Advertisement

ಕೊಲೆಯ ಜಾಡು ಹಿಡಿದು…; ‘ಮರ್ದಿನಿ’ಚಿತ್ರ ವಿಮರ್ಶೆ

03:21 PM Sep 18, 2022 | Team Udayavani |

ಕನ್ನಡದಲ್ಲಿ ಈಗಾಗಲೇ ಸಾಕಷ್ಟು ಮರ್ಡರ್‌ ಮಿಸ್ಟರಿ ಚಿತ್ರಗಳು ಬಂದಿವೆ. ಪ್ರತಿ ಚಿತ್ರಗಳು ಕೂಡಾ ಹೊಸ ಕಥೆಗಳನ್ನು ಹೇಳಲು ಪ್ರಯತ್ನಿಸಿವೆ. ಈಗ ಆ ಸಾಲಿಗೆ ಸೇರುವ ಮತ್ತೂಂದು ಚಿತ್ರ “ಮರ್ದಿನಿ’. ಲೇಡಿ ಕಾಪ್‌ ಕಥೆಯಾಧಾರಿತ ಆ್ಯಕ್ಷನ್‌, ಸಸ್ಪೆನ್ಸ್‌ -ಥ್ರಿಲ್ಲರ್‌ ಚಿತ್ರವಾಗಿ “ಮರ್ದಿನಿ’ ಮಾಸ್‌ ಪ್ರಿಯರಿಗೆ ಖುಷಿ ನೀಡುತ್ತದೆ.

Advertisement

ಚಿತ್ರದ ಕಥೆಯ ಬಗ್ಗೆ ಹೇಳುವುದಾದರೆ, ಆಕೆ ಓರ್ವ ಸೂಪರ್‌ ಕಾಪ್‌. ಕ್ರೈಂ ಜಗತ್ತಿನ ಪುಂಡರ ಹುಟ್ಟಡಗಿಸಿ ನಗರದ ಶಾಂತಿ ಕಾಪಾಡುವಲ್ಲಿ ಆಕೆಯ ಹೆಸರೇ ಮೇಲುಗೈ. ತನ್ನ ಕರ್ತವ್ಯ ನಿಷ್ಠೆಗೆ ಹೆಸರಾದ ಲೇಡಿ ಸೂಪರ್‌ ಕಾಪ್‌. ಬೆಂಗಳೂರಿನಿಂದ ಮಲೆನಾಡ ಹೆಬ್ಟಾಗಿಲು ಚಿಕ್ಕಮಗಳೂರಿಗೆ ವರ್ಗವಾಗಿ ಹೋಗುವ ಮರ್ದಿನಿ, ಮೊದಲ ದಿನವೇ ಎದುರಾಗುವ ನಿಗೂಢ ಕೊಲೆ ಪ್ರಕರಣವನ್ನು ಭೇದಿಸುವಲ್ಲಿ ಮುಂದಾಗುತ್ತಾಳೆ. ಕೊಲೆ ಪ್ರಕರಣದ ಹಾದಿಯಲ್ಲಿ ಮರ್ದಿನಿಗೆ ಎದುರಾಗುವ ಸವಾಲುಗಳು, ಎಲೆಕ್ಷನ್‌ ಕಂಟಕ… ಇವುಗಳನ್ನು ಮೀರಿ ಹೇಗೆ ಕೊಲೆಗಾರನನ್ನು ಪತ್ತೆ ಹಚ್ಚುತ್ತಾಳೆ ಎಂಬುದೇ ಚಿತ್ರ ಕಥೆ.

ಸಾಮಾನ್ಯವಾಗಿ ಸಸ್ಪೆನ್ಸ್‌ ಥ್ರಿಲ್ಲರ್‌ ಜಾನರ್‌ ಹಾದಿಯಲ್ಲಿ ಸಾಗುವ ಕಥೆಯು ಮೊದಲ ಭಾಗದ ಕೊನೆಯಲ್ಲಿ ರೋಚಕ ತಿರುವು ಪಡೆದುಕೊಳ್ಳುತ್ತದೆ. ಕಥೆಯ ನಿಜವಾದ ಆಳವನ್ನು ಎರಡನೇ ಭಾಗದಲ್ಲಿ ನೋಡಬಹುದು. ಇನ್ನು ನಿರ್ದೇಶಕ ಕಿರಣ್‌ ಕುಮಾರ್‌ ಅವರ ಎರಡನೇ ಚಿತ್ರ ಇದಾಗಿದ್ದು, ಸಸ್ಪೆನ್ಸ್‌ ಥ್ರಿಲ್ಲರ್‌ ಕಥೆಯ ಪ್ರಯತ್ನ ಮೆಚ್ಚುವಂತದ್ದು. ಚಿತ್ರದಲ್ಲಿ ಏನೋ ಮಿಸ್ಸಿಂಗ್‌ ಅನ್ನುವ ಹೊತ್ತಿಗೆ ಕಥೆ ತಿರುವ ಪಡೆದು ಕೊಳ್ಳುತ್ತದೆ. ಚಿತ್ರದ ಸ್ಕ್ರಿನ್‌ ಪ್ಲೇ ಇನ್ನಷ್ಟು ಉತ್ತಮವಾಗಿ ಸುವ ಅವಕಾಶಗಳಿದ್ದವು. ಕಥೆಯಲ್ಲಿ ರೋಚಕಥೆಯನ್ನು ಹಿಡಿದಿಟ್ಟುಕೊಳ್ಳುವ ನಿರ್ದೇಶಕರ ಕೆಲಸ ಒಪಿಕೊಳ್ಳುವಂತದ್ದು. ಚಿತ್ರ ಚಿಕ್ಕಮಗಳೂರಿನ ಬೆಟ್ಟ, ಗುಡ್ಡ, ಅರಣ್ಯ ಪ್ರದೇಶಗಳ ಲೊಕೇಷನ್‌ಲ್ಲಿ ಮೂಡಿಬಂದಿದ್ದು, ಒಂದು ಉತ್ತಮ ಪ್ರಯತ್ನ ಎನ್ನಬಹುದು.

ಇನ್ನು ಚಿತ್ರದ ನಾಯಕಿ ರಿತನ್ಯಾ ಹೂವಣ್ಣ ತಮ್ಮ  ಮೊದಲ ಚಿತ್ರದಲ್ಲೇ ಆ್ಯಕ್ಷನ್‌ ಸೀನ್‌ ಗಳಲ್ಲಿ ಮಿಂಚಿದ್ದು, ಪಾತ್ರಕ್ಕೆ ನ್ಯಾಯ ಒದಗಿಸಲು ಪ್ರಯತ್ನಿಸಿದ್ದಾರೆ. ಉಳಿದಂತೆ ಮನೋಹರ್‌, ಅಕ್ಷಯ್‌ ಗೌಡ, ಇಂಚರ ಜೋಶಿ, ರಚನಾ ಎಸ್‌ ಪಾತ್ರಗಳು ಕಥೆಗೆ ಪೂರಕವಾಗಿದ್ದು, ಕಲಾವಿದರು ತಮ್ಮ ಪಾತ್ರಕ್ಕೆ ಜೀವ ತುಂಬಿದ್ದಾರೆ. ಹಾಸ್ಯ ಕಲಾವಿದೆ ಸುಶ್ಮಿತಾ ಸೋನು ಕಥೆಯಲ್ಲಿ ನಗಿಸುವ ಪ್ರಯತ್ನ ಮಾಡುತ್ತಾರೆ.

ವಾಣಿ ಭಟ್ಟ

Advertisement
Advertisement

Udayavani is now on Telegram. Click here to join our channel and stay updated with the latest news.

Next