟ್ಟುಕೊಂಡು ಅನೇಕ ಅಭಿವೃದ್ಧಿಗಳಿಗೂ ಜತೆಯಾಗಿದ್ದವರು. ಇಲ್ಲಿನ ಸಂಸದೆಯಾಗಿದ್ದಾಗ ಬಸ್ ನಿಲ್ದಾಣಗಳಲ್ಲಿ ಶೌಚಾಲಯಗಳನ್ನು ನಿರ್ಮಿಸಿ ಪ್ರಯಾಣಿಕರ ಸಮಸ್ಯೆಗೆ ಪರಿಹಾರ ಸೂಚಿಸಿದ್ದರು. ಅನೇಕ ರಸ್ತೆ, ಸೇತುವೆ, ಸಮುದಾಯ ಭವನ ಕಟ್ಟಿಸಿದ್ದರು. ಇಂದಿಗೂ ಅದರ ಉದ್ಘಾಟನೆಯ ಫಲಕಗಳು ಜಿಲ್ಲೆಯಲ್ಲಿವೆ. ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಕೆಲಸ ಮಾಡಿದ ಮಾರ್ಗರೇಟ್, ಗೌಳಿ, ಸಿದ್ಧಿ ಜನಾಂಗವನ್ನು ಹಿಂದುಳಿದ ವರ್ಗಗಳಿಗೆ ಸೇರಿಸಬೇಕು ಎಂಬ ಪ್ರಯತ್ನ ಮಾಡಿದ್ದರು. ವಿಶ್ವ ಮಟ್ಟದ ಮಹಿಳಾ ದನಿಯಾಗಿ ನೆಲ್ಸನ್ ಮಂಡೇಲಾ ಪ್ರಶಸ್ತಿ ಕೂಡ ಪಡೆದಿದ್ದಾರೆ. ಅವರ ಬಯೋಗ್ರಫಿಯಲ್ಲೂ ಜಿಲ್ಲೆಯ ಒಡನಾಟ ಬಿಚ್ಚಿಟ್ಟಿದ್ದಾರೆ. ಇಲ್ಲಿನ ಅಡಿಕೆ ಬೆಳೆಗಾರರ ಸಮಸ್ಯೆಯಿಂದ ಹಿಡಿದು ಎಲ್ಲವನ್ನೂ ಅರಿತಿದ್ದವರು ಮಾರ್ಗರೇಟ್.
ಇವರ ಮಗ ನಿವೇದಿತ್ ಆಳ್ವ ಕರಾವಳಿ ಅಭಿವೃದ್ಧಿ ಪ್ರಾಧಿ ಕಾರದ ಈ ಹಿಂದಿನ ಅಧ್ಯಕ್ಷರಾಗಿ ಕೂಡ ಅನೇಕ ಅಭಿವೃದ್ಧಿ ಕಾರ್ಯ ಮಾಡಿದ್ದಾರೆ. ಅವರ ಮಾವ ಜೋಕಿಂ ಆಳ್ವ ಉತ್ತರ ಕನ್ನಡದ ಜಿಲ್ಲೆಯ ಸಂಸದರಾಗಿದ್ದರು ಎಂಬುದೂ ಉಲ್ಲೇಖನೀಯ.